ಬಾಬರ್ ಹೆಸರಲ್ಲಿ ರಾಮ ಮಂದಿರಕ್ಕೆ ಅಡ್ಡಿ: ಜನಾಗ್ರಹ ಸಭೆಯಲ್ಲಿ ಜಿತೇಂದ್ರನಾಥ ಗುರುಮನೋಹರನಾಥರ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

‘ದೇಶದ ಮಹಿಳೆಯರ ಮಾನ ಹರಾಜು ಮಾಡಿದ್ದ ಬಾಬರ್ ಭಾರತೀಯನಲ್ಲ.‌ ಅವನ‌‌ ಹೆಸರಿನಲ್ಲಿ ಕೆಲ‌‌ ಮುಸಲ್ಮಾ ನರು ಕಮಿಟಿ‌ ರಚಿಸಿಕೊಂಡು ರಾಮ ಮಂದಿರಕ್ಕೆ ಅಡ್ಡಿಪಡಿಸುತ್ತಿದ್ದಾರೆ…’ ಇದು‌ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಅಮರಾವತಿಯ ಶ್ರೀ 108 ಜಿತೇಂದ್ರನಾಥ ಗುರುಮನೋಹರನಾಥ ಮಹಾರಾಜರು ವ್ಯಕ್ತಪಡಿಸಿದ ಆಕ್ರೋಶ.

ಮಂಗಳವಾರ ವಿಶ್ವ ಹಿಂದೂ ಪರಿಷದ್, ಭಜರಂಗದಳ ವತಿಯಿಂದ ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಲೇಬೇಕು ಎಂದು ಆಯೋಜಿಸಲಾಗಿದ್ದ ಬೃಹತ್‌ ಜನಾಗ್ರಹ ಸಭೆಯನ್ನು ಉದ್ದೇಶಿಸಿ‌ ಮಾತನಾಡಿದ ಅವರು ಹೇಳಿದ್ದಿಷ್ಟು…

ಬಾಬರ್‌ನ ಹೆಸರನಲ್ಲಿ ನಮ್ಮ‌ ದೇಶವನ್ನು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಮಾಡಿದ ಬಾಬರ್ ಹೆಸರಿನಲ್ಲಿ ಕಮಿಟಿ ಮಾಡಿಕೊಂದವರ ಜತೆ ಹಿಂದೂಗಳು ಮಾತನಾಡುವುದಿಲ್ಲ. ನಾವು ಮಾತನಾಡುವುದು ನ್ಯಾಯಾಲಯ ಹಾಗೂ ಕೇಂದ್ರ ಸರಕಾರಕ್ಕೆ ನಮ್ಮ ಆಗರಹದ ಹೇಳುತ್ತೇವೆ.

ಅಯೋಧ್ಯೆಯ ಬಾಬರಿ ಮಸೀದಿಯನ್ನು ಲಕ್ಷಾಂತರ ಹಿಂದುಗಳು ಸೇರಿ ಸುತ್ತಿಗೆಯಿಂದ ಹೊಡೆದು ಕೆಡವಿದೆವು. ಬಾಬರಿ ಮಸೀದಿ ಬೇರೆ ರಾಷ್ಟ್ರದಲ್ಲಿದೆ ಎಂದು ಅದನ್ನು‌ ಹಿಂದೂ‌ರಾಷ್ಟ್ರದಲ್ಲಿ‌ ನಿರ್ಮಾಣ‌ ಮಾಡಲು ಹೋಗುವುದು ಎಷ್ಟು ಸರಿ. ನಮ್ಮ ರಾಜಕಾರಣಿಗಳು ರಾಮನ ಮಂದಿರ ನಿರ್ಮಾಣ ಮಾಡಲು ಏಕೆ ಹಿಂದೆಟ್ಟು‌ ಹಾಕುತ್ತಿದ್ದಾರೆ ಎನ್ನುವದು ತಿಳಿಯುತ್ತಿಲ್ಲ.

ದೀಪಾವಳಿ ವೇಳೆ ರಾತ್ರಿ ಎರಡು ಗಂಟೆಗಳು ಮಾತ್ರ ಪಟಾಕಿ ಹೊಡೆಲು ಹೇಳುತ್ತಾರೆ. ಆದರೆ ರಾಮ ಮಂದಿರದ ನಿರ್ಮಾಣದ ವಿಚಾರದಲ್ಲಿ ಸಂಸತ್ತಿನಲ್ಲಿ ವಿರೋಧ ಮಾಡುತ್ತಿದ್ದಾರೆ.
ನ್ಯಾಯಾಲಯದ ‌ಗೌರವವನ್ನು ನಾವು ಕಾಪಾಡುತ್ತೇವೆ. ಆದರೆ ನ್ಯಾಯಾಲಯ ರಾಮನಿಗೆ ಗೌರವ ನೀಡಬೇಕು.

ಕೇಂದ್ರದ ಬಿಜೆಪಿ ಸರ್ಕಾರ ರಾಮ ಮಂದಿರ‌ ನಿರ್ಮಾಣ ಮಾಡುವುದಾಗಿ ಭರವಸೆ‌ ನೀಡಿದ್ದರು. ರಾಮ ಮಂದಿರ ನಿರ್ಮಾಣ ಮಾಡುವುದು ನಿಮ್ಮಿಂದ ಮಾತ್ರ ಸಾಧ್ಯವಿದೆ. ಸಂಸತ್ತಿನಲ್ಲಿ ರಾಮ ಮಂದಿರ ನಿರ್ಮಾಣದ ಶಾಸನವನ್ನು ಕೇಂದ್ರ ಸರಕಾರ ರೂಪಿಸಬೇಕು. ಇದಕ್ಕೆ ಯಾರು ವಿರೋಧ ಮಾಡುತ್ತಾರೋ ಬರುವ ಲೋಕಸಭಾ ಚುನಾವಣೆಯಲ್ಲಿ‌ ದೇಶದ ಜನರು ತಕ್ಕ ಪಾಠ ಕಲಿಸುತ್ತಾರೆ.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಮ ಮಂದಿರ ಕಟ್ಡಿಯೇ ತೀರುತ್ತೇವೆ. ಕೃಷ್ಣಾ ಭಟ್ ಮಾತನಾಡಿ, ಊರು ಊರಿನಿಂದ ಅಯೋಧ್ಯೆಯಲ್ಲಿ ರಾಮ ಮಂದಿರ‌ ನಿರ್ಮಾಣ‌ ಮಾಡಲು ಇಟ್ಟಿಗೆ ಸಂಗ್ರಹಿಸಲಾಗಿದೆ. ನಾಲ್ಕು ಲಕ್ಷ‌‌‌ ಹಿಂದೂಗಳ‌ ಬಲಿದಾನವಾಯಿತು. ಆ ಸಂದರ್ಭದಲ್ಲಿ ನ್ಯಾಯಾಲಯ ರಾಮಮಂದಿರ‌ ನಿರ್ಮಾಣ‌ ಮಾಡಲು ಆದೇಶ ಮಾಡಿತ್ತು. ಆದರೆ ಅದಕ್ಕೂ ಕೆಲವರು ತಡೆ ತಂದಿದ್ದು ದುರ್ದೈದವದ ಸಂಗತಿ.’

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಸಾಧ್ಯವಿಲ್ಲ

ನಂತರ ಮಾತನಾಡಿದ ಕೇಶವ ಹೆಗಡೆ, ‘ಕೇಂದ್ರ ಸರಕಾರ ರಾಮ ಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಶಾಸನ ತರುವಂತೆ ಇಡೀ‌ ದೇಶದ ಜನರ ಆಗ್ರಹವಾಗಿದೆ. ದೇಶದಲ್ಲಿ ರಾಮ ಮಂದಿರದ ವಿರುದ್ದ ಮಾತನಾಡುವವರು ಹೇಳ‌ ಹೆಸರಿಲ್ಲದೆ‌ ಧೂಳಿಪಟವಾಗುತ್ತಾರೆ. ಅಯೋಧ್ಯೆಯಲ್ಲಿ ಯಾವುದೇ ಕಾರಣಕ್ಕೂ ಬಾಬರಿ ಮಸೀದಿ ನಿರ್ಮಾಣ‌‌ ಮಾಡಲು ಬಿಡುವುದಿಲ್ಲ ಎಂದು ಸಾಧು- ಸಂತರು ನಿರ್ಣಯ ತೆಗೆದುಕೊಂಡಿದ್ದಾರೆ.

ದೇಶದಲ್ಲಿ‌ ಮುಸಲ್ಮಾನರು ಹಾಗೂ ಬ್ರಿಟಿಷ್‌ರು ದಬ್ಬಾಳಿಕೆ ನಡೆಸಿದರೂ ಈ ನೆಲದಲ್ಲಿ ನಾವು ಅಪಮಾನ ಸಹಿಸುವುದಿಲ್ಲ.

ಹಾಡು ಹಾಕಿಕೊಂಡು ಕುಣಿಯುವುದಿಲ್ಲ. ರಾಮ ಮಂದಿರ ಕಟ್ಟೇ ತೀರುತ್ತೇವೆ. ವೇದಿಕೆಯ ಮೇಲೆ ನಿಂತು ಕೆಲ ರಾಮ ಮಂದಿರ ವಿರೋಧಿಗಳು ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಅಂಥವರಿಗೆ ತಕ್ಕ ಉತ್ತರ ನೀಡಬೇಕಿದೆ’ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀ.ಶಂಕರಾನಂದ ಸ್ವಾಮೀಜಿ, ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ.ನೀಲಕಂಠೇಶ್ವರ ಸ್ವಾಮೀಜಿ, ಶ್ರೀ ಕಾಡಶಿದ್ದೇಶ್ವರ ಶ್ರೀ.ಸ್ವಾಮೀಜಿ, ಶ್ರೀ.ಕಾಡಸಿದ್ದೇಶ್ವರ ದೇವರು,ಶ್ರೀ. ವಿರೇಶ್ವರ ಸ್ವಾಮೀಜಿ,‌ಶ್ರೀ ಗಂಗಾಧರ ಸ್ವಾಮೀಜಿ, ಸಂಸದ ಸುರೇಶ ಅಂಗಡಿ, ಶಾಸಕರಾದ ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply