ಮೋದಿ ಮೀಸಲು ಮತಾಸ್ತ್ರಕ್ಕೆ ಪ್ರತಿಪಕ್ಷಗಳು ಶಾಕ್! ವಿರೋಧ ಪಕ್ಷಗಳ ನಡೆ ಏನು?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಣ ಅಸ್ತ್ರ ಪ್ರಯೋಗಗಳು ಹೆಚ್ಚಾಗುತ್ತಿವೆ. ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಾಗ ನೋಟ್ಯಂತರದ ಅಸ್ತ್ರ ಪ್ರಯೋಗಿಸಿದ್ದ ಪ್ರಧಾನಿ ಮೋದಿ, ಲೋಕಸಭೆಗೆ ಇನ್ಯಾವ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾರೋ ಎಂಬ ನಿರೀಕ್ಷೆ ಎಲ್ಲರಲ್ಲೂ ಕಾಡುತ್ತಿತ್ತು. ಈಗ ಮೋದಿ ಅವರು ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಮುಂದಾಗಿದ್ದು, ಇದು ಲೋಕಸಭೆ ಚುನಾವಣೆಗೆ ಪ್ರಯೋಗವಾಗುತ್ತಿರುವ ಮೊದಲ ಮತಾಸ್ತ್ರವಾಗಿದೆ. ಇನ್ನು ಇಂತಹ ಅದೆಷ್ಟು ಅಸ್ತ್ರಗಳು ಪ್ರತಿ0ಪಕ್ಷಗಳ ನಿದ್ದೆಗೆಡಿಸಲಿವೆ ಎಂಬುದು ಸದ್ಯದ ಕುತೂಹಲ.

ಹೌದು, ಈಗಿರುವ ಸಂವಿಧಾನಬದ್ಧ ಶೇ. 50 ಮೀಸಲಾತಿ ಪ್ರಮಾಣಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಇತರ ವರ್ಗಗಳು ಹಾಗೂ ಮೇಲ್ಜಾತಿಗಳ ಬಡವರಿಗೆ ಶೇ. 10 ಮೀಸಸಲಾತಿ ನೀಡಲು ನಿರ್ಧಾರ ಮಾಡಲಾಗಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯವಿದ್ದು, ಮಂಗಳವಾರ ಈ ಸಂಬಂಧ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರಕಾರ ಮಂಡಿಸಲಿದೆ.

ಈ ಮೀಸಲಾತಿಗೆ ಕೇಂದ್ರ ಕೆಲ ಷರತ್ತುಗಳನ್ನು ವಿಧಿಸಿದೆ. ಮೇಲ್ವರ್ಗದವರು  ಶೇ.10ರಷ್ಟು ಮೀಸಲಾತಿ ಪಡೆಯಬೇಕಿದ್ದರೆ ಅವರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ, 5 ಎಕರೆ ಭೂಮಿಗಿಂತ ಕಡಿಮೆ, 1000 ಚದುರ ಅಡಿಗಿಂತ ಕಡಿಮೆ ವಿಸ್ತೀರ್ಣ ಮನೆ ಹೊಂದಿರಬೇಕು.

ಈ ಮಸೂದೇ ಜಾರಿಯಿಂದ ಜಾಟ್, ಗುಜ್ಜಾರ್, ರಜಪೂತ್, ಬನಿಯಾ, ಬ್ರಾಹ್ಮಣ ಸೇರಿದಂತೆ ಇತರೆ ಪ್ರಬಲ ಸಮುದಾಯಕ್ಕೆ ಭಾರೀ ಅನುಕೂಲವಾಗಲಿದೆ. ಇದು ಸಹಜವಾಗಿಯೇ ಭರ್ಜರಿ ಮತಭೇಟೆಯಾಡುವ ಅಸ್ತ್ರವಾಗುವುದರಲ್ಲಿ ಅನುಮಾನವೇ ಇಲ್ಲ.

ಕೇಂದ್ರದ ಈ ಶಾಕ್ ಚಿತ್ ಆಗಿರುವ ಪ್ರತಿಪಕ್ಷಗಳು ಇದಂದು ಚುನಾವಣಾ ಗಿಮಿಕ್ ಎಂದು ಟೀಕಿಸುತ್ತಿವೆ. ಈ ಮಸೂದೆಯನ್ನು ವಿರೋಧಿಸಿದರೆ ಪ್ರತಿಪಕ್ಷಗಳು ಈ ಮೋಲ್ವರ್ಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗುತ್ತವೆ. ಒಂದು ವೇಳೆ ಮಸೂದೆಗೆ ಒಪ್ಪಿದರೆ ಅದರ ಸಂಪೂರ್ಣ ಶ್ರೇಯ ಕೇಂದ್ರ ಸರಕಾರ ಹಾಗೂ ಬಿಜೆಪಿಗೆ ಸೇರುತ್ತದೆ. ಹೀಗಾಗಿ ಬಿಸಿ ತುಪ್ಪವಾಗಿ ಪರಿಣಮಿಸಿರುವ ಮೀಸಲು ಮಸೂದೆಯನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡೆ ಏನು ಎಂಬುದು ಸದ್ಯದ ಕುತೂಹಲ.

Leave a Reply