ಇಂಡಸ್ಟ್ರಿ ಬಿಟ್ಹೋಗು ಅಂದವರಿಗೆ ಕವಿತಾ ಲಂಕೇಶ್, ಶ್ರುತಿ ಹರಿಹರನ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 

ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ಕೊಟ್ಟಿದ್ರು ಅಂತ ನಟಿ ಶ್ರುತಿ ಹರಿಹರನ್ ಆರೋಪ‌ ಮಾಡಿದ್ದು ಸಂಚಲನ ಸೃಷ್ಟಿಸಿತ್ತು. ಮೀಟೂ ಅಭಿಯಾನದ ಅಡಿ ಶ್ರುತಿ ಹರಿಹರನ್ ಮಾಡಿದ ಆರೋಪ ದೊಡ್ಡ ಚರ್ಚೆ ಹುಟ್ಟಾಕಿತ್ತು. ಪ್ರಕರಣ ಫಿಲ್ಮ್ ಛೇಂಬರ್ ಮೆಟ್ಟಿಲೇರಿ ಇತ್ಯರ್ಥವಾಗದೇ ಪೊಲೀಸ್ ಸ್ಟೇಷನ್, ಕೋರ್ಟ್ ಅಂತ ಗಂಭೀರ ಸ್ವರೂಪ ಪಡ್ಕೊಂಡಿದೆ. ಶ್ರುತಿ ಆರೋಪವನ್ನ ಅರ್ಜುನ್ ಸರ್ಜಾ ಅಭಿಮಾನಿಗಳು ಒಪ್ಪಿಕೊಳ್ಳದೇ ನೆಚ್ಚಿನ ನಟನ ಬೆನ್ನಿಗೆ ನಿಂತಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್ ಕುಮಾರ್ ಸೇರಿದಂತೆ ಕೆಲವರು ಶ್ರುತಿ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಶ್ರತಿ ಹರಿಹರನ್ ಅಭಿನಯದ ನಾತಿಚರಾಮಿ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಅದನ್ನ ಶ್ರುತಿ ಟ್ಟಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅವರ ಟ್ವೀಟ್ಟಿಗೆ ಶ್ರೀನಿವಾಸ್ ಮೂರ್ತಿ ಅನ್ನೋ ಟ್ವಿಟ್ಟರ್ ಪೇಜ್ನಿಂದ ಒಂದು ಪ್ರತಿಕ್ರಿಯೆ ಬಂದಿದೆ. ನೀವು ಚಿತ್ರರಂಗಕ್ಕೆ ಕಪ್ಪು ಚುಕ್ಕೆ. ಚಿತ್ರರಂಗ ಬಿಟ್ಹೋಗಿ ಅಂತ ಶ್ರುತಿಗೆ ಹೇಳಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್ ಆ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು, ಯಾಕೆ ನೀವು ಇದನ್ನ ಆತನಿಗೆ (ಅರ್ಜುನ್ ಸರ್ಜಾ) ಹೇಳೋದಿಲ್ಲ‌ ಅಂತ ಪ್ರಶ್ನಿಸಿದ್ದಾರೆ. ಕವಿತಾ ಲಂಕೇಶ್ ಟ್ವೀಟ್ ಅನ್ನ ಶ್ರುತಿ ಹರಿಹರನ್‌ ರೀ ಟ್ವೀಟ್ ಮಾಡಿದ್ದಾರೆ.

Leave a Reply