ಮೋದಿಯವರೆ ಸ್ವಾಮಿನಾಥನ್ ವರದಿ ಜಾರಿ ಮಾಡದ ಕಾಂಗ್ರೆಸ್ ಟೀಕಿಸುವ ಬದಲು ನೀವೇ ಜಾರಿ ಮಾಡಬಾರದೇಕೆ?

ಡಿಜಿಟಲ್ ಕನ್ನಡ ಟೀಮ್:

‘ಸ್ವಾಮಿನಾಥನ್ ವರದಿ ಸಲ್ಲಿಕೆಯಾಗಿ ಹತ್ತು ವರ್ಷಗಳೇ ಆಗಿವೆ. ಮೇಡಂ ನಿಯಂತ್ರಣದಲ್ಲಿದ್ದ ಯುಪಿಎ ಸರ್ಕಾರ ಈ ವರದಿ ಶಿಫಾರಸ್ಸುಗಳನ್ನು ಕಡೆಗಣಿಸಿತ್ತು. ಆಗಲೇ ಈ ವರದಿ ಜಾರಿಯಾಗಿದ್ದರೆ ರೈತರು ಇಂದಿನ ದುಸ್ಥಿತಿಯಲ್ಲಿ ಇರುತ್ತಿರಲಿಲ್ಲ’ ಇದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜಸ್ಥಾನ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ವಿರುದ್ಧ ಮಾಡಿದ ಟೀಕೆ.

ಆದರೆ…
ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಕ್ಷಾಂತರ ರೈತರು ಸ್ವಾಮಿನಾಥನ್ ವರದಿ ಜಾರಿ, ಸಾಲಮನ್ನಾ, ಉತ್ತಮ ಬೆಂಬಲ ಬೆಲೆ ಹಾಗೂ ಕೃಷಿ ಚರ್ಚೆಗೆ ವಿಶೇಷ ಸಂಸತ್ ಅಧಿವೇಶನ ನಡೆಸುವ ಬೇಡಿಕೆ ಇಟ್ಟು ಎರಡು ದಿನಗಳ ಮುಷ್ಕರ ನಡೆಸುತ್ತಿದ್ದಾರೆ.

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾನಿರತ ರೈತರು ದೆಹಲಿ, ಹಸ್ರತ್ ನಿಜಾಮುದ್ದೀನ್, ಬಿಜ್ವಾಸನ್, ಸಬ್ಜಿ ಮಂಡಿ ನಿಲ್ದಾಣ, ಎಎನ್ ವಿಟಿ ನಿಲ್ದಾಣ ಮತ್ತು ಮಂಜು ಕ ಟಿಕ್ಲಾದಿಂದ ರಾಮ್ ಲೀಲಾ ಮೈದಾನದವರೆಗೆ ಮೆರವಣಿಗೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳ ಒಂದು ಲಕ್ಷಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸುತ್ತಿದ್ದು, ಅದರಲ್ಲಿ ತಮಿಳುನಾಡಿನ ಸಾವಿರಾರು ರೈತರು ತಲೆ ಬುರುಡೆ ಹಾಗೂ ಮೂಳೆ ಹಿಡಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.

2022ರ ವೇಳೆಗೆ ರೈತರ ಆದಾಯ ಡಬಲ್ ಮಾಡುವ ಭರವಸೆ ನೀಡುತ್ತಿರುವ ಮೋದಿ ಅವರು ಸ್ವಾಮಿನಾಥನ್ ವರದಿ ಜಾರಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವ ಬದಲು ತಮ್ಮ ಸರ್ಕಾರ ಎ ವರದಿ ಶಿಫಾರಸ್ಸು ಜಾರಿ ಮಾಡಿದರೆ ಜನರು ಮೆಚ್ಚುತ್ತಾರೆ. ಕೇವಲ ಭಾಷಣಕ್ಕೆ ಹಾಗೂ ಟೀಕಾಸ್ತೃಕ್ಕೆ ಆ ವರದಿ ಸೀಮಿತವಾಗದೆ ರೈತರ ಹಿತಕ್ಕಾಗಿ ಜಾರಿಯಾಗುವ ಅಗತ್ಯತೆ ಇದೆ.

Leave a Reply