ಐಟಿ ರೇಡ್​, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳುತ್ತಾ..?

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್​ವುಡ್​ ನಟರು, ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿದ್ದು, ಮೂರನೇ ದಿನವೂ ವಿಚಾರಣೆ ಮುಂದುವರಿಸಿದ್ದಾರೆ. ನಟ ಯಶ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ಸಿ.ಆರ್​ ಮನೋಹರ್​​ ನಿವಾಸದಲ್ಲಿ ಇನ್ನೂ ಕೂಡ ಪರಿಶಿಲನೆ ಮುಂದುವರಿಸಿದ್ದು, ರಾತ್ರಿ ಕೂಡ ಅಲ್ಲೇ ವಾಸ್ತವ್ಯ ಹೂಡಿದ್ದರು. ಇನ್ನುಳಿದಂತೆ ನಟ ಪುನೀತ್​ ನಿವಾಸದಲ್ಲಿ ಮಧ್ಯರಾತ್ರಿ ಐಟಿ ಅಧಿಕಾರಿಗಳ ತಲಾಶ್​ ಮುಕ್ತಾಯವಾಗಿದ್ದು, ಬೆಳಗ್ಗಿನ ಜಾವ 4 ಗಂಟೆ 40 ನಿಮಿಷಕ್ಕೆ ತಪಾಸಣೆ ಅಂತ್ಯ ಮಾಡಿದ್ರು. ಇನ್ನು ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು ನಿವಾಸದಲ್ಲೂ ತನಿಖೆ ಅಂತ್ಯವಾಗಿದ್ದು, ಕಿಚ್ಚ ಸುದೀಪ್​ ಮನೆಯಲ್ಲೂ ಆದಾಯ ತೆರಿಗೆ ಇಲಾಕೆ ಅಧಿಕಾರಿಗಳು ತನಿಖೆ ಮುಗಿಸಿ ವಾಪಸ್ ಆಗಿದ್ದಾರೆ.

ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಸಿನಿಮಾ ನಟ, ನಟಿಯರನ್ನು ಪ್ರಚಾರಕ್ಕೆ ಬಳಸಿಕೊಳ್ತಾರೆ.. ಸಿನಿಮಾ ಸ್ಟಾರ್ಸ್​ಗಳನ್ನು ವೇದಿಕೆಗೆ ಕರೆತಂದು ಜನರನ್ನು ಸೇರಿಸುವ ಉದ್ದೇಶ ಹೊಂದಿರುತ್ತಾರೆ. ಅದರಲ್ಲೂ ಸಾಕಷ್ಟು ಖ್ಯಾತಿ ಪಡೆದ ನಟ, ನಟಿಯರು ರಾಜಕಾರಣಿಗಳಿಗೆ ಹಾಟ್​ ಫೇವರಿಟ್​. ಜನರೂ ಕೂಡ ನಟ, ನಟಿಯರು ಕಾರ್ಯಕ್ರಮಕ್ಕೆ ಬರ್ತಾರೆ ಅಂದ್ರೆ ಮೈದಾನ ಹೌಸ್​ಫುಲ್​ ಆಗುವ ಹಾಗೆ ಸೇರುತ್ತಾರೆ. ಆದ್ರೀಗ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಆದಾಯ ತೆರಿಗೆ ಇಲಾಖೆ ಕನ್ನಡದ ಸ್ಟಾರ್​​ ನಟರ ಮೇಲೆ ದಾಳಿ ಮಾಡಿರೋದು ಕಮಲ ಪಾಳಯಕ್ಕೆ ಹೊಡೆತ ಬೀಳುತ್ತಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಯಾಕಂದ್ರೆ ಈಗಾಗಲೇ ಅಭಿಮಾನಿಗಳು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು, ಉದ್ದೇಶಪೂರ್ವಕವಾಗಿಯೇ ಐಟಿ ಅಧಿಕಾರಿಗಳ ಮೂಲಕ ದಾಳಿ ನಡೆಸಿದ್ದಾರೆ ಅಂತಾ ಆರೋಪಿಸಿದ್ದಾರೆ. ಹೀಗಾಗಿ ಪ್ರಚಾರಕ್ಕೆ ಹೋಗದೆ ನಟ, ನಟಿಯರು ಪ್ರಚಾರಕ್ಕೆ ಹೋಗದೆ ಸುಮ್ಮನಾಗ್ತಾರಾ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಆದ್ರೆ ಇನ್ನೊಂದು ಮೂಲಗಳ ಪ್ರಕಾರ ಕೇಂದ್ರ ಸರ್ಕಾರ, ಎದುರಾಳಿಗಳನ್ನು ಕಟ್ಟಿಹಾಕಲು ತನ್ನ ಅಧೀನದಲ್ಲಿ ಬರುವ ಸಂಸ್ಥೆಗಳನ್ನು ಬಳಸಿಕೊಳ್ಳುತ್ತೆ ಅನ್ನೋದು ವಿರೋಧ ಪಕ್ಷಗಳ ಆರೋಪ. ಸಿಬಿಐ, ಐಟಿ, ಇಡಿ ಅಧಿಕಾರಿಗಳನ್ನು ಬಳಸಿಕೊಂಡು ರಾಜಕಾರಣಿಗಳನ್ನು ಬೆದರಿಸುವ ಸರ್ಕಾರಗಳು, ತಮ್ಮ ಪಕ್ಷಕ್ಕೆ ಸೆಳೆಯುವುದು ಅಥವಾ ತಟಸ್ಥವಾಗಿ ಇರುವಂತೆ ನೋಡಿಕೊಳ್ಳುವ ಉದ್ದೇಶ ಪೂರೈಸಿಕೊಳ್ಳುತ್ತದೆ. ಅದೇ ಫಾರ್ಮುಲಾ ಇಲ್ಲೂ ಅಪ್ಲೈ ಆದರೆ, ಸ್ಯಾಂಡಲ್​ವುಡ್​ ಸ್ಟಾರ್​ಗಳ ಮೇಲೆ ದಾಳಿ ಮಾಡುವ ಮೂಲಕ ಅನ್ಯ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದನ್ನು ತಡೆಗಟ್ಟುವುದು, ಕೇವಲ ಬಿಜೆಪಿ ಪರವಾಗಿ ಪ್ರಚಾರ ಮಾಡಿಸುವ ತಂತ್ರಗಾರಿಕೆಯೂ ಇರಬಹುದು ಎನ್ನಲಾಗ್ತಿದೆ. ಇದೀಗ ದಾಳಿ ಮಾಡಿರುವ ಮೂವರು ನಿರ್ಮಾಪಕರು ಕೋಟ್ಯಂತರ ರೂಪಾಯಿ ಫಂಡ್​ ಮಾಡುವ ಶಕ್ತಿಯುಳ್ಳವರಾಗಿದ್ದು, ಆ ಮೂವರು ಬಿಜೆಪಿಗೆ ಫಂಡ್​ ಮಾಡಿದ್ರೆ ಅನುಕೂಲ. ಹಾಗೆಯೆ ಈಗ ದಾಳಿ ಆಗಿರುವ ನಾಲ್ವರು ನಟರೂ ಕೂಡ ಖ್ಯಾತನಾಮರಾಗಿದ್ದು ಕಮಲಕ್ಕೆ ಜೈ ಅಂದ್ರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಕಾರಿ ಅನ್ನೋ ಪ್ಲಾನ್​ ಇದೆ ಎನ್ನುತ್ತಿವೆ ರಾಜಕೀಯ ಮೂಲಗಳು. ಆದ್ರೆ ಮುಂದೆ ತನಿಖೆ ಯಾವ ರೀತಿ ಸಾಗುತ್ತೆ ಅನ್ನೋದ್ರ ಮೇಲೆ ಎಲ್ಲಾ ಲೆಕ್ಕಾಚಾರಗಳ ಭವಿಷ್ಯ ನಿಂತಿದೆ.

Leave a Reply