ಕೆಜಿಎಫ್ ಗುಂಗಲಿರೋ ಅಭಿಮಾನಿಗಳಿಗೆ ಡಬಲ್ ಧಮಾಕ ಕೊಟ್ಟ ಪೈಲ್ವಾನ್ ಸುದೀಪ್!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಕನ್ನಡ ಮಾತ್ರವಲ್ಲದೆ ಭಾರತ ಹಾಗೂ ಹೊರ ದೇಶಗಳಲ್ಲಿರೋ ಚಿತ್ರ ರಸಿಕರು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರದ ಗುಂಗಲ್ಲಿ ತೇಲುತ್ತಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಲುಕ್ ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳಿಗೆ ಈ ವಾರಾಂತ್ಯದಲ್ಲಿ ಡಬಲ್ ಧಮಾಕ ಸಿಕ್ಕಂತಾಗಿದೆ.

ಪೈಲ್ವಾನ್ ಚಿತ್ರವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಹೀಗಾಗಿ ಈ ಚಿತ್ರ ಕೂಡ ಕನ್ನಡ ಸಿನಿಮಾದತ್ತ ದೇಶವೇ ತಿರುಗಿ ನೋಡುವಂತೆ ಮಾಡುವ ನಿರೀಕ್ಷೆ ಇದೆ.

ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಸುದೀಪ್ ಅವರ ದೈಹಿಕ ಕಸರತ್ತು, ರಗಡ್ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

Leave a Reply