ಇಂದು ರಾಜ್ಯ ಸಚಿವ ಸಂಪುಟ ಫೈನಲ್..! ಯಾರು ಇನ್? ಯಾರು ಔಟ್?

ಡಿಜಿಟಲ್ ಕನ್ನಡ ಟೀಮ್:

ನಾಳೆ ಸಚಿವ ಸಂಪುಟ ವಿಸ್ತರಣೆ ಮಾಡ್ತೇವೆ ಎಂದು ಈ ಹಿಂದೆ ಘೋಷಣೆ ಮಾಡಿದಂತೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಂತಿಮ ಹಂತದ ಸಂಪುಟ ವಿಸ್ತರಣೆಗೆ ಸಜ್ಜಾಗಿದೆ. ಕಾಂಗ್ರೆಸ್ ಪಾಲಿನ ಆರು ಸ್ಥಾನಗಳು ಹಾಗೂ ಜೆಡಿಎಸ್ ಪಾಲಿನ ಎರಡು ಸ್ಥಾನಗಳನ್ನು ಶನಿವಾರ ಭರ್ತಿ ಮಾಡೋದು ಬಹುತೇಕ ಕನ್ಫರ್ಮ್ ಆಗಿದೆ. ಇದರ ಜೊತೆಗೆ ಕಾಂಗ್ರೆಸ್‌ನಲ್ಲಿ ಇಬ್ಬರು ಸಚೊವರನ್ನು ಕೈಬಿಟ್ಟು ಹೊರಬರನ್ನು ಆಯ್ಕೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.. ಅದರ ನಡುವೆ ಬಂಡಾಯ ಸಾರಿದ್ದ ಬಹುತೇಕ ಮುಖಗಳಿಗೆ ಮಂತ್ರಿ ಸ್ಥಾನ ನೀಡದೇ ಇರಲು ಕಾಂಗ್ರೆಸ್ ನಾಯಕತ್ವ ನಿರ್ಣಯ ಕೈಗೊಂಡಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದ ಬಳ್ಳಾರಿಯ ನಾಗೇಂದ್ರ, ಆನಂದ್ ಸಿಂಗ್, ಡಾ. ಸುಧಾಕರ್, ಪ್ರತಾಪಗೌಡ ಪಾಟೀಲ್‌ಗೆ ಸಚಿವ ಸ್ಥಾನ ನೀಡದೇ ಇರಲು ನಿರ್ಧಾರ ಮಾಡಲಾಗಿದೆ. ಇವರ ಜೊತೆಗೆ ಹಾಗ್ಗಿಂದಾಗೆ ಸರ್ಕಾರದ ವಿರುದ್ಧ ಮೌನ ಬಂಡಾಯ ಸಾರುವ ಮೂಲಕ ತಾನು ವಿಭಿನ್ನ ಎಂದು ಮಾಧ್ಯಮಗಳ ಎದುರು ನಿಲ್ಲುವ ಸಚಿವ ರಮೇಶ್ ಜಾರಕಿಹೊಳಿಗೆ ಕೊಕ್ ಕೊಡಲು‌ ನಿರ್ಧಾರ ಮಾಡಿದ್ದು, ಇವರ ಜೊತೆಗೆ ಅರಣ್ಯ ಸಚಿವ ಆರ್ ಶಂಕರ್, ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯಲಿಲ್ಲ ಅನ್ನೋ ಕಾರಣಕ್ಕೆ ಶಂಕರ್ ಅವರನ್ನು ಕೈ ಬಿಡಲು ನಿರ್ಧಾರ ಕೈಗೊಳ್ಳಲಾಗಿದೆ.. ಹೀಗಾಗಿ ಕಾಂಗ್ರೆಸ್ ಎಂಟು ಸ್ಥಾನಗಳನ್ನು ಭರ್ತಿ ಮಾಡಲಿದ್ದು ಪಟ್ಟಿ ಅಂತಿಮವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಕಾಂಗ್ರೆಸ್‌ನಲ್ಲಿ ಸಂಭಾವ್ಯ ಸಚಿವರ ಪಟ್ಟಿಯನ್ನು ನೋಡೋದಾದ್ರೆ

ಸಿ.ಎಸ್ ಶಿವಳ್ಳಿ
ಎಂಟಿಬಿ ನಾಗರಾಜ್
ತುಕಾರಾಂ
ಬಿ.ಸಿ. ಪಾಟೀಲ್ / ಎಂ.ಬಿ.ಪಾಟೀಲ್
ಪರಮೇಶ್ವರ ನಾಯ್ಕ್
ಸತೀಶ್ ಜಾರಕಿಹೊಳಿ
ಬಿ.ಆರ್ ತಿಮ್ಮಾಪುರ
ರಹೀಂಖಾನ್

ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪಗರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಗು ಹೆಸರು ಅದಲು ಬದಲಿ ಆದರೂ ಅಚ್ಚಿಯಿಲ್ಲ ಅನ್ನೋ ಮಾತಿದ್ದು, ಕಡೇ ಕ್ಷದ ಲಾಬಿಯಿಂದ ಯಾರು‌ಬೇಕಾದರೂ ಔಟ್ ಆಗಬಹುದು, ಬೇರೇ ಯಾರಾದರೂ ಇನ್ ಆಗಬಹುದು. ಲಿಂಗಾಯತ ಕೋಟಾದಡಿ ಎಂ.ಬಿ. ಪಾಟೀಲ್ ಹಾಗೂ ಬಿ.ಸಿ. ಪಾಟೀಲ್ ನಡುವೆ ಪೈಪೋಟಿ ಶುರುವಾಗಿದ್ದು ಯಾರಿಗೆ ಅದೃಷ್ಟ ಒಲಿಯಲಿದೆ ಅನ್ನೋದು ನಾಳೆ ಗೊತ್ತಾಗಬೇಕಿದೆ.

ಈ ನಡುವೆ Jds ಶಾಸಕರಲ್ಲಿ ಆತಂಕ ಹೆಚ್ಚಾಗಿದ್ದು, ಖಾಲಿ ಇರುವ ಎರಡು ಸ್ಥಾನ ಭರ್ತಿ ಬಗ್ಗೆ ಇನ್ನೂ ಯಾವುದೇ ಖಚಿತತೆ ಸಿಗುತ್ತಿಲ್ಲ. ಹೀಗಾಗಿ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಾಗಿದೆ. ಜೆಡಿಎಸ್‌ನಲ್ಲಿ ಎರಡು ಸ್ಥಾನಗಳಷ್ಟೇ ಬಾಕಿ ಉಳಿದಿದ್ದು, ಬಸವರಾಜ್ ಹೊರಟ್ಟಿ, ಹೆಚ್ ಕೆ ಕುಮಾರಸ್ವಾಮಿ, ಬಿ ಎಂ ಫರೂಕ್, ಡಾ. ಕೆ ಅನ್ನದಾನಿ ಹಾಗೂ ಬಿಎಸ್‌ಪಿಯ ಎನ್.ಮಹೇಶ್ ರೇಸ್ ನಲ್ಲಿ ಇದ್ದಾರೆ. ಧನರ್ಮಾಸ ಅನ್ನೋ ಕಾರಣಕ್ಕೆ ಸಚಿವ ಸ್ಥಾನ ಭರ್ತಿ ಡೌಟ್ ಅನ್ನೋ ಮಾತುಗಳು ಕೇಳಿ ಬಂದಿದ್ದು. ಜೆಡಿಎಸ್ ಕಡೆಯಿಂದ ಸಂಪುಟ ವಿಸ್ತರಣೆ ಬೇಡ ಎಂದು ಸಚಿವ ರೇವಣ್ಣ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

Leave a Reply