ಕೆಜಿಎಫ್​ಗೆ ಎದುರಾಯ್ತು ಮಾರಿ ಕಾಟ!

ಡಿಜಿಟಲ್ ಕನ್ನಡ ಟೀಮ್:

ರಾಕಿಂಗ್​ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಇದೇ ತಿಂಗಳ 21ರಂದು ತೆರಗೆ ಅಪ್ಪಳಿಸಲು ಸಜ್ಜಾಗಿದೆ. ದಿವಂಗತ ನಟ ಅಂಬರೀಶ್​ ಕೂಡ ಚಿತ್ರ ಅಂದ್ರೆ ಹೀಗಿರಬೇಕು ಅಂತಾ ಆಡಿಯೋ ರಿಲೀಸ್​ ಕಾರ್ಯಕ್ರಮದಲ್ಲಿ ಹೇಳಿದ್ರು. ಅಷ್ಟೊಂದು ಅದ್ಧೂರಿಯಾಗಿ ಬಂದಿರೋ ಚಿತ್ರಕ್ಕೆ ಬಿರುಗಾಳಿಯಂತೆ ಮಾರಿ ಬಂದು ಅಪ್ಪಳಿಸಿದೆ.

ಅಪ್ಪನಾಗಿರೋ ಸಂತೋಷದಲ್ಲಿರುವ ನಟ ಯಶ್,​ ಪಂಚ ಭಾಷೆಯಲ್ಲಿ ರಿಲೀಸ್​ ಆಗುತ್ತಿರೋ ಕೆಜಿಎಫ್​ ಚಿತ್ರದ ಬಗ್ಗೆ ಬಹುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದ್ರೀಗ ತಮಿಳು ಚಿತ್ರರಂಗ ಯಶ್​ ಪಾಲಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ.

ಪಂಚ ಭಾಷೆಗಳಲ್ಲಿ ಬರುತ್ತಿರುವ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಡಿಸೆಂಬರ್​ 21ಕ್ಕೆ ಬರುವುದು ಪಕ್ಕಾ ಆಗಿದೆ. ಅತ್ತ ತಮಿಳು ನಟ ಧನುಷ್ ಅಭಿನಯದ ಮಾರಿ 2 ಚಿತ್ರ ಡಿಸೆಂಬರ್ 21ರಂದೇ ರಿಲೀಸ್ ಆಗಲಿದೆ. ಬಹುಭಾಷೆಯಲ್ಲಿ ತಯಾರಾಗಿರೋ ನಟ ಯಶ್ ನಟನೆಯ ಕೆಜಿಎಫ್ ಕೂಡ ರಿಲೀಸ್ ತಮಿಳಿನಲ್ಲಿ ರಿಲೀಸ್​ ಆಗಲಿದ್ದು, ಕಾಲಿವುಡ್​ನಲ್ಲಿ ನಷ್ಟ ಅನುಭವಿಸುವ ಭೀತಿ ಸೃಷ್ಟಿಸಿದೆ.

ನಟ ಧನುಷ್ ನಟನೆಯ ಮಾರಿ ಸಿನಿಮಾದ ಮೊದಲ ಭಾಗ ತಮಿಳು ಸಿನಿಮಾದಲ್ಲಿ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಮಾರಿ ಸಿನಿಮಾದ 2ನೇ ಭಾಗ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ಅದೇ ದಿನ ಕೆಜಿಎಫ್ ಕೂಡ ರಿಲೀಸ್ ಆಗ್ತಿರೋದು ಯಶ್ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಂದೇ ದಿನ ಎರಡೂ ಸೂಪರ್​ ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ತಮಿಳು ಪ್ರೇಕ್ಷಕರು ಮಾರಿ 2 ಕಡೆ ತೆರಳಲಿದ್ದು, ಕೆಜಿಎಫ್​ ಚಿತ್ರಕ್ಕೆ ಬರುವುದು ಕಷ್ಟ ಎನ್ನಲಾಗ್ತಿದೆ.

Leave a Reply