ಮಾರ್ಚ್ 23ರಿಂದ ಐಪಿಎಲ್ ಶುರು! ಈ ಆವೃತ್ತಿಯು ಭಾರತದಲ್ಲೇ ನಡೆಯುತ್ತೆ!

ಡಿಜಿಟಲ್ ಕನ್ನಡ ಟೀಮ್:

ದೇಶದ ಪ್ರಖ್ಯಾತ ಕ್ರಿಕೆಟ್ ಟೂರ್ನಿ ಐಪಿಎಲ್ ಈ ಬಾರಿ ಭಾರತದಲ್ಲಿ ನಡೆಯುತ್ತಾ ಅಥವಾ ವಿದೇಶದಲ್ಲಿ ನಡೆಯುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಮುಂಬರುವ ಮಾರ್ಚ್ 23ರಿಂದ ಐಪಿಎಲ್ 12ನೇ ಆವೃತ್ತಿ ಟೂರ್ನಿ ಭಾರತದಲ್ಲೇ ನಡೆಸಲು ಬಿಸಿಸಿಐನ ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ನಿರ್ಧರಿಸಿದೆ.

ಟೂರ್ನಿ ಆಯೋಜನೆ ಕುರಿತು ಮಂಗಳವಾರ ಆಡಳಿತ ಸಮಿತಿಯು ನವದೆಹಲಿಯಲ್ಲಿ ಸಭೆ ನಡೆಸಿ, ಈ ನಿರ್ಧಾರ ಕೈಗೊಂಡಿದೆ. ಈ ವರ್ಷ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಟೂರ್ನಿಯನ್ನು ಭಾರತದ ಬದಲು ದಕ್ಷಿಣ ಆಫ್ರಿಕಾ ಅಥವಾ ಯುಎಇಯಲ್ಲಿ ನಡೆಸುವ ಚರ್ಚೆ ನಡೆದಿತ್ತು, 2009ರ ಚುನಾವಣೆ ವೇಳೆ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಹಾಗೂ 2014ರ ಚುನಾವಣೆ ವೇಳೆ ದುಬೈ (ಭಾಗಶಃ) ನಲ್ಲಿ ನಡೆಸಲಾಗಿತ್ತು.

ಲೋಧಾ ಸಮಿತಿ ಶಿಫಾರಸಿನಂತೆ ಐಪಿಎಲ್ ಮುಕ್ತಾಯವಾದ 15 ದಿನಗಳ ಒಳಗೆ ಭಾರತ ತಂಡ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ಈ ಬಾರಿ ಟೂರ್ನಿ ಮೇ ಎರಡನೇ ವಾರದೊಳಗೆ ಮುಗಿಯುವ ನಿರೀಕ್ಷೆ ಇದೆ. ಮೇ 30ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.

Leave a Reply