ನಾಳೆ ಕೆಜಿಎಫ್ ರಿಲೀಸ್ ಆಗುತ್ತೆ! ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ ಕೆಜಿಎಫ್ ಗೆ ಕೋರ್ಟ್ ನೋಟಿಸ್ ನೀಡಿರುವುದು  ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲ ಸಿನಿಮಾಗಾಗಿ ಕಾಯುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ.  ಕೋರ್ಟ್ ನೋಟಿಸ್ ಹೊರತಾಗಿಯೂ ಕೆಜಿಎಫ್ ನಾಳೆ ಎಂದಿನಂತೆ ಚಿತ್ರ ಬಿಡುಗಡೆ ಯಾಗಲಿದ್ದು, ಅಭಿಮಾನಿಗಳು ನಿರಾಸೆಯಾಗುವ ಅಗತ್ಯವಿಲ್ಲ.

ಹೌದು, ನಾಳೆ ಸಿನಿಮಾ ಪೂರ್ವನಿಗದಿ ಯಂತೆ ತೆರೆ ಮೇಲೆ ಬರಲಿದೆ. ಅದಕ್ಕೆ ಕಾರಣ ಕೆವೀಯಟ್!

ಚಿತ್ರಕ್ಕೆ ಸಂಭಂದಿಸಿದಂತೆ ಯಾರಾದರೂ ಕೋರ್ಟ್ ಮೆಟ್ಟಿಲೇರಿ ತಗಾದೆ ಎತ್ತಿದರೆ, ಆ ಸಂಬಂಧ ವಿಚಾರಣೆ ವೇಳೆ ನಮ್ಮ ವಾದವನ್ನು ಆಲಿಸಬೇಕು ಎಂದು ಚಿತ್ರತಂಡ ಕೆವೀಯಟ್ ಮೂಲಕ ಮನವಿ ಮಾಡಿದೆ. ಹೀಗಾಗಿ ನಾಳೆ ಚಿತ್ರ ಬಿಡುಗಡೆಯಾದರೂ ಚಿತ್ರ ತಂಡಕ್ಕೆ ಸಮಸ್ಯೆ ಎದುರಾಗುವುದಿಲ್ಲ.

ಕಳೆದ ಎರಡೂವರೆ ವರ್ಷಗಳಿಂದ ಚಿತ್ರ ನಿರ್ಮಾಣವಾಗಿದೆ. 80 ಕೋಟಿ ಹಣ ಸುರಿಯಲಾಗಿದ್ದು, ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿ ಹೆಚ್ಚು ಕಮ್ಮಿ ಒಂದು ತಿಂಗಳಾಗಿದೆ. ಎರಡನೇ ಟ್ರೈಲರ್ ಬಿಡುಗಡೆಯಾಗಿ ಎರಡು ವಾರಗಳಾಗಿವೆ. ಇಷ್ಟು ಸಮಯ ಯಾವುದೇ ಚಕಾರ ಎತ್ತದೇ ಈಗ ಚಿತ್ರ ಬಿಡುಗಡೆಗೆ ಕೆಲವೇ ಗಂಟೆ ಬಾಕಿ ಇರುವಾಗ ಈ ತಕರಾರು ಎದ್ದಿರುವುದು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ. ಹೀಗಾಗಿ ರಾಜ್ಯದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಜಿಎಫ್ ಸಿನಿಮಾ ಟೈಟಲ್ ಬದಲಿಸುವಂತೆ ಸೆಷನ್ಸ್ ಕೋರ್ಟ್‌ಗೆ ಅರ್ಜಿ ವಕೀಲ ಲೋಹಿತ್ ಅರ್ಜಿ ಸಲ್ಲಿಕೆ ಮಾಡಿದ್ದರು. ಕೆಜಿಎಫ್ ಚಿನ್ನದ ಗಣಿ ಹಾಗೂ ಅಲ್ಲಿನ ಸ್ಥಳವನ್ನು ರಕ್ತಪಾತದ ಮೂಲಕ ತೋರಿಸಲು ಹೊರಟ್ಟಿದ್ದಾರೆ. ಇದರಿಂದ ಕೆಜಿಎಫ್‌ಗೆ ಅಪಖ್ಯಾತಿ ಬರುತ್ತದೆ. ಹಾಗಾಗಿ ಕೆಜಿಎಫ್ ಚಿತ್ರ ರಿಲೀಸ್ ಮಾಡದಂತೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ್ರು.

ಕೆಜಿಎಫ್ ಚಿತ್ರ ರೌಡಿ ತಂಗಂ ಅಲಿಯಾಸ್ ತಂಗರಾಜ್ ಜೀವನ ಆಧಾರಿತ ಚಿತ್ರ. ತಂಗಂ ಕೇವಲ 21 ವರ್ಷಕ್ಕೆ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಕೆಜಿಎಫ್‌ನ ಚೋಟ ರೌಡಿ. ತಂಗರಾಜ್ ಕುಟುಂಬದಲ್ಲಿ ಒಟ್ಟು ನಾಲ್ವರು ಸಹೋದರ ಸದಸ್ಯರು ಕೂಡ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಅದರಲ್ಲಿ ನಾಲ್ಕನೆಯವನು ಈ ತಂಗಂ. ಕೆಜಿಎಎಫ್ ನಗರದ ಪ್ರಾಂಕಿನ್ ಲೈನ್ ನಿವಾಸಿಯಾಗಿದ್ದ ತಂಗಂ, ಕೆಜಿಎಫ್ ತಾಲೂಕಿನ ವಿವಿಧ ಪೊಲೀಸ್ ಠಾಣೆಯಲ್ಲಿ 25 ಕ್ಕೂ ಹೆಚ್ಚು ಕಳ್ಳತನ, ದರೋಡೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. 1996 ರಲ್ಲಿ ಆಂಧ್ರದಲ್ಲಿ ಇನ್ಸ್‌ಪೆಕ್ಟರ್ ಶಿವಕುಮಾರ್ ಗುಂಡೇಟಿಗೆ ಬಲಿಯಾಗಿದ್ದ. ರೌಡಿ ತಂಗಂ, ನಕಲಿ ಎನ್‌ಕೌಂಟರ್ ಎಂದು ಪೋಷಕರು ದೂರು ನೀಡಿದ್ದು, ಪೋಷಕರು, ಇದುವರೆಗೂ ತಂಗಂ ಮರಣೋತ್ತರ ಪರೀಕ್ಷೆ ವರದಿಯನ್ನು ಪೊಲೀಸರು ನೀಡಿಲ್ಲ ಎನ್ನುವ ಆರೋಪವೂ‌ ಇದೆ. ನಟ ಲೂಸ್ ಮಾದ ಅಭಿನಯದ ಕೋಲಾರ ಸಿನಿಮಾ ಚಿತ್ರಕಥೆಯೂ ಕೂಡ ರೌಡಿ ತಂಗಂ ಜೀವನ ಚರಿತ್ರೆ ಸಿನಿಮಾ ಮಾಡಲಾಗಿತ್ತು, ಕೋಲಾರ ಸಿನಿಮಾ ನಿರ್ದೇಶಕನ ವಿರುದ್ದ ಕೆಜಿಎಫ್ ನ್ಯಾಯಾಲಯದಲ್ಲಿ ತಂಗಂ ಪೋಷಕರು ದೂರು ದಾಖಲಿಸಿದ್ದಾರೆ.

ಈ ನಡುವೆ ನಾವು ಮಾಡುತ್ತಿರುವ ಚಿತ್ರ ಹಾಗೂ ಕೆಜಿಎಫ್ ಸಿನಿಮಾದ ಚಿತ್ರದಲ್ಲಿ ಇರೋ ಪಾತ್ರ ಒಂದೇ ರೀತಿ ಇದೆ. ಹೀಗಾಗಿ ಕೆಜಿಎಫ್ ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ನಿರ್ಮಾಪಕ ವೆಂಕಟೇಶ್ ಹೇಳಿದ್ದಾರೆ.

Leave a Reply