ರಾಮುಲು ಆಪ್ತರ ಮೂಲಕ ಆಪರೇಷನ್ ಕಮಲ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕೀಯದಲ್ಲಿ ಮತ್ತೇ ಆಪರೇಷನ್ ಕಮಲ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕ ಶ್ರೀರಾಮುಲು ಆಪ್ತನಂತೆ ಬಿಂಬಿಸಿಕೊಂಡು ವ್ಯಕ್ತಿಯೊಬ್ಬ, ಉದ್ಯಮಿಯೊಂದಿಗೆ ಆಪರೇಷನ್ ಕಮಲ ಬಗ್ಗೆ ಚರ್ಚೆ ನಡೆಸಿದ್ದು, ಈ ಚರ್ಚೆಯ ಆಡಿಯೋ ಸಂಭಾಷಣೆ ಸೋರಿಕೆಯಾಗಿದೆ.

ಉದ್ಯಮಿಯನ್ನು ದುಬೈ ಮೂಲದವ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ರಾಮುಲು ಆಪ್ತ ಮಂಜು ಎಂದು ಹೇಳಲಾಗಿದೆ. ಈ ಸಂಭಾಷಣೆಯಲ್ಲಿ ಇವರಿಬ್ಬರು ಬಿಜೆಪಿ ಸೇರುವ ಶಾಸಕರಿಗೆ ಎಷ್ಟು ಹಣ ನೀಡಬೇಕು. ಯಾವಾಗ ಮತ್ತು ಹೇಗೆ ಹಣ ತಲುಪಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ.

ಇನ್ನು ಅವರ ಸಂಭಾಷಣೆಯಲ್ಲಿ ಕಾಂಗ್ರೆಸ್​ ನ ಹತ್ತು ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಅವರ ಹೆಸರನ್ನು ಹೇಳಲಾಗಿದೆ. ಮತ್ತು ಈ ಎಲ್ಲ ಶಾಸಕರಿಗೆ ಒಬ್ಬೊಬ್ಬರಿಗೆ 20ರಿಂದ 25 ಕೋಟಿ ಹಣ ಹಾಗೂ ಕ್ಯಾಬಿನೆಟ್​ನಲ್ಲಿ ಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಆಡಿಯೋ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಆಡಿಯೋ ಬಗ್ಗೆ ಬಿಜೆಪಿ ನಾಯಕರು ಸ್ಪಷ್ಟನೆ ನೀಡಬೇಕಿದೆ.

Leave a Reply