ಅಂಬಿ ನೋಡಲು ರಮ್ಯಾ ಬಾರದಿರುವುದಕ್ಕೆ ಕಾರಣ ಬಿಚ್ಚಿಟ್ಟ ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ರಮ್ಯಾ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾಲಿಗೆ ಮೇಜರ್ ಪ್ರಾಬ್ಲಂ ಆಗಿದೆ. ಅವರಿಗೆ ನಡೆಯುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಅವರು ಅಂಬರೀಶ್ ಆಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಾನು ಕೂಡ ಫೋನ್ ಮಾಡಿ ಅಂಬರೀಶ್ ಅಂತ್ಯಕ್ರಿಯೆಗೆ ಬರುವಂತೆ ರಮ್ಯಾ ಅವರನ್ನು ಕರೆದೆ. ಅದಕ್ಕೆ ಅವರು, ‘ಇಲ್ಲ ಅಂಕಲ್ ಬರುವುದಕ್ಕೆ ಆಗಲ್ಲ, ಜಾರಿ ಬಿದ್ದು ಕಾಲಿಗೆ ತುಂಬಾ ನೋವಾಗಿದೆ. ಆಸ್ಟಿಯೋಕ್ಲ್ಯಾಸ್ಟೋಮಾದಿಂದ ಬಳಲುತ್ತಿದ್ದೇನೆ. ಓಡಾಡಲು ಕೂಡ ಆಗುತ್ತಿಲ್ಲ’ ಅಂದರು. ಹೀಗಾಗಿ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಿಲ್ಲ ಎಂದು ವಿಧಾನಸೌಧದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದರು.

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರದ ಬಗ್ಗೆ ಪತ್ರಕರ್ತರು ಪ್ರಸ್ತಾಪಿಸಿದಾಗ, ವಿಷ್ಣುವರ್ಧನ್ ಸ್ಮಾರಕವನ್ನೂ ಕಂಠೀರವ ಸ್ಟುಡಿಯೋ ಆವರಣಕ್ಕೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೇವಲ ಮಾಧ್ಯಮದ ಸೃಷ್ಟಿ ಎಂದರು.

ಒಂದೊಮ್ಮೆ ಯಾರಾದರೂ ಅಲ್ಲಿ ಸ್ಮಾರಕ ‌ನಿರ್ಮಾಣ ಮಾಡುವ ಬಗ್ಗೆ ಬೇಡಿಕೆ ಇಟ್ಟಿದ್ದರೆ ಅದರ ಬಗ್ಗೆ ಮಾತನಾಡಲು ನಾನು ಅಧಿಕೃತ ವ್ಯಕ್ತಿಯಲ್ಲ ಎಂದು ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು.

ಈ ವಿಚಾರವನ್ನು ತಪ್ಪಾಗಿ ಅರ್ಥೈಸುವುದು ಬೇಡ. ಇದರಲ್ಲಿ ಅನ್ಯ ಉದ್ದೇಶ ಇಲ್ಲ ಎಂದೂ ತಿಳಿಸಿದರು.

Leave a Reply