ನಾಲ್ಕೂವರೆ ವರ್ಷಗಳಲ್ಲಿ ಮೋದಿ ವಿದೇಶ ಪ್ರವಾಸದ ಖರ್ಚು 2 ಸಾವಿರ ಕೋಟಿ!

ಡಿಜಿಟಲ್ ಕನ್ನಡ ಟೀಮ್:

ನಾಲ್ಕೂವರೆ ವರ್ಷ… 84 ವಿದೇಶ ಪ್ರವಾಸ… ಒಟ್ಟು ಖರ್ಚು 2010 ಕೋಟಿ… ಇದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಕೈಗೊಂಡ ವಿದೇಶ ಪ್ರವಾಸಗಳ ವಿವರ.

ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿಕೆ ಸಿಂಗ್ ಅವರು ಈ ಎಲ್ಲಾ ಮಾಹಿತಿಗಳನ್ನು ಸಂಸತ್ತಿನಲ್ಲಿ ನೀಡಿದ್ದು, ಮತ್ತೇ ವಿರೋಧ ಪಕ್ಷಗಳು ಮೋದಿ ಅವರ ಪ್ರವಾಸವನ್ನು ಟೀಕಾಸ್ತೃವಾಗಿ ಬಳಸಿಕೊಳ್ಳಲು ಮುಂದಾಗಿವೆ.

ಮೋದಿ ಅಧಿಕಾರಕ್ಕೆ ಬಂದ ನಂತರ ಜಪಾನ್, ಚೀನಾ, ಅಮೆರಿಕದಂತಹ ಪ್ರಮುಖ ದೇಶಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದು, ರಾಜತಾಂತ್ರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಅನೇಕ ದೇಶಗಳಿಗೆ ಭೇಟಿ ನೀಡುವ ಮೂಲಕ ಆ ದೇಶಗಳಿಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಇನ್ನು ಕಳೆದ ಜುಲೈನಲ್ಲಿ ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ, ಮೋದಿ ಅವರ ವಿದೇಶ ಪ್ರಯಾಣಕ್ಕಾಗಿ ಬಳಸುವ ವಿಮಾನ ನಿರ್ವಹಣೆಗೆ ಒಟ್ಟು ₹1088.42 ಕೋಟಿ ಮತ್ತು ಚಾರ್ಟೆಡ್ ವಿಮಾನ ವೆಚ್ಚ ₹ 387.26 ಕೋಟಿ ಆಗಿತ್ತು ಎಂದು ಪಿಟಿಐ ವರದಿ ಮಾಡಿತ್ತು.

ಮೋದಿ ದೇಶದ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ವಿದೇಶಗಳನ್ನು ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಆದರೆ, ಮೋದಿ ಅವರು ಭೇಟಿ ಮಾಡಿರುವ ಬಹುತೇಕ ಎಲ್ಲಾ ರಾಷ್ಟ್ರಗಳ ಜತೆ ಭಾರತದ ಸ್ನೇಹ ಸಂಬಂಧ ವೃದ್ಧಿಸಿ, ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕತೆ ಪರಿಣಾಮಕಾರಿಯಾಗಿದೆ ಎಂಬುದು ಬಿಜೆಪಿ ಬೆಂಬಲಿಗರ ವಾದ.

Leave a Reply