ಲಿಂಗಾಯತ ಧರ್ಮ‌ಕ್ಕೆ ಯಾಕೆ ಸಿಗಲಿಲ್ಲ ಮಾನ್ಯತೆ..!

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿದ್ದ ಹೋರಾಟ ಕಳೆದ ವರ್ಷ ತುಂಬಾ ತೀವ್ರತೆ ಪಡೆದಿತ್ತು. ಬಳಿಕ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆ ಮಾಡಿ, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಅಧ್ಯಯನ ಮಾಡಲು ನೇಮಿಸಿತ್ತು. ಆ ಬಳಿಕ ಅಧ್ಯಯನ ನಡೆಸಿದ ಸಮಿತಿ‌ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕರ ಶಿಫಾರಸು ಮಾಡುವಂತೆ ಸೂಚನೆ ಕೊಟ್ಟಿತ್ತು ಅದರಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ರವಾನೆ ಮಾಡಿತ್ತು.. ಆದ್ರೀಗ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮ ಮಾನ್ಯತೆ ನೀಡಲು ನಿರಾಕರಿಸಿ ಪ್ರಸ್ತಾವನೆ ಹಿಂದಿರುಗಿಸಿದೆ.

ಆದ್ರೆ ಈ ವಿಚಾರ ಗೊತ್ತೇ ಆಗಿರಲಿಲ್ಲ. ಇವತ್ತು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ವಕೀಲರು ಅಫಿಟವಿಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರತ್ಯೇಕ ಲಿಂಗಾಯುತ ಧರ್ಮ ಶಿಫಾರಸ್ಸುನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದಿದ್ದಾರೆ. ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಈಗಾಗಲೇ ನವೆಂಬರ್ 13ರಂದೇ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೊಟ್ಟಿದ್ದೇವೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಕೇಂದ್ರ ಸರ್ಕಾರ ನೇಮಕ ಮಾಡಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ್ ನಾವಡ್ಗಿ ಹೇಳಿಕೆ ಪಡೆದ ಬಳಿಕ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ಅರ್ಜಿ ಇತ್ಯರ್ಥ ಪಡಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಜಿ.ಆರ್. ಗುರುಮಠ್ ಪಿಐಎಲ್ ವಾಪಸ್ ಪಡೆಯಲು ನಿರ್ಧಾರ ಮಾಡಿದ್ರು. ಹೀಗಾಗಿ ಪಿಐಎಲ್ ಇತ್ಯರ್ಥ ಆಯ್ತು. ಆದ್ರೆ ರಾಜ್ಯದ ಶಿಫಾರಸು ತಿರಸ್ಕಾರ ಮಾಡಲು ಕೇಂದ್ರ ಕೊಟ್ಟ ಕಾರಣ ಏನು ಅನ್ನೋ ಕುತೂಹಲ ಮೂಡಿಸಿದೆ.

ನವೆಂಬರ್ 13 ರಂದೇ ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ ಎಂದು ಕೇಂದ್ರದ ಪರ ವಕೀಲರಾದ ಪ್ರಭುಲಿಂಗ್ ನಾವಡ್ಗಿ ಹೇಳಿದ್ದು ಅದರಲ್ಲಿ ಕೆಲವೊಂದು ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ. ಅವೇನಂದರೆ ಹಿಂದೂ ಧರ್ಮದ ಶಾಖೆ ಎಂಬ ಹಿಂದಿನ‌ ನಿಲುವು, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಹಾಗೂ ಗೃಹ ಇಲಾಖೆ ಈ ತೀರ್ಮಾನ ಮಾಡಿದ್ದು, ರಾಜ್ಯ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಲು ಕೇಂದ್ರ ಸರ್ಕಾರ ಎರಡು ಅಂಶಗಳ ಆಧಾರ ಕೊಟ್ಟಿದೆ. ರಾಜ್ಯ ಸರ್ಕಾರ ರಾಷ್ಟ್ರೀಯ ಅಲ್ಪ ಸಂಖ್ಯಾತರ ಅಭಿವೃದ್ದಿ ಕಾಯ್ದೆ ಸೆಕ್ಷನ್ 2 (ಸಿ) ಅಡಿಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಲಿಂಗಾಯುತ ಎನ್ನುವುದು ಹಿಂದೂ ಧರ್ಮದ ಒಂದು ಶಾಖೆ, 1871ರ ಜಾತಿ ಸಮೀಕ್ಷೆಯಿಂದ ಇದು ಹಿಂದೂ ಧರ್ಮದ ಶಾಖೆಯಾಗಿಯೇ ಇದೆ. ಒಂದು ವೇಳೆ ಲಿಂಗಾಯುತ ಪ್ರತ್ಯೇಕ ಧರ್ಮವನ್ನಾಗಿ ಘೋಷಣೆ ಮಾಡಿದ್ರೆ ಪರಿಶಿಷ್ಟ ಜಾತಿಗೆ ತನ್ನೆಲ್ಲಾ ಸ್ಟೇಟಸ್ ಕಳೆದುಕೊಳ್ಳುತ್ತೆ ಅದರ ಜೊತೆಗೆ ಎಸ್‌ಸಿ ಸಮುದಾಯ ಹೊಂದಿರುವ ಎಲ್ಲಾ ಸವಲತ್ತುಗಳನ್ನು ಕಳೆದುಕೊಳ್ಳುತ್ತೆ ಎಂದು ಕಾರಣ ನೀಡಿದೆ. ಇವೆರಡು ಕಾರಣಗಳನ್ನು ಲಿಂಗಾಯತ ಮುಖಂಡರು, ಹೋರಾಟಗಾರರು ತಿರಸ್ಕರಿಸಿದ್ದಾರೆ. ಮುಂದಿನ ಕಾನೂನು ಹೋರಾಟ ಹೇಗಿರುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Leave a Reply