ಸಚಿವ ಡಿಕೆಶಿ ನೇತೃತ್ವದಲ್ಲಿ ಕೆಆರೆಸ್ ಉದ್ಯಾನವನ ಉನ್ನತೀಕರಣ ಸಲಹಾ ಸಮಿತಿ ರಚನೆ

ಡಿಜಿಟಲ್ ಕನ್ನಡ ಟೀಮ್:

ವಿಶ್ವಮಟ್ಟದಲ್ಲಿ ಕೆಆರೆಸ್ ಉದ್ಯಾನವನ ಉನ್ನತೀಕರಣ ಸಂಬಂಧ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ.

ಯೋಜನೆ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆ ಸೇರಿದಂತೆ ಸಲಹೆ-ಸೂಚನೆಗಳನ್ನು ನೀಡುವ ಈ ಸಮಿತಿಯಲ್ಲಿ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು, ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ, ಸಾರಿಗೆ ಸಚಿವ ಡಿಸಿ ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ಲೋಕಸಭಾ ಸದಸ್ಯರಾದ ಎಲ್ ಆರ್ ಶಿವರಾಮೇಗೌಡ ಹಾಗೂ ಪ್ರತಾಪ್ ಸಿಂಹ, ರಾಜಮಾತೆ ಡಾ. ಪ್ರಮೋದಾ ದೇವಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

1 COMMENT

Leave a Reply