ಲ್ಯಾಪ್ರೊಸ್ಕೋಪಿಕ್ ವಿಧಾನದಲ್ಲಿ ಗರ್ಭಕೋಶ ನಿವಾರಣೆ ಹೇಗೆ?

ಡಾ.ಬಿ.ರಮೇಶ್

ಏನಿದು ಲ್ಯಾಪ್ರೊಸ್ಕೋಪಿಕ್ ಹಿಸ್ಟರೆಕ್ಟಮಿ?
ಲ್ಯಾಪ್ರೊಸ್ಕೋಪಿಕ್ ವಿಧಾನದಲ್ಲಿ ಗರ್ಭಕೋಶವನ್ನು ನಿವಾರಿಸುವ ಪ್ರಕ್ರಿಯೆಯನ್ನು ‘ಲ್ಯಾಪ್ರೊಸ್ಕೋಪಿಕ್ ಹಿಸ್ಟರೆಕ್ಟೊಮಿ’ ಎನ್ನುತ್ತಾರೆ. ಇದಕ್ಕೆ ‘ಕೀ ಹೋಲ್ ಸರ್ಜರಿ’ ಎಂದೂ ಕರೆಯುತ್ತಾರೆ. ಗರ್ಭಕೋಶದ ಜತೆಗೆ ಇರುವ ಗರ್ಭನಾಳ ಹಾಗೂ ಅಂಡಕೋಶವನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ‘ಸ್ಯಾಲ್ಫಿಂಗೊ- ಉಫೊರೆಕ್ಟಮಿ’ ಎಂದು ಕರೆಯುತ್ತಾರೆ.

ಗರ್ಭಕೋಶ ನಿವಾರಣೆ ಯಾವಾಗ ಅನಿವಾರ್ಯ?
ಕೆಳಕಂಡ ಸಂದರ್ಭಗಳಲ್ಲಿ ಗರ್ಭಕೋಶ ತೆಗೆಸಿಹಾಕುವ ಸ್ಥಿತಿ ಅನಿವಾರ್ಯವಾಗುತ್ತದೆ:
• ಅತಿಯಾದ ಹಾಗೂ ಅನಿಯಮಿತ ಋತುಸ್ರಾವದ ಸಂದರ್ಭದಲ್ಲಿ
• ಫೈಬ್ರಾಯ್ಡ್ ಗೆಡ್ಡೆಗಳಿದ್ದಾಗ.
• ಗರ್ಭಕೋಶ ಅಥವಾ ಗರ್ಭಕಂಠದ ಕ್ಯಾನ್ಸರ್ ಇದ್ದಾಗ.
ಅತಿಯಾದ ರಕ್ತಸ್ರಾವ, ಫೈಬ್ರಾಯ್ಡ್ ಗೆಡ್ಡೆಗಳನ್ನು ಒಮ್ಮೊಮ್ಮೆ ಮಾತ್ರೆಗಳಿಂದ ಗುಣಪಡಿಸಬಹುದಾಗಿದೆ. ಆದರೆ ಅದರಿಂದಲೂ ರಕ್ತಸ್ರಾವ ನಿಲ್ಲದೆ ಇದ್ದರೆ, ಫೈಬ್ರಾಯ್ಡ್ ಗೆಡ್ಡೆಗಳ ಸಮಸ್ಯೆ ವಿಕೋಪಕ್ಕೆ ಹೋದರೆ ಗರ್ಭಕೋಶವನ್ನು ತೆಗೆದುಹಾಕುವ ಬಗ್ಗೆ ನಿರ್ಧರಿಸಲಾಗುತ್ತದೆ.

ಗರ್ಭಕೋಶ ನಿವಾರಣೆಯ ಬಳಿಕ
• ಆ ಬಳಿಕ ಋತುಚಕ್ರ ಬರುವುದಿಲ್ಲ.
• ಗರ್ಭ ಧರಿಸುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಗರ್ಭನಿರೋಧಕ ಬಳಸುವ ಅವಶ್ಯಕತೆ ಉಂಟಾಗುವುದಿಲ್ಲ.

Laparoscopy ವಿಧಾನದಿಂದ ಏನೇನು ಉಪಯೋಗ?
• ನೋವು ಕಡಿಮೆ.
• ರಕ್ತಸ್ರಾವ ಕಡಿಮೆ.
• ಬೇಗ ಗುಣಮುಖರಾಗಬಹುದು
• ಶಸ್ತ್ರಚಿಕಿತ್ಸೆ ಮಾಡಿದ ಭಾಗದಲ್ಲಿ ಕಲೆಗಳು ಆಗುವುದಿಲ್ಲ.
• ಸೋಂಕಿನ ಸಾಧ್ಯತೆ ಕಡಿಮೆ.
• ಹೆಚ್ಚುದಿನ ಆಸ್ಪತ್ರೆಯಲ್ಲಿ ಇರಬೇಕಾದ ಅಗತ್ಯವಿಲ್ಲ.

ಲ್ಯಾಪ್ರೊಸ್ಕೋಪಿಕ್ ಹಿಸ್ಟರೆಕ್ಟಮಿ
ಮಹಿಳೆಗೆ ಜನರಲ್ ಅನಸ್ಥೇಶಿಯಾ ಕೊಟ್ಟು ಗರ್ಭಕೋಶ ನಿವಾರಣೆಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಮೊದಲು ಚಿಕ್ಕ ಸೂಜಿಯ ಸಹಾಯದಿಂದ ಹೊಟ್ಟೆಯ ಒಳಗೆ ಕಾರ್ಬನ್ ಡೈ ಆಕ್ಸೈಡ್’ನ್ನು ಸೇರಿಸಲಾಗುತ್ತದೆ. ಆ ಕಾರಣದಿಂದ ಗರ್ಭಕೋಶವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ. ಆ ಬಳಿಕ 3 ಹೆಚ್ಚುವರಿ ರಂಧ್ರಗಳ ಮೂಲಕ ಉಪಕರಣಗಳನ್ನು ತೂರಿಸಿ ಗರ್ಭಕೋಶ, ಅಂಡನಾಳ ಹಾಗೂ ಅಂಡಕೋಶಗಳನ್ನು ಯೋನಿ ಮೂಲಕ ತೆಗೆಯಲಾಗುತ್ತದೆ.

ಗರ್ಭಕೋಶದ ಜತೆಗೆ ಅಂಡಕೋಶ, ಅಂಡನಾಳದ ನಿವಾರಣೆ
ಗರ್ಭಕೋಶ ತೆಗೆಯುವ ಸಂದರ್ಭದಲ್ಲಿ ಅಂಡನಾಳ ಹಾಗೂ ಅಂಡಕೋಶ ತೆಗೆಯಲೇಬೇಕೆಂದೇನಿಲ್ಲ. ಅಂಡಕೋಶವನ್ನು ಹಾಗೆಯೇ ಬಿಟ್ಟರೆ ಅದು 5 ವರ್ಷಗಳ ತನಕ ಹಾರ್ಮೋನು ಉತ್ಪಾದನೆ ಮಾಡುತ್ತಿರುತ್ತದೆ. ಮನೆಯಲ್ಲಿ ಅಮ್ಮ ಅಕ್ಕ, ತಂಗಿ ಯಾರಿಗಾದರೂ ಅಂಡಕೋಶದ ಕ್ಯಾನ್ಸರ್, ಕೋಲನ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಇತಿಹಾಸ ಇದ್ದರೆ ಗರ್ಭಕೋಶದ ನಿವಾರಣೆಯ ಸಂದರ್ಭದಲ್ಲಿ ಅಂಡನಾಳ ಹಾಗೂ ಅಂಡಕೋಶವನ್ನು ಕೂಡ ತೆಗೆದುಹಾಕಲಾಗುತ್ತದೆ.

ಗರ್ಭಕೋಶ ಬಳಿಕ ಚೇತರಿಕೆ
ಲ್ಯಾಪ್ರೊಸ್ಕೋಪಿಕ್ ವಿಧಾನದ ಮೂಲಕ ಗರ್ಭಕೋಶದ ನಿವಾರಣೆ ಬಳಿಕ ಕೆಲವು ದಿನಗಳ ಕಾಲ ನೋವು ನಿವಾರಕಗಳನ್ನು ಕೊಡಲಾಗುತ್ತದೆ. ಬಹಳ ದಿನಗಳ ಕಾಲ ಹಾಸಿಗೆ ವಿಶ್ರಾಂತಿ ಏನೂ ಬೇಕಿಲ್ಲ. ಉಸಿರು ತೆಗೆದುಕೊಳ್ಳುವ ಬಿಡುವ ವ್ಯಾಯಾಮ ಮಾಡುವುದು ಒಳ್ಳೆಯದು. ಮಹಿಳೆ ತನಗೆ ಸೂಕ್ತ ಎನಿಸಿದಾಗ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಬಹುದು. ಉದ್ಯೋಗಸ್ಥ ಮಹಿಳೆ 1 ವಾರದಲ್ಲಿ ಕೆಲಸಕ್ಕೆ ಹೊರಡಬಹುದು. 10-15 ದಿನಗಳ ಕಾಲ ಯಾವುದೇ ಭಾರದ ಕೆಲಸ ಮಾಡಬಾರದು ಹಾಗೂ ಲೈಂಗಿಕ ಚಟುವಟಿಕೆಯಲ್ಲಿ ತೊಡಗಬಾರದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply