ಐವಿಎಫ್ (IVF) ಪ್ರಕ್ರಿಯೆ ಹೇಗೆ?

 ಡಾ.ಬಿ.ರಮೇಶ್

ಏನಿದು ಐವಿಎಫ್?

ಐವಿಎಫ್ (IVF – In Vitro Fertilisation) ವಿಧಾನದಲ್ಲಿ ಭ್ರೂಣವನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ ತಾಯಿಯ ಗರ್ಭಕ್ಕೆ ಸೇರಿಸಲಾಗುತ್ತದೆ. ಇದನ್ನು ವೈದ್ಯಭಾಷೆಯಲ್ಲಿ ‘ಟೆಸ್ಟ್ ಟ್ಯೂಬ್ ಬೇಬಿ’ ಎಂದೂ ಹೇಳಲಾಗುತ್ತದೆ. ಮಹಿಳೆಯ ಅಂಡಾಣು ಹಾಗೂ ಪುರುಷನ ವೀರ್ಯಾಣು ಪಡೆದು ಎರಡನ್ನೂ ಪ್ರಯೋಗಾಲಯದಲ್ಲಿ ಫಲೀಕರಿಸಿ ಬಳಿಕ ತಾಯಿಯ ಗರ್ಭಕ್ಕೆ ಸೇರಿಸಲಾಗುತ್ತದೆ.

ಐವಿಎಫ್ ನನಗೆ ಸೂಕ್ತವೆ?
ಕೆಳಕಂಡ ಸಂದರ್ಭದಲ್ಲಿ ಐವಿಎಫ್’ಗೆ ಶಿಫಾರಸು ಮಾಡಲಾಗುತ್ತದೆ:
• ಎರಡೂ ಗರ್ಭನಾಳಗಳು ಬ್ಲಾಕ್ ಆಗಿದ್ದರೆ
• ಬೇರೆ ಕೆಲವು ವಿಧಾನ ಅನುಸರಿಸಿದರೂ (ಉದಾಹರಣೆಗೆ ಐಯುಐ -IUI ವಿಧಾನ) ಮಕ್ಕಳು ಆಗದೇ ಇದ್ದರೆ
• ಗಂಡನಲ್ಲಿ ವೀರ್ಯಾಣುವಿನ ಯಾವುದಾದರೂ ಗಂಭೀರ ಸಮಸ್ಯೆ ಇದ್ದರೆ.
• ದಂಪತಿ ಯಾವುದೇ ಕಾರಣವಿಲ್ಲದೆ ಬಂಜೆತನದ ಸಮಸ್ಯೆ ಎದುರಿಸುತ್ತಿದ್ದರೆ.

ಐವಿಎಫ್’ನ ಕಾರ್ಯ ಹೇಗೆ?
ಮಹಿಳೆಯರಿಗೆ:
ಹಂತ 1: ನೈಸರ್ಗಿಕ ಹಾರ್ಮೋನು ಮಾಸಿಕ ಋತುಚಕ್ರ ಸ್ಥಗಿತಗೊಳಿಸುವಿಕೆ
ನೈಸರ್ಗಿಕ ಋತುಚಕ್ರ ಸ್ಥಗಿತಗೊಳಿಸಲು ಎರಡು ವಾರಗಳ ಕಾಲ ಪ್ರತಿದಿನ ಒಂದೊಂದು ಚುಚ್ಚುಮದ್ದು ಹಾಕಲಾಗುತ್ತದೆ.

ಹಂತ 2: ಅಂಡಾಣು ಬಿಡುಗಡೆಗೆ ಉತ್ತೇಜನ
ನೈಸರ್ಗಿಕ ಋತುಚಕ್ರ ನಿಲ್ಲಿಸಿದ ಬಳಿಕ ಅಂಡಗಳ ಬಿಡುಗಡೆಗೆ (HMG) ಎಂಬ ಫರ್ಟಿಲಿಟಿ ಹಾರ್ಮೋನು ಕೊಡಲಾಗುತ್ತದೆ. ಅದಕ್ಕಾಗಿ 12 ದಿನಗಳ ಕಾಲ ಒಂದೊಂದು ಚುಚ್ಚುಮದ್ದು ಹಾಕಲಾಗುತ್ತದೆ. ಅಂಡಾಣುಗಳ ಹೆಚ್ಚಳಕ್ಕೆ ಈ ಹಾರ್ಮೋನು ನೆರವಾಗುತ್ತದೆ.

ಹಂತ 3 : ಅಂಡಾಣುಗಳ ಬೆಳವಣಿಗೆಯ ಪರಿಶೀಲನೆ: ಅಂಡಾಣುಗಳು ಹೇಗೆ ಬೆಳೆಯುತ್ತವೆ ಎನ್ನುವುದನ್ನು ವೆಜೈನಲ್ ಅಲ್ಟ್ರಾಸೌಂಡ್ ಮೂಲಕ ಕಂಡುಕೊಳ್ಳಲಾಗುತ್ತದೆ.

ಹಂತ 4 : ಅಂಡಾಣುಗಳ ಸಂಗ್ರಹ:
ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗ ಅಲ್ಟ್ರಾಸೌಂಡ್’ನ ನಿರ್ದೇಶನದ ಪ್ರಕಾರ ಅಂಡಾಣು ಸಂಗ್ರಹ ಪ್ರಕ್ರಿಯೆ ನಡೆಸಲಾಗುತ್ತದೆ. ಸೂಜಿಯ ಸಹಾಯದಿಂದ ಆಕೆಯ ಅಂಡಕೋಶದಲ್ಲಿನ ಎಲ್ಲ ಅಂಡಾಣುಗಳನ್ನು ಸಂಗ್ರಹಿಸಲಾಗುತ್ತದೆ. ಈ ಪ್ರಕ್ರಿಯೆಯ ಬಳಿಕ ಮಹಿಳೆಗೆ ಸ್ವಲ್ಪ ಹೊತ್ತು ಹೊಟ್ಟೆನೋವು ಇಲ್ಲವೆ ಅತ್ಯಲ್ಪ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾಗಬಹುದು.

ಹಂತ 5 : ಅಂಡಾಣುಗಳ ಫಲೀಕರಣ :
ಸಂಗಾತಿಯ ವೀರ್ಯಾಣು ಪಡೆದು ಅಂಡಾಣುವಿನ ಜತೆಗೆ ಮಿಲನಗೊಳಿಸಿ ಪ್ರಯೋಗಾಲಯದಲ್ಲಿ 16 -20 ಗಂಟೆಗಳ ಕಾಲ ಇಡಲಾಗುತ್ತದೆ. ಬಳಿಕ ಭ್ರೂಣದ ಬೆಳವಣಿಗೆಯ ಬಗ್ಗೆ ಸತತವಾಗಿ ಪರಿಶೀಲನೆ ನಡೆಸಲಾಗುತ್ತದೆ. ಅವುಗಳಲ್ಲಿ ಅತ್ಯುತ್ತಮವೆಂದು ಕಂಡುಬಂದ ಭ್ರೂಣವನ್ನು ಗರ್ಭಕೋಶಕ್ಕೆ ಸೇರಿಸಲಾಗುತ್ತದೆ.

ಹಂತ 6 : ಭ್ರೂಣದ ವರ್ಗಾವಣೆ : ಮಹಿಳೆಯ ವಯಸ್ಸು 40ರೊಳಗೆ ಇದ್ದರ ಫಲೀಕರಣಗೊಂಡ 2 ಭ್ರೂಣಗಳನ್ನು ಸೇರಿಸಲಾಗುತ್ತದೆ. ಒಂದುವೇಳೆ ಮಹಿಳೆಯ ವಯಸ್ಸು 40ನ್ನು ಮೀರಿದ್ದರೆ ಏಕಕಾಲಕ್ಕೆ 3 ಭ್ರೂಣಗಳನ್ನು ಸೇರಿಸಲಾಗುತ್ತದೆ. ಇನ್ನುಳಿದ ಉತ್ತಮ ಗುಣಮಟ್ಟದ ಭ್ರೂಣಗಳನ್ನು ಹಾಗೆಯೇ ಫ್ರೀಜ್ ಮಾಡಲಾಗುತ್ತದೆ. ಮತ್ತೊಮ್ಮೆ ಐವಿಎಫ್ ಮಾಡಬೇಕಾಗಿ ಬಂದಾಗ ಈ ಭ್ರೂಣಗಳನ್ನು ಬಳಸಿಕೊಳ್ಳಬಹುದಾಗಿದೆ..

ಹಂತ 7 : 5 – 6 ದಿನಗಳ ಕಾಲ ಭ್ರೂಣವನ್ನು ಚೆನ್ನಾಗಿ ಪಕ್ವಗೊಳಿಸಲು ಭಿಟ್ಟು ಬಳಿಕ ಭ್ರೂಣವನ್ನು ಗರ್ಭಕೋಶಕ್ಕೆ ಸೇರಿಸಲಾಗುತ್ತದೆ. ಇದಕ್ಕೆ Embryo Transfer (ET) ಎಂದು ಕರೆಯುತ್ತಾರೆ.

ಇಕ್ಸಿ ವಿಧಾನ
(ICSI – INTRA CYTOPLASMIC SPERM INJECTION)

ಏನಿದು ಇಂಟ್ರಾ ಸೈಟೊಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಇಂಟ್ರಾ ಸೈಟೊಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ವಿಧಾನದಲ್ಲಿ ಅಂಡಾಣುವಿಗೆ ನೇರವಾಗಿ ವೀರ್ಯಾಣುವನ್ನು ಸೇರಿಸಿ ಭ್ರೂಣವನ್ನು ಸೃಷ್ಟಿಸಲಾಗುತ್ತದೆ. ಆಬಳಿಕ ಆ ಭ್ರೂಣವನ್ನು ಮಹಿಳೆಯ ಗರ್ಭಕೋಶಕ್ಕೆ ಸೇರಿಸಲಾಗುತ್ತದೆ.

ಯಾವ ಸಂದರ್ಭದಲ್ಲಿ ಇಕ್ಸಿ ಸೂಕ್ತ?
• ಗಂಡನಲ್ಲಿ ವೀರ್ಯಾಣು ಸಂಖ್ಯೆ ತೀರಾ ಕಡಿಮೆ ಇದ್ದಾಗ ಇಕ್ಸಿ ಪ್ರಕ್ರಿಯೆಗೆ ಒಳಗಾಗುವುದು ಒಳ್ಳೆಯದು.
• ವೀರ್ಯಾಣುವಿನಲ್ಲಿ ಬೇರೆ ಸಮಸ್ಯೆಗಳು ಅಂದರೆ ಅದರ ಆಕಾರ ಸರಿ ಇರದಿದ್ದರೆ, ಅದರಲ್ಲಿ ಚಲನೆ ಇಲ್ಲದೆ ಇದ್ದರೆ ಇಕ್ಸಿ ಸೂಕ್ತ.
• ಈಗಾಗಲೇ ಒಂದು ಸಲ ಐವಿಎಫ್ ಪ್ರಕ್ರಿಯೆ ವಿಫಲವಾದವರಲ್ಲಿ ‘ಇಕ್ಸಿ’ ಉಪಯುಕ್ತ ಎನಿಸಬಹುದು.
• ಗಂಡ ಈ ಮುಂಚೆಯೇ ವ್ಯಾಸೆಕ್ಟಮಿ ಮಾಡಿಸಿಕೊಂಡಿದ್ದರೆ ವೀರ್ಯಾಣು ಸಿಗದೇ ಇರುವ ಸಮಸ್ಯೆ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಇಕ್ಸಿ ವಿಧಾನ ಅನುಸರಿಸುವುದು ಪ್ರಯೋಜನಕಾರಿ ಅನಿಸಬಹುದು. ಗಂಡನ ಅಂಡಕೋಶದಿಂದಲೇ ನೇರವಾಗಿ ವೀರ್ಯಾಣು ಪಡೆದು ಅದನ್ನು ಅಂಡಾಣುವಿನಲ್ಲಿ ಇಂಜೆಕ್ಟ್ ಮಾಡುತ್ತಾರೆ.

ಇಕ್ಸಿ ಹೇಗೆ ಕಾರ್ಯನಿರ್ವಹಿಸುತ್ತದೆ?
ಭ್ರೂಣ ತಜ್ಞರು ಎಲ್ಲಕ್ಕೂ ಮುಂಚೆ ಅತ್ಯುತ್ತಮವಾದ ಅಂಡಾಣುವನ್ನು ಆಯ್ಕೆ ಮಾಡುತ್ತಾರೆ. ಬಳಿಕ ಗುಣಮಟ್ಟದ ವೀರ್ಯಾಣುವನ್ನು ಸಂಗ್ರಹಿಸಿ ಅದನ್ನು ನೇರವಾಗಿಯೇ ಅಂಡಾಣುವಿನೊಳಗೆ ಇಂಜೆಕ್ಷನ್ ಮೂಲಕ ಸೇರಿಸುತ್ತಾರೆ. ಭ್ರೂಣ ಸೃಷ್ಟಿ ಪ್ರಕ್ರಿಯೆ ಮುಗಿದ ಬಳಿಕ ಅದನ್ನು ತಾಯಿಯ ಗರ್ಭದಲ್ಲಿ ಸೇರಿಸುತ್ತಾರೆ. ವೀರ್ಯಾಣುಗಳ ಸಂಖ್ಯೆ ಎಷ್ಟೇ ಕಡಿಮೆಯಿದ್ದರೂ ಇಕ್ಸಿ ವಿಧಾನದಲ್ಲಿ ಯಶಸ್ಸು ಪಡೆಯಬಹುದಾಗಿದೆ.

ಮಾಹಿತಿಗೆ :
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

altiushospital@yahoo.com, www.altiushospital.com

2 COMMENTS

Leave a Reply