ಟ್ಯೂಬಲ್ ಪ್ರೆಗ್ನೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

ಡಾ.ಬಿ.ರಮೇಶ್

ಟ್ಯೂಬಲ್ ಪ್ರೆಗ್ನೆನ್ಸಿ ಎಂದರೇನು?
ಗರ್ಭಕೋಶದಿಂದ ಹೊರಗೆ ಅಂಡನಳಿಕೆಯಲ್ಲಿ ಭ್ರೂಣ ಫಲಿತವಾಗಿ ಗರ್ಭ ಧರಿಸುವ ಸ್ಥಿತಿಯನ್ನು ‘ಟ್ಯೂಬಲ್ ಪ್ರೆಗ್ನೆನ್ಸಿ’ ಅಥವಾ ‘ಎಕ್ಟೋಪಿಕ್ ಪ್ರೆಗ್ನೆನ್ಸಿ’ ಎಂದು ಕರೆಯಲಾಗುತ್ತದೆ.

ಇದನ್ನು ಹೇಗೆ ಕಂಡುಹಿಡಿಯಬಹುದು?
ಕಿಬ್ಬೊಟ್ಟೆ ನೋವು, ಯೋನಿ ಸ್ರಾವ, ಋತುಚಕ್ರ ಬರದೇ ಇರುವುದು ಇದರ ಮುಖ್ಯ ಲಕ್ಷಣಗಳು. ಇದನ್ನು (Beta -hCG) ಎಂಬ ರಕ್ತಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಮೂಲಕ ಕಂಡುಹಿಡಿಯಬಹುದು.

ಅಡ್ಮಿಟ್ ಆಗುವ ಅಗತ್ಯ ಇದೆಯಾ?
ಮಹಿಳೆ ಪ್ರಸ್ತುತ ಯಾವ ಸ್ಥಿತಿಯಲ್ಲಿದ್ದಾಳೆ ಎನ್ನುವುದು ಅವಳನ್ನು ಅಡ್ಮಿಟ್ ಮಾಡಬೇಕೊ, ಬೇಡವೊ ಎಂದು ನಿರ್ಧರಿಸಲಾಗುತ್ತದೆ. ಕಿಬ್ಬೊಟ್ಟೆಯ Distention, Tenderness, Peritonitis hypovolemic ನ ಸಂದರ್ಭದಲ್ಲಿ ತಕ್ಷಣ ಅಡ್ಮಿಟ್ ಆಗಬೇಕಾಗುತ್ತದೆ. ಗರ್ಭನಾಳ ಒಡೆದಿರದ ಸ್ಥಿತಿಯಲ್ಲಿ ಹೊರರೋಗಿಯಾಗಿ ಬಂದು ಮೆಥೊಟ್ರೆಕ್ಸೇಟ್ ಚುಚ್ಚುಮದ್ದು ಹಾಕಿಸಿಕೊಂಡು ಚಿಕಿತ್ಸೆ ಪಡೆಯಬಹುದು.

ಔಷಧಗಳ ಮೂಲಕ ಇದರ ಚಿಕಿತ್ಸೆ ಸಾಧ್ಯವೇ?
ಆರಂಭಿಕ ಹಂತದಲ್ಲಿ ಅಂದರೆ Haemodyanamically ಸ್ಥಿರವಾಗಿರುವ ಸ್ಥಿತಿಯಲ್ಲಿ 3.5 ಸೆಂ.ಮೀ.ಗಿಂತ ಕಡಿಮೆ ಗಾತ್ರ ಇರುವ, ಹೃದಯಮಿಡಿತ ಇರದೇ ಇರುವ ಸ್ಥಿತಿಯಲ್ಲಿ ಮೆಥೊಟ್ರೆಕ್ಸೇಟ್’ನ್ನು ಕೊಡಲಾಗುತ್ತದೆ. ಜತೆಗೆ Beta – hCG ಪರೀಕ್ಷೆ ನಡೆಸಿ ಅದು ನಿವಾರಣೆ ಆಗಿರುವುದನ್ನು ಖಾತ್ರಿ ಪಡಿಸಲಾಗುತ್ತದೆ. 1 ತಿಂಗಳ ಕಾಲ ವೈದ್ಯರ ಸಂಪರ್ಕದಲ್ಲಿರಬೇಕು.

 

ಟ್ಯೂಬಲ್ ಪ್ರೆಗ್ನೆನ್ನಿಗೆ ಯಾವ ಶಸ್ತ್ರಚಿಕಿತ್ಸೆ?
ಟ್ಯೂಬ್ ಒಡೆದ ಸ್ಥಿತಿಯಲ್ಲಿ (ruptured) ಇದ್ದಾಗ ಅದನ್ನು ಟ್ಯೂಬ್ ನಿವಾರಿಸಲು ಸ್ಯಾಲ್ಪಿಂಗ್ಯಾಕ್ಟೊಮಿ (Salpingectomy) ಮಾಡಬೇಕಾಗುತ್ತದೆ. ಒಂದು ವೇಳೆ ಟ್ಯೂಬ್’ಗೆ ಏನೂ ಹಾನಿಯಾಗದೆ ಇದ್ದರೆ ಟ್ಯೂಬ್’ನಲ್ಲಿನ ಭ್ರೂಣವನ್ನಷ್ಟೇ ಹೊರತೆಗೆಯಲಾಗುವುದು. ಇದನ್ನು ಸ್ಯಾಲ್ಪಿಂಗೊಸ್ಟೊಮಿ (Salpingostomy) ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಲ್ಯಾಪ್ರೊಸ್ಕೋಪಿ ಮೂಲಕ ಮಾಡಲಾಗುತ್ತದೆ.

ಲ್ಯಾಪ್ರೊಸ್ಕೋಪಿಕ್ ಸ್ಯಾಲ್ಪಿಂಗೆಕ್ಟೊಮಿ
ಟ್ಯೂಬ್ ಒಡೆದ ಸ್ಥಿತಿಯಲ್ಲಿ ಅಥವಾ ಟ್ಯೂಬ್’ನಲ್ಲಿಯೇ ಗರ್ಭಪಾತವಾಗಿದ್ದರೆ ಲ್ಯಾಪ್ರೊಸ್ಕೋಪಿಕ್ ಸ್ಯಾಲ್ಪಿಂಗೆಕ್ಟೊಮಿ ಎಂಬ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಕಿಬ್ಬೊಟ್ಟೆಯ ಮೂಲಕ ಉಪಕರಣಗಳನ್ನು ಒಳಗೆ ತೂರಿಸಿ ಈ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ.

ಟ್ಯೂಬ್ ನಿವಾರಣೆಯ ಬಳಿಕ ಗರ್ಭಧಾರಣೆಯ ಸಾಧ್ಯತೆ ಇದೆಯಾ?
ಇದರ ಸಾಧ್ಯತೆ 90% ಆಗಿರುತ್ತದೆ. ಇನ್ನೊಂದು ಗರ್ಭನಾಳ ಆರೋಗ್ಯದಿಂದಿದ್ದರೆ ಮಹಿಳೆ ಸುಲಭವಾಗಿ ಗರ್ಭ ಧರಿಸಬಹುದು.

ಟ್ಯೂಬಲ್ ಪ್ರೆಗನ್ಸಿ ಮತ್ತೆ ಮತ್ತೆ ಪುನರಾವರ್ತನೆ ಆಗುವುದೇ?
ಪುನರಾವರ್ತಿತ ಎಕ್ಟೊಪಿಕ್ ಪ್ರೆಗ್ನೆನ್ಸಿ ಪ್ರಮಾಣ 10-12% ಇದೆ. ಆ ಬಳಿಕದ ಹೆರಿಗೆ ಪ್ರಮಾಣ ಶೇ. 55ರಷ್ಟಿದೆ. ಎಕ್ಟೊಪಿಕ್ ಪ್ರೆಗ್ನೆನ್ಸಿ 2-3 ಸಲ ಆದರೆ, ಪುನರಾವರ್ತಿತ ಹೆರಿಗೆ ಪ್ರಮಾಣ ಶೇ. 25 ಮಾತ್ರ.

ಎರಡೂ ಟ್ಯೂಬ್ ನಿವಾರಣೆ ಮಾಡಿದರೆ, ನಾನು ಗರ್ಭ ಧರಿಸುವುದು ಹೇಗೆ?
ಎಕ್ಟೊಪಿಕ್ ಪ್ರೆಗ್ನೆನ್ಸಿಯಿಂದ ಎರಡೂ ಟ್ಯೂಬ್ ತೆಗೆದು ಹಾಕಿದ್ದರೆ ಐವಿಎಫ್ ಮೂಲಕ ಗರ್ಭಧಾರಣೆ ಸಾಧ್ಯವಿದೆ. ಪ್ರಯೋಗಾಲಯದಲ್ಲಿ ಅಂಡ ಹಾಗೂ ವೀರ್ಯವನ್ನು ಒಗ್ಗೂಡಿಸಿ ಭ್ರೂಣ ಸೃಷ್ಟಿ ಮಾಡಿ ಗರ್ಭಕೋಶಕ್ಕೆ ಸೇರಿಸಲಾಗುವುದು. ಇಲ್ಲಿ ಗರ್ಭನಾಳಗಳ ಅಗತ್ಯವೇ ಉಂಟಾಗದು.

ಹೆಚ್ಚಿನ ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇ ಮೇಲ್ ವಿಳಾಸ: altiushospital@yahoo.com, www.altiushospital.com

Leave a Reply