100 ಕೋಟಿ ದಾಟಿತು ಕೆಜಿಎಫ್! ಕನ್ನಡ ಸಿನಿಮಾದ ಐತಿಹಾಸಿಕ ಸಾಧನೆ

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡಿದ್ದು ಮಂಗಳವಾರ ಅಧಿಕೃತವಾಗಿ ಚಿತ್ರದ ಗಳಿಕೆ 100 ಕೋಟಿ ತಲುಪಿದೆ. ಅದರೊಂದಿಗೆ ನೂರರ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಇತಿಹಾಸ ಬರೆದಿದೆ.

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ವೃತ್ತಿ ಜೀವನದಲ್ಲೇ ಬಹು ನಿರೀಕ್ಷಿತ ಹಾಗೂ ಬಿಗ್ ಬಜೆಟ್ (₹200 ಕೋಟಿ) ಚಿತ್ರವಾದ ಜಿರೊ ಚಿತ್ರಕ್ಕೆ ಸೆಡ್ಡು ಹೊಡೆದು ಮಕಾಡೆ ಮಲಗಿಸಿದ ಕೆಜಿಎಫ್ ಕನ್ನಡ ಸೇರಿ ಬಿಡುಗಡೆಯಾದ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಐದನೇ ದಿನದವರೆಗಿನ ಒಟ್ಟಾರೆ ಕಲೆಕ್ಷನ್ ಮಾಹಿತಿ ಬಿಡುಗಡೆಯಾಗಿದ್ದು, ಐದು ದಿನಗಳಲ್ಲಿ ₹ 101.8 ಕೋಟಿ ಗಳಿಕೆಯಾಗಿದೆ. ಐದನೇ ದಿನವಾದ ಮಂಗಳವಾರ ಕ್ರಿಸ್ ಮಸ್ ರಜೆ ದಿನವಾದ ಪರಿಣಾಮ ಈ ದಿನದ ಗಳಿಕೆ ಮೊದಲ ನಾಲ್ಕು ದಿನವನ್ನು ಮೀರಿಸಿದೆ. ಹಿಂದಿ ಭಾಷೆಯಿಂದಲೇ ₹16.45 ಕೋಟಿ ಗಳಿಕೆಯಾಗಿದೆ.

ಮೊದಲ ದಿನ: ₹ 23
ಎರಡನೇ ದಿನಕ್ಕೆ: ₹ 40
ಮೂರನೇ ದಿನಕ್ಕೆ: ₹ 58
ನಾಲ್ಕನೇ ದಿನಕ್ಕೆ: ₹ 77
ಐದನೇ ದಿನಕ್ಕೆ: ₹ 101.8

Leave a Reply