ಪ್ರಧಾನಿ ಮೋದಿ ಸೋಲಿಗೆ ಪೇಜಾವರ ಸಲಹೆ ಏನು..?

HH Sri Vishvesha Tirtha Swamiji of Pejawar Mutt calls on the Prime Minister, Shri Narendra Modi, in New Delhi on July 22, 2014.

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲುಂಡಿದೆ. ಪ್ರಧಾನಿ ಮೋದಿ, ಅಮಿತ್​ ಶಾ ಜೋಡಿ ಕಡೆಗೆ ಎಲ್ಲರೂ ಬೆರಳು ಮಾಡ್ತಿದ್ದಾರೆ. ಇದೀಗ ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ಕೃಷ್ಣ ಮಠದ ಹಿರಿಯ ಯತಿ ವಿಶ್ವೇಶತೀರ್ಥರೂ ಕೂಡ ಪ್ರಧಾನಿ ಮೋದಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅದರಲ್ಲೂ ಪಕ್ಕದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗಲಿದೆ ಎಂದಿರುವ ಶ್ರೀಗಳು, ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್​ ಬಿಹಾರಿ ವಾಜಪೇಯಿ ಅವರ ನೀತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮೋದಿ ಕೆಲವು ದಿಟ್ಟ ನಿರ್ಧಾರ ಮಾಡಿದ್ದಾರೆ ಆದ್ರೆ ಅವು ಜನರನ್ನು ತಲುಪಿಲ್ಲ. ಈ ಮೊದಲು ಪ್ರಧಾನಿ ಮೋದಿ ಬಗ್ಗೆ ಜನರಿಗಿದ್ದ ನಿರೀಕ್ಷೆ ಈಗ ಇಲ್ಲ. ದೇಶದ ಜನರು ನಿರೀಕ್ಷೆ ಇಟ್ಟ ಪ್ರಮಾಣದಲ್ಲಿ ದೇಶದಲ್ಲಿ ಕೆಲಸ ಆಗಿಲ್ಲ ಎಂದಿರುವ ಪೇಜಾವರ ಶ್ರೀಗಳು, ‘ಜನಸಾಮಾನ್ಯರಿಗೆ ನೋಟ್ ಬ್ಯಾನ್ ಫಲ ಮುಟ್ಟಿಲ್ಲ. ಹೀಗಾಗಿ ಆರ್ಥಿಕ ಸುಧಾರಣೆ, ರಾಮಮಂದಿರಕ್ಕೆ ಆದ್ಯತೆ ಕೊಡಲಿ. ರಾಮ ಮಂದಿರ ನಿರ್ಮಾಣ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು’ ಎಂದು ಸಲಹೆಯನ್ನೂ ನೀಡಿದ್ದಾರೆ.

ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ವಿಚಾರದಲ್ಲಿ ಪೇಜಾವರ ಶ್ರೀಗಳು ಮಾತನಾಡಿದ್ದು, ದೇಶಕ್ಕೆ ಮೋದಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಮೋದಿಯಷ್ಟು ಸಮರ್ಥ ನಾಯಕ ಅಲ್ಲ. ಆದಿತ್ಯನಾಥ ರಾಜಕಾರಣಿಯಲ್ಲ ಅವರು ಸಂತ. ಉತ್ತರಪ್ರದೇಶದಲ್ಲಿ ಇಷ್ಟು ಮಾಡೋದೇ ವಿಶೇಷವಾಗಿದೆ ಎಂದಿದ್ದು, ಪಂಚರಾಜ್ಯ ಫಲಿತಾಂಶ ಮೋದಿಗೆ ಎಚ್ಚರಿಕೆ ಗಂಟೆಯಾಗಿದ್ದು, ಎನ್​ಡಿಎ ಮೈತ್ರಿಕೂಟ ಉಳಿಸಲು ಮಂದಿರ ನಿರ್ಮಾಣ ಮಾಡಬೇಕು. ಈ ಮೂಲಕ ಇತರೆ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದಿದ್ದಾರೆ.

Leave a Reply