ರಾಜ್ಯದಲ್ಲಿ ಆಕ್ಸಿಡೆಂಟಲ್ ಸಿಎಂ..? OR ಜೈಲ್​ ಸಿಎಂ..?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜಕೀಯ ಜೀವನ ಆಧರಿತ ಚಿತ್ರ ‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್’​ ಟ್ರೈಲರ್​ ಈಗ ಎಲ್ಲೆಡೆ ಭಾರೀ ಸದ್ದು ಮಾಡ್ತಿದೆ. ಇದ್ರ ಜೊತೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಟಾಕ್ ವಾರ್​ಗೂ ಸಹ ವೇದಿಕೆಯಾಗಿದೆ. ಹೀಗಿರುವಾಗ ಮೈತ್ರಿ ಸರ್ಕಾರದ ಸಾರಥಿ ಕುಮಾರಸ್ವಾಮಿ ಕಾಲೆಳೆಯೋ ಕೆಲಸವನ್ನ ಬಿಜೆಪಿ ಮಾಡಿದೆ. ರಾಜ್ಯದಲ್ಲಿ ‘ಆ್ಯಕ್ಸಿಡೆಂಟಲ್ ಸಿಎಂ’ ಚಿತ್ರ ನಿರ್ಮಾಣವಾದರೆ ನಾಯಕ ಪಾತ್ರಕ್ಕೆ ಯಾರು ಸೂಕ್ತ ಎಂದು ಟ್ವಿಟ್ಟರ್​ನಲ್ಲಿ ಬಿಜೆಪಿ ಪ್ರಶ್ನೆ ಮಾಡಿದೆ.

ಬಿಜೆಪಿ ಟ್ವೀಟ್​ಗೆ ಬೆಂಬಲಿಗರು ಉಘೇ ಉಘೇ ಎಂದು ಟ್ವೀಟ್​ ಮಾಡಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ಸರಿಯಾಗಿ ಹೇಳಿದ್ರಿ ಎಂದು ಕಾಮೆಂಟ್​ ಮಾಡಿದ್ದಾರೆ. ಉಳಿದಂತೆ ಕುಮಾರಸ್ವಾಮಿಯೇ ನಟ ಭಯಂಕರ, ಅವರ ಸ್ಥಾನವನ್ನು ತುಂಬಲು ಯಾವ ನಟನಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ರೆ, ಕೆಲವು ಟ್ವಿಟಿಗರು, ಬಿಜೆಪಿ ಟ್ವೀಟ್‌ಗೆ ತೀಕ್ಷ್ಣವಾಗೇ ಪ್ರತಿಕ್ರಿಯಿಸಿದ್ದಾರೆ.. ಬಿಜೆಪಿ ಹೇಳಿಕೆಗೆ ಸರಿಯಾಗೇ ತಿರುಗೇಟು ನೀಡಿರುವ ಅವರು .‘ಸಿಎಂ ಇನ್​ ಜೈಲ್’​ ಅನ್ನೋ ಚಿತ್ರ ನಿರ್ಮಾಣವಾದರೆ ಯಡಿಯೂರಪ್ಪ ಪಾತ್ರಕ್ಕೆ ಸೂಕ್ತ ನಟನ್ಯಾರು ಎಂದು ರೀಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಬಿಎಸ್‌ವೈ ಅವರನ್ನು ಎಳೆದು ತಂದಿದ್ದಾರೆ.

ಲೋಕಸಭಾ ಎಲೆಕ್ಷನ್‌ ಹತ್ತಿರ ಆಗ್ತಿದ್ದ ಹಾಗೆ ರಾಜಕೀಯ ನಾಯಕರ ಮಾತಿನ ವಾರ್‌ ಜೋರಾಗಿದ್ದು, ಟ್ವೀಟ್​ನಲ್ಲಿ ಬೆಂಬಲಿಗರ ಟಾಕ್​ವಾರ್​ ರೋಚಕ ಘಟ್ಟ ತಲುಪಿದೆ. ಆಕ್ಸಿಡೆಂಟಲ್​ ಸಿಎಂ, ಪಿಎಂ ಚಿತ್ರದ ಬಗ್ಗೆ ಮಾತನಾಡುವ ಮುನ್ನ ಮರ್ಡರ್​ 4 ಚಿತ್ರ ತೆಗದರೆ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇನ್ನೂ ಕೆಲವರು ಮೊದಲ ಪ್ರಧಾನಿ ಜೈಲಿಗೆ ಹೋಗಿದ್ದರಲ್ಲಾ ಎಂದು ಪ್ರಶ್ನಿಸಿದ್ದಾರೆ, ಅದಕ್ಕೆ ಅವರು ಭ್ರಷ್ಟಾಚಾರ ಮಾಡಿ ಚೆಕ್​ ಮೂಲಕ ಲಂಚ ಸ್ವೀಕರಿಸಿ ಜೈಲಿಗೆ ಹೋಗಿರಲಿಲ್ಲ ಎಂದು ಬಿಜೆಪಿ ವಿರೋಧಿಸುವ ಟ್ವಿಟಿಗರು ಕಿಚಾಯಿಸಿದ್ದಾರೆ. ಈ ಟ್ವೀಟ್​ವಾರ್​ ಬಗ್ಗೆ ನಾಯಕರು ಮಾತ್ರ ಯಾವುದೇ ಹೇಳಿಕೆ ನೀಡದೆ ಗಪ್​ಚುಪ್​ ಆಗಿದ್ದಾರೆ.

Leave a Reply