ಪ್ರತ್ಯೇಕ ಧರ್ಮವೋ..? ರಾಜಕೀಯ ಪಕ್ಷವೋ..?

ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆ ತಿರಸ್ಕಾರದ ಬೆನ್ನಲ್ಲೇ ಹೋರಾಟ ಕೂಡ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿನ್ನೆಯಿಂದ ದೆಹಲಿಯಲ್ಲಿ 3 ದಿನದ ಬೃಹತ್ ಸಮಾವೇಶ ಆರಂಭವಾಗಿದ್ದು, ಬಸವ ಧರ್ಮ ಸಮಿತಿ ಸಮಾವೇಶ ನಡೆಸುತ್ತಿದೆ. ದೆಹಲಿಯ ತಾಳ್ಕಟೋರಾ ಸ್ಟೇಡಿಯಂನಲ್ಲಿ ಸಮಾವೇಶ ನಡೆಯುತ್ತಿದ್ದು ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಮಾವೇಶ ಉದ್ಘಾಟಿಸಿದ್ರು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸಯ್ಯದ್ ಘಯೋರಲ್ ಹಸನ್ ರಿಜ್ವಿ, ಲೇಕಖ, ನಿರ್ದೇಶಕ ಯೋಗಿಶ್ ಮಾಸ್ಟರ್, ನಿಜಗುಣನಂದಾ ಸ್ವಾಮೀಜಿ ಮತ್ತಿತರರು ಭಾಗಿಯಾಗಿದ್ದರು.

ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಮಾತೆ ಮಹಾದೇವಿ, ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ತಿರಸ್ಕರಿಸಿದೆ. ಕೇಂದ್ರ ಸರ್ಕಾರದ ನಿರ್ಣಯವನ್ನು ನಾವು ಒಪ್ಪವುದಿಲ್ಲ. ಬೌದ್ದ, ಸಿಖ್, ಪಾರ್ಸಿ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದೆ. ಹಾಗಾಗಿ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು. ವೇದಗಳನ್ನು ನಾವು ಒಪ್ಪುವುದಿಲ್ಲ. ಲಿಂಗಾಯ ಧರ್ಮ ಭಿನ್ನವಾದುದು. ನಾ ಶವವನ್ನು ಸುಡುವುದಿಲ್ಲ, ಮಣ್ಣಲ್ಲಿ ಹೂಳುತ್ತೇವೆ. ನಾವು ಮೂರು ಕೋಟಿ ದೇವರನ್ನು ಪೂಜಿಸಲ್ಲ. ಹಿಂದೂ ಧರ್ಮದ ಆಚರಣೆಗಳಿಂದ ಭಿನ್ನವಾಗಿದ್ದೇವೆ. ಹಿಂದೂ ಧರ್ಮದ ಭಾಗವಾಗಿ ನಾವು ಉಳಿಯುವುದಿಲ್ಲ. ನ್ಯಾ. ನಾಗಮೋಹನ್ ದಾಸ್ ವರದಿ ದೊಡ್ಡ ಅಸ್ತ್ರವಾಗಿದ್ದು, ಜಯ ಸಿಗುವರೆಗೂ ಅದನ್ನೇ ಬಳಸಿಕೊಂಡು ಹೋರಾಟ ಮಾಡುತ್ತೇವೆ. ಸುಪ್ರೀಂ ಕೋರ್ಟ್‌ಗೂ ಹೋಗುತ್ತೇವೆ ಎಂದಿದ್ದಾರೆ.

ಇನ್ನೊಂದು ಮಹತ್ವದ ವಿಚಾರ ಅಂದ್ರೆ ಲಿಂಗಾಯತ ಧರ್ಮದ ಪ್ರಸ್ತಾವನೆಯನ್ನು ಕೇಂದ್ರ ತಿರಸ್ಕರಿಸಿರೋದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಗಮನಕ್ಕೂ ಬಂದಿಲ್ಲ ಎನ್ನಲಾಗಿದೆ. ಯಾಕೆಂದರೆ ದೆಹಲಿಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಘಯೋರಲ್ ಹಸನ್ ರಿಜ್ವಿ ಹೇಳಿಕೆ ನೀಡಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಫೈಲ್ ಆಯೋಗಕ್ಕೆ ಬಂದಿಲ್ಲ, ಒಂದು ವೇಳೆ ಕೇಂದ್ರ ಸರ್ಕಾರ ಅಭಿಪ್ರಾಯ ಕೇಳಿದರೆ ತಿಳಿಸುತ್ತೇವೆ. ಪ್ರಸ್ತಾವನೆ ತಿರಸ್ಕರಿಸಿರುವ ವಿಷಯವೂ ಗೊತ್ತಿಲ್ಲ ಎಂದಿದ್ದಾರೆ.

ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಕೇಂದ್ರ ಸರ್ಕಾರ ‌ಒಂದು ನಿರ್ಧಾರ ಮಾಡುವುದು ಬೇಕಿತ್ತು. ಈಗ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈಗಿರುವ ಸರ್ಕಾರದಿಂದ ಇದಕ್ಕಿಂತ ಹೆಚ್ಚಿನದು ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಮನಃಶಾಸ್ತ್ರದ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರ. ಏಕ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದೆ. ನಮಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿದೆ. ಸಂವಿಧಾನದ ಮೇಲೆ ವಿಶ್ವಾಸವಿದೆ. ಮತೀಯವಾದದ ನಿಲುವಿನ ವಿರುದ್ಧ ಗೆಲ್ಲುತ್ತೇವೆ. ಅಧಿಕಾರಕ್ಕೋಸ್ಕರ ನಿರ್ಧಾರ ಮಾಡಬೇಡಿ. ಲಿಂಗಾಯತ ಧರ್ಮ ರಾಷ್ಟ್ರದ ಧರ್ಮ, ಸಮಾನತೆ ಸಾರಿದ ದೇಶದ ಮೊದಲ ಧರ್ಮ. ಈ ವಿಷಯ ಸುಪ್ರೀಂ ಕೋರ್ಟಿನಲ್ಲೇ ಚರ್ಚೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿದ ಮುಖಂಡರು, ಪ್ರತ್ಯೇಕ ಧರ್ಮದ ಹೋರಾಟದಿಂದ ಪ್ರತ್ಯೇಕ ಪಕ್ಷದ ಕಡೆಗೆ ನಾಯಕರ ಗಮನ ಹರಿದಿದೆ. ಪ್ರತ್ಯೇಕ ಪಕ್ಷ ಬೇಕು ಎಂದು ಪ್ರತಿಪಾದಿಸಿರುವ ಮಾತೆ ಮಹಾದೇವಿ, ಪಂಜಾಬಿನ ಅಕಾಲಿದಳ ಮಾದರಿಯಲ್ಲಿ ಕರ್ನಾಟಕದಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಪಕ್ಷ ಬೇಕು ಎಂದು ಪ್ರತಿಪಾದಿಸಿದ್ದಾರೆ. ರಾಜ್ಯದ ಲಿಂಗಾಯತ ನಾಯಕರು ಈ ಬಗ್ಗೆ ಯೋಚಿಸಬೇಕು.. ರಾಜಕೀಯದಲ್ಲಿ ಇರುವ ಲಿಂಗಾಯತ ನಾಯಕರು ಮನಸ್ಸು ಮಾಡಬೇಕು. ರಾಜಕೀಯ ಶಕ್ತಿ ಅನಿವಾರ್ಯ ನಮ್ಮ ಪ್ರತ್ಯೇಕ ಧರ್ಮದ ಹೋರಾಟಕ್ಕೆ ರಾಜಕೀಯ ಬೆಂಬಲ ಸಿಕ್ಕಿದೆ.‌ ಎಂ.ಬಿ ಪಾಟೀಲ್ ಮತ್ತಿತರರಿಂದ ರಾಜಕೀಯ ಶಕ್ತಿ ಸಿಕ್ಕಿದೆ. ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಎಂ.ಬಿ. ಪಾಟೀಲ್ ಮನಸ್ಸು ಮಾಡಬೇಕು. ಅವ ಮನಸ್ಸು ಮಾಡಿದರೆ ಸಮುದಾಯದ ರಾಜಕೀಯ ನಾಯಕ ಆಗಬಹುದು ಎಂದು ಕರೆ ನೀಡಿದ್ದಾರೆ. ಒಟ್ಟಾರೆ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದ ನಾಯಕರು, ಕೇಂದ್ರ ಸರ್ಕಾರ ಶಿಫಾರಸು ತಿರಸ್ಕಾರ ಮಾಡುತ್ತಿದ್ದ ಹಾಗೆ ಲಿಂಗಾಯತ ರಾಜಕೀಯ ಪಕ್ಷ ಸ್ಥಾಮಪನೆಯ ಮಾತನಾಡಿದ್ದಾರೆ. ಮುಂದೆ ಯಾವ ತಿರುವು ಪಡೆಯುತ್ತದೆ ನೋಡಬೇಕಿದೆ.

Leave a Reply