ಲೋಕಸಭಾ ಚುನಾವಣೆಗೆ ಬಿಜೆಪಿ ಸಿನಿಮಾ ಅಸ್ತ್ರ?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಚುನಾವಣೆ ಹತ್ತಿರ ಆಗ್ತಿದ್ದ ಹಾಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ – ಕಾಂಗ್ರೆಸ್ ನಡುವೆ ಮಾತಿನ ಕಾಳಗವೇ ನಡೆಯುತ್ತಿದೆ. ಮಾತಿನ ಕಾಳಗದ ಜೊತೆಗೆ ಇದೀಗ ಸಿನಿಮಾ ಒಂದು ಸೇರಿಕೊಂಡಿದೆ. ಕಳೆದ ಬಾರಿ‌ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿತ್ತು, ಆಡಳಿತ ವಿರೋಧಿ‌‌ ಅಲೆಯಲ್ಲಿ ಪ್ರಧಾನಿ ಅಭ್ಯರ್ಥಿ ಆಗಿದ್ದ ನರೇಂದ್ರ ಮೋದಿ‌ ನಾಯಕತ್ವಕ್ಕೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಯುಪಿಎ ಅವಧಿಯಲ್ಲಿ ಕೆಲವೊಂದಿಷ್ಟು ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಜೋರಾಗಿತ್ತು. ಅದು ಚುನಾವಣಾ ವಿಷಯವಾಗಿ ವಿಷಯವಾಗಿ ಮೋದಿ ಅವರನ್ನು ಗೆಲುವಿನ ದಡ ಸೇರಿಸಿತ್ತು. ಆದ್ರೀಗ ಪ್ರಧಾನಿ ನರೇಂದ್ರ ಮೋದಿಗೆ ಹಾಡಿಗೆ ಅಡ್ಡಿಗಳು ಎದುರಾಗಿದ್ದು ಇವುಗಳನ್ನು ಎದುರಿಸಲು ಹೊಸ ಯೋಜನೆ ಹಾಕಿಕೊಂಡಿದ್ದು, ಅದರಲ್ಲಿ ಒಂದು ಸಿನಿಮಾ.

ಹೌದು, ‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್’ ಚಿತ್ರದ ಟ್ರೈಲರ್ ಎಲ್ಲಾ ಕಡೆ ವೈರಲ್​ ಆಗಿದೆ. ಮಾಜಿ ಪ್ರಧಾನಿ ಮನ್​​ಮೋಹನ್ ಸಿಂಗ್ ಅವರ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದ ಸಂಜಯ್ ಬರು ಅವರು ಮನಮೋಹನ್ ಸಿಂಗ್ ಅವರ ರಾಜಕೀಯ ಜೀವನ ಕುರಿತು ಪುಸ್ತಕ ಬರೆದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದೇ ಪುಸ್ತಕ ಹಿಡಿದುಕೊಂಡು ಆಧಾರಿತ ಚಿತ್ರದ​ ಇದಾಗಿದ್ದು, ಇದರ ಟ್ರೈಲರ್ ವಿವಾದಕ್ಕೆ ಕಾರಣವಾಗಿದೆ.

2004 ರಿಂದ 2014 ಅವಧಿಯಲ್ಲಿ ಮನಮೋಹನ್​ ಸಿಂಗ್​ ಅವರ ಸರ್ಕಾರದ ಬಗ್ಗೆ ನಿರ್ಮಾಣವಾದ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರನ್ನ ತಪ್ಪಾಗಿ ಅರ್ಥೈಸಲಾಗಿದೆ. ಜೊತೆಗೆ ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್ ವರ್ಚಸ್ಸಿಗೆ ಧಕ್ಕೆ ತರುವಂತೆ ಚಿತ್ರಿಸಲಾಗಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಚಿತ್ರದ ಕುರಿತು ಕೇಳಿಬಂದಿರುವ ಟೀಕೆಗಳ ಬಗ್ಗೆ ಮನಮೋಹನ್​ ಸಿಂಗ್​ ಪಾತ್ರಧಾರಿ ಅನುಪಮ್ ಖೇರ್​ ತಿರುಗೇಟು ನೀಡಿದ್ದಾರೆ. ನಟನೆ ಮಾಡುವುದು ಕೇವಲ ನನ್ನ ಕೆಲಸವಾಗಿದೆ. ಚಿತ್ರ ರೆಡಿ ಮಾಡಿ ಪ್ರೇಕ್ಷಕರಿಗೆ ತಲುಪಿಸುವುದು ಚಿತ್ರತಂಡದ ಕೆಲಸ. ನಾವು ಚಿತ್ರವನ್ನು ರೆಡಿ ಮಾಡಿದ್ದೇವೆ. ವಿರೋಧಿಸುವವರ ಬಗ್ಗೆ ಅಷ್ಟು ಪ್ರಾಮುಖ್ಯತೆ​​ ಕೊಡಬಾರದು. ಚಿತ್ರದ ಟ್ರೈಲರ್​​​ಗೆ ಸೆನ್ಸಾರ್​​​ ಬೋರ್ಡ್ ಸರ್ಟಿಫಿಕೇಟ್ ಕೊಟ್ಟಾಗಿದೆ‌ ಎಂದಿದ್ದಾರೆ.

ಇನ್ನು ಚಿತ್ರದ ಬಗ್ಗೆ ಬಿಜೆಪಿ ಟ್ಟೀಟ್ ಮಾಡಿದ್ದು. 10 ವರ್ಷ ಕುಟುಂಬವೊಂದು ದೇಶ ಆಳಿದ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಪ್ರಚಾರವನ್ನು ನೀಡಿದೆ. ತಮ್ಮ ರಾಜಕೀಯ ಜೀವನದ ಕುರಿತೇ ಚಿತ್ರ ಸಿದ್ಧವಾಗಿದ್ರೂ ಮನಮೋಹನ್​ ಸಿಂಗ್​ ಮಾತ್ರ ಮೌನವಾಗಿಯೇ ಇದ್ದಾರೆ.

ಕಾಂಗ್ರೆಸ್ ಈ ಬಗ್ಗೆ ಈಗಾಗಲೇ ಕಿಡಿಕಾರಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಹಣಿಯಲು ಬಿಜೆಪಿ ಮಾಡಿರುವ ಕುತಂತ್ರ ಎಂದು ಟೀಕಿಸಿದೆ. ಕಳೆದ ಬಾರಿ ಯುಪಿಎ ಸರ್ಕಾರದ ಅಕ್ರಮಗಳ ಬಗ್ಗೆ ಅಬ್ಬರದ ಪ್ರಚಾರ ಮಾಡಲಾಗಿತ್ತು. ಇದೀಗ ಮತ್ತೆ ಅದೇ ವಿಚಾರಗಳನ್ನು ಸಿನಿಮಾ ಮೂಲಕ ಜನರಿಗೆ ತೋರಿಸಿ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸುವಂತೆ ಪ್ರೇರೇಪಿಸುವ ಪ್ರಯತ್ನ ಎಂದು ವಿಶ್ಲೇಷಿಸಲಾಗಿದೆ.

Leave a Reply