ರಾಜಸ್ಥಾನದ ಆಡಳಿತ ವಿರೋಧಿ ಅಲೆಗೆ ಬಿಜೆಪಿ ಭರ್ಜರಿ ಪ್ರಣಾಳಿಕೆ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್:

ಆಡಳಿತ ವಿರೋಧಿ ಅಲೆ ಮೆಟ್ಟಿನಿಂತು ರಾಜಸ್ಥಾನದಲ್ಲಿ ಮತ್ತೇ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿರುವ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಮಂಗಳವಾರ ಕೇಂದ್ರ ಸಚಿವ ಅರುಣ್ ಜೇಟ್ಲಿ, ಮುಖ್ಯಮಂತ್ರಿ ವಸುಂದರಾ ರಾಜೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜೆ, ‘ಬಿಜೆಪಿ ಸರ್ಕಾರ ಕಳೆದ 4.5 ವರ್ಷದಲ್ಲಿ ಕಳೆದ ಬಾರಿ ನೀಡಲಾಗಿದ್ದ ಆಶ್ವಾಸನೆಗಳನ್ನು ಶೇ.95ರಷ್ಟು ಈಡೇರಿಸಿದೆ. ಕಳೆದ ಬಾರಿ ನೀಡಿದ್ದ 650 ಭರವಸೆಗಳ ಪೈಕಿ 630 ಭರವಸೆಗಳನ್ನು ಈಡೇರಿಸಿದ್ದೇವೆ’ ಎಂದು ತಮ್ಮ ಸರ್ಕಾರದ ಬೆನ್ನು ತಟ್ಟಿಕೊಂಡರು.

ಪ್ರಣಾಳಿಕೆ ಮುಖ್ಯಾಂಶಗಳು…

  • ಐದು ವರ್ಷಗಳಲ್ಲಿ ಖಾಸಗಿ ವಲಯದಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ.
  • ಸರಕಾರಿ ಕ್ಷೇತ್ರದಲ್ಲಿ ಪ್ರತಿ ವರ್ಷ 30000 ಉದ್ಯೋಗ.
  • 21 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 5 ಸಾವಿರ ಭತ್ಯೆ.
  • ಬಾಲಕಿಯರು ಶಾಲೆಗೆ ಕರೆತರಲು ಅವರಿಗೆ ಸರಕಾರದಿಂದ ಊಟ, ಆರೋಗ್ಯ ತಪಾಸಣೆ ಮತ್ತು ಲ್ಯಾಪ್‌ಟಾಪ್ ವಿತರಣೆ.
  • ಶಾಲೆ ಮುಗಿದ ನಂತರ ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ 50 ಸಾವಿರ ಹಣ.
  • ಮಹಿಳೆಯರ ಸುರಕ್ಷತೆಗಾಗಿ ಲೈಂಗಿಕ ಕಿರುಕುಳದ ವಿರುದ್ಧ ಕಠಿಣ ಕಾನೂನು.
  • ರೈತರ ಸಾಲ ಮನ್ನಾ, ರೈತರಿಗೆ ಅಂಗವೈಕಲ್ಯ, ಅನಾರೋಗ್ಯ ಅಥವಾ ಅಪಘಾತಕ್ಕೆ ಸಂಬಂಧಿಸಿದ ವಿಮಾ ಯೋಜನೆ ಜಾರಿ.
  • ಬೆಂಬಲ ಬೆಲೆಗಾಗಿ 200 ಕೋಟಿ ಆರಂಭಿಕ ಅನುದಾನ ಬಿಡುಗಡೆ.

Leave a Reply