ದ್ವೇಷ ಮರೆತು ಅಂಬಿಗೆ ಅಂತಿಮ ನಮನ ಸಲ್ಲಿಸಲು ಬರ‌್ತಾರಾ ನಟಿ ರಮ್ಯಾ?

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್‌ವುಡ್‌ನ ಹಿರಿಯಣ್ಣನಂತೆ ಇದ್ದ ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ವಿಧಿವಶರಾದ ಬಳಿಕ ಲಕ್ಷಾಂತರ ಜನ ಅಂತಿಮ ದರ್ಶನ ಪಡೆದು ವಿದಾಯ ಹೇಳಿದ್ದಾರೆ. ಆದರೆ ಅಂಬಿ ಪಾರ್ಥಿವ ಶರೀರ ದರ್ಶನಕ್ಕೆ ಮಾಜಿ ಸಂಸದೆ ಹಾಗೂ ಎಐಸಿಸಿ ಮಾಧ್ಯಮ‌ ವಿಭಾಗದ ಮುಖ್ಯಸ್ಥೆ ರಮ್ಯಾ ಇನ್ನೂ ಆಗಮಿಸಿಲ್ಲ. ನಟಿಯಾಗಿದ್ದ ರಮ್ಯಾ ಸಂಸದೆ ಆಗುವ ಸಂದರ್ಭದಲ್ಲಿ ಅಂಬರೀಶ್ ಶ್ರೀರಕ್ಷೆ ಇತ್ತು. ರಮ್ಯಾ ಮೊದಲ ಬಾರಿ ಸಂಸದರಾಗುವಾಗ ಅಂಬರೀಶ್ ಸಹಾಯ ಮಾಡಿದ್ರು. ಎರಡನೇ ಬಾರಿ ಸ್ಪರ್ಧೆ ಮಾಡಿದಾಗ ಅಂಬರೀಶ್ ಅಸಹಕಾರ ಮಾಡಿದ್ರು ಎಂದು ಆರೋಪ ಮಾಡಿದ್ರು ಅಲ್ಲಿಂದ ಇಲ್ಲೀವರೆಗೂ ಸ್ವಲ್ಪ ಸಂಬಂಧ ಹದಗೆಟ್ಟಿತ್ತು.

ನನ್ನ ಗೆಲುವಿಗೆ ಅಸಹಕಾರ ಮಾಡಿದ್ರು ಎಂದು ಆರೋಪಿಸಿದ್ದ ರಮ್ಯಾ ಅಂತರ ಕಾಯ್ದುಕೊಂಡಿದ್ದರು. ಮೊನ್ನೆ ಅಂಬರೀಶ್ ನಿಧನದ ಬಳಿಕ ಕೇವಲ ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ರಮ್ಯಾ, ಅಂಕಲ್ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ರು. ಆದ್ರೆ ಇಲ್ಲೀವರೆಗೂ ಅಂಬಿ ಅಂತಿಮ‌ ದರ್ಶನದಲ್ಲಿ ಭಾಗವಹಿಸಿರಲಿಲ್ಲ. ಪ್ರತಿಕ್ರಿಯೆ ಪಡೆಯಲು ಸಂಪರ್ಕಕ್ಕೂ ಸಿಗುತ್ತಿಲ್ಲ. ರಮ್ಯಾ ಮೇಲೆ ಅಂಬರೀಶ್‌ಗೆ ಭಾರೀ ಪ್ರೀತಿಯಿತ್ತು. ರಮ್ಯಾ ನಟಿ ಆಗುವ ಜೊತೆಗೆ ಸಂಸದೆಯಾಗಲೂ ಸಹ ಅಂಬರೀಶ್ ಕೆಲಸ ಮಾಡಿದ್ರು. ನಮ್ಮೂರ ಹುಡ್ಗಿ ಎಂದು ರಮ್ಯಾಗೆ ಅಂಬರೀಶ್ ಗೌರವ ನೀಡುತ್ತಿದ್ರು..

ರಾಜಕಾರಣದಲ್ಲಿ ಕೆಲವೊಮ್ಮೆ ಸ್ನೇಹಿತರಾಗಿದ್ದವರು, ಇನ್ನೊಮ್ಮೆ ವಿರೋಧಿಗಳಾಗಿರುತ್ತಾರೆ. ಆ ರೀತಿ ಅಂಬರೀಶ್ ರಮ್ಯಾ ಗೆಲುವಿಗೆ ಸಹಕಾರ ನೀಡದೇ ಇರಬಹುದು. ರಮ್ಯಾ ಆರೋಪ ಸರಿಯೇ ಇರಬಹುದು. ಆದರೆ ಸಾವಿನ ವಿಚಾರದಲ್ಲಿ ರಮ್ಯಾ ದ್ವೇಷ ಸಾಧನೆ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ರಾಜಕಾರಣಿಯಾಗಿ ಅಂಬರೀಶ್ ವಿರುದ್ಧ ದ್ವೇಷ ಸಾಧನೆ ಮಾಡಿದರೂ ಸಹ ಓರ್ವ ಸ್ಯಾಂಡಲ್‌ವುಡ್ ನಟಿಯಾಗಿ ಅಂತಿಮ ದರ್ಶನ ಪಡೆದಿದ್ರೆ ರಮ್ಯಾ ದೊಡ್ಡವರಾಗಿ ಉಳಿದುಕೊಳ್ತಿದ್ರು. ಇನ್ನೂ ಎರಡ್ಮೂರು ಗಂಟೆಗಳ ಕಾಲಾವಾಕಾಶವಿದ್ದು ರಮ್ಯಾ ಬರ್ತಾರಾ ಅನ್ನೋ ಪ್ರಶ್ನೆಯನ್ನು ಹುಟ್ಟುಹಾಕಿದೆ.

Leave a Reply