ಮಾನ್ಸ್ಟರ್ ರಾಕಿ ಖದರ್ ಹೇಗಿದೆ ಗೊತ್ತಾ..? ಕೆಜಿಎಫ್ 2nd ಟ್ರೈಲರ್ ರಿಲೀಸ್ ಮಾಡಿದ್ಯಾಕೆ..?

ಡಿಜಿಟಲ್ ಕನ್ನಡ ಟೀಮ್:

ಸಲಾಂ ರಾಕಿ ಭಾಯ್ ಸಾಂಗ್ ಸೌಂಡ್ ಕಡಿಮೆ ಆಗೋಕು ಮೊದ್ಲೆ ಕೆಜಿಎಫ್ ಹೊಸ ಟ್ರೈಲರ್ ಅಂತರ್ಜಾಲಕ್ಕೆ ಬೆಂಕಿ ಹಚ್ಚಿದೆ. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರತಂಡ ಕೆಜಿಎಫ್ ಹಿಂದಿ ಟ್ರೈಲರ್ ರಿವೀಲ್ ಮಾಡಿದೆ. ರಾಕಿಯ ಬಾಲ್ಯ, ಮುಂಬೈ ಭೂಗತ ಲೋಕದ ಅಧಿಪತಿಯಾಗಿ ಬೆಳೆಯುವ ಪರಿ, ಮತ್ತೆ ಕೆಜಿಎಫ್ಗೆ ಅಡಿಯಿಟ್ಟು ಧೂಳೆಬ್ಬಿಸೋ ಖದರ್ ನ ಟ್ರೈಲರ್ನಲ್ಲಿ ಕಟ್ಟಿಕೊಡಲಾಗಿದೆ. ಅಷ್ಟೆ ಅಲ್ಲ ಕೆಜಿಎಫ್ ಸಿನಿಮಾ ಕಥೆಯ ಹಿನ್ನೆಲೆಯನ್ನ ಬಿಡಿಸಿಡಲಾಗಿದೆ. ಟ್ರೈಲರ್ಗೆ ಬಿಟೌನ್ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಏಕಕಾಲದಲ್ಲಿ ಕನ್ನಡ , ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗ್ತಿರೋ ಸಿನಿಮಾ ಕೆಜಿಎಫ್. ಈಗಾಗಲೇ ಫಸ್ಟ್ ಟ್ರೈಲರ್ ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಇದೀಗ ಬಂದಿರೋ ಹೊಸ ಸ್ಯಾಂಪಲ್ ಆ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ. ಸಾಮಾನ್ಯವಾಗಿ ಪ್ರಮೋಷನ್ ಭಾಗವಾಗಿ ಹಿಂದಿ ಸಿನಿಮಾಗಳ ಎರಡೆರಡು ಟ್ರೈಲರ್ ರಿಲೀಸ್ ಮಾಡೋದು ವಾಡಿಕೆ. ಹಾಲಿವುಡ್ನಲ್ಲಿ ಈ ಸಂಖ್ಯೆ ಇನ್ನು ಜಾಸ್ತಿ ಇರತ್ತೆ ಬಿಡಿ. ಕೆಜಿಎಫ್ ಯಾವ್ದೊ ಡಬ್ ಸಿನಿಮಾ ರೀತಿ ಅಲ್ಲದೇ ಸ್ಟ್ರೈಟ್ ಹಿಂದಿ ಸಿನಿಮಾ ರೀತಿ ರಿಲೀಸ್ ಆಗ್ತಿದೆ. ಅದೇ ಕಾರಣಕ್ಕೆ ಮುಂಬೈ ಮಾಧ್ಯಮಗಳ ಸಮ್ಮುಖದಲ್ಲಿ ಹೊಸ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಫಸ್ಟ್ ಟ್ರೈಲರ್ನಲ್ಲಿದ್ದ ರಗಡ್ನೆಸ್ ಸೆಕೆಂಡ್ ಟ್ರೈಲರ್ನಲ್ಲೂ ಮುಂದುವರೆದಿದೆ. ಗ್ಯಾಂಗ್ಸ್ಟರ್ ರಾಕಿ ಅವತಾರದಲ್ಲಿ ಯಶ್ ಧೂಳೆಬ್ಬಿಸಿದ್ದಾರೆ. ಯಶ್ ಆ್ಯಕ್ಷನ್ ಧಮಾಕಗೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಇಡೀ ಸಿನಿಮಾ ಇದೇ ಫೀಲ್ ಕೊಡೊ ಸುಳಿವು ಸಿಕ್ಕಿದ್ದು, ಕೆಜಿಎಫ್ ಬಾಕ್ಸಾಫೀಸ್ ಬ್ಯಾಂಗ್ ಮಾಡೋದು ಗ್ಯಾರೆಂಟಿ ಅನ್ಬೋದು. ಖಡಕ್ ಡೈಲಾಗ್ಗಳ ಜೊತೆ ಜೊತೆಗೆ ಕಿಕ್ ಕೊಡ್ತಾ ಸಾಗೋ ಟ್ರೈಲರ್ ಸಿನಿಮಾ ನೋಡೋ ಆತುರವನ್ನ ಇನ್ನಷ್ಟು ಹೆಚ್ಚಿಸಿದೆ. ಪ್ರಶಾಂತ್ ನೀಲ್ – ಯಶ್ ಕಾಂಬೋ ಹೊಸ ದಾಖಲೆ ಬರೆಸೋ ಸುಳಿವು ಸಿಕ್ಕಿದೆ. ಡಿಸೆಂಬರ್ 21ಕ್ಕೆ ವಿಶ್ವದಾದ್ಯಂತ ರಾಕಿ ದರ್ಬಾರ್ ಶುರುವಾಗಲಿದೆ.

Leave a Reply