ಕರ್ನಾಟಕದಲ್ಲಿ ‘ಕನ್ನಡ ಕೋಗಿಲೆ’ ಯಾರು ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ಕನ್ನಡದಲ್ಲಿ ಸಾಕಷ್ಟು ಸದ್ದು ಮಾಡಿದ ಕನ್ನಡ ಕೋಗಿಲೆ ಕಾರ್ಯಕ್ರಮ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗ್ತಿತ್ತು. ಶನಿವಾರ ಹಾಗೂ ಭಾನುವಾರ ಪ್ರಸಾರವಾಗ್ತಿದ್ದ ಈ ಕಾರ್ಯಕ್ರಮ ಅದೆಷ್ಟೋ ಕನ್ನಡಿಗರ ಮನ ಸೂರೆಗೊಂಡಿತ್ತು. ಇಂದು ಸಂಜೆ 5 ಗಂಟೆಯಿಂದ ಫೈನಲ್ ನಡೆಯುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಯಾರು ಕನ್ನಡದ ಕೋಗಿಲೆ ಅನ್ನೋದು ಗೊತ್ತಾಗಲಿದೆ.. ಆದ್ರೆ ನಿಮ್ಮ ಡಿಜಿಟಲ್ ಕನ್ನಡಕ್ಕೆ ಈಗಾಗಲೇ ವಿನ್ನರ್ ಅಂಡ್ ರನ್ನರ್ ಅಪ್ ಯಾರು ಅನ್ನೋದು ಗೊತ್ತಾಗಿದೆ.

ಅಂತಿಮ ಹಂತದಲ್ಲಿ ಅಕಿಲಾ ಪಜಿಮಣ್ಣು, ಶ್ವೇತಾ ದೇವನಹಳ್ಳಿ, ಶೃತಿ ಬಿಡೆ, ದೊಡ್ಡಪ್ಪ, ಗಣೇಶ್, ಕರಿಬಸವ, ಅಪೇಕ್ಷಾ ಪೈ, ಅನಿಮೇಶ್ ಸೇರಿದಂತೆ ಒಟ್ಟು ಎಂಟು ಜನ ಕಿಲಾಡಿ‌ ಸಿಂಗರ್‌ಗಳು ಇದ್ದರು. ಎಲ್ಲರೂ ಒಬ್ಬರಿಗಿಂತಾ ಒಬ್ಬರು ಸೂಪರ್ ಆಗಿ ಹಾಡನ್ನು ಹಾಡುತ್ತಿದ್ದು, ಇನ್ನು ಮೊದಲ ಸುತ್ತು ನಡೆಯುತ್ತಿದೆ. ಮೊದಲ ಸುತ್ತಿನ ಬಳಿಕ ಮೂವರು ಎಲಿಮಿನೇಟ್ ಆಗುತ್ತಿದ್ದು, ಆ ಬಳಿಕ ಐವರು ಮತ್ತೊಂದು ಸುತ್ತಿನಲ್ಲಿ ಫೈನಲ್ ಟೈಟಲ್‌ಗಾಗಿ ಮತ್ತೊಂದು ಹಾಡು ಹಾಡಲಿದ್ದಾರೆ.

ಫಲಿತಾಂಶಕ್ಕೆ ಇನ್ನೂ ಒಂದು ಗಂಟೆ ಕಾಲ ಅವಕಾಶವಿದೆ. ಆದ್ರೆ ಡಿಜಿಟಲ್ ಕನ್ನಡಕ್ಕೆ ಸಿಕ್ಕಿರುವ ವಿಶ್ವಸನೀಯ ಮೂಲಗಳ ಪ್ರಕಾರ ಕಲರ್ಸ್ ಸೂಪರ್ ಕನ್ನಡ ಕೋಗಿಲೆ ಪಟ್ಟವನ್ನು ದೊಡ್ಡಪ್ಪ ತನ್ನದಾಗಿಸಿಕೊಂಡ್ರೆ ರನ್ನರ್ ಅಪ್ ಆಗಿ ಪುತ್ತೂರಿನ ಬೆಡಗಿ ಅಕಿಲಾ ಪಜಿಮಣ್ಣು ಎದ್ದು ನಿಂತಿದ್ದಾರೆ. ಆದ್ರೆ ಇನ್ನೂ ಅಧಿಕೃತವಾಗಿ ಫಲಿತಾಂಶ ಹೊರಬಿದ್ದಿಲ್ಲ. ಕೂಡಲೇ ಕಲರ್ಸ್ ಕನ್ನಡ ನೋಡಿ ಎಂಜಾಯ್ ಮಾಡಿ.

Leave a Reply