ಕೊನೆಯುಸಿರೆಳೆದ ಯಶ್ ಹುಚ್ಚು ಅಭಿಮಾನಿ ರವಿ

ಡಿಜಿಟಲ್ ಕನ್ನಡ ಟೀಮ್:

ಯಶ್ ಮೇಲಿನ ಅಂಧಾಭಿಮಾನದಿಂದ ಬೆಂಕಿ ಹಚ್ಚಿಕೊಂಡಿದ್ದ ರವಿ ಬುಧವಾರ ಮೃತಪಟ್ಟಿದ್ದಾನೆ.

ಯಶ್ ಹುಟ್ಟುಹಬ್ಬದ ದಿನ ಅವರನ್ನು ನೋಡಲು ಆಗಲಿಲ್ಲ ಎಂಬ ಕಾರಣಕ್ಕೆ ಅವರ ಮನೆ ಮುಂದೆಯೇ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರವಿ ದೇಹದ ಬಹುತೇಕ ಭಾಗ ಸುಟ್ಟಿತ್ತು. ಹೀಗಾಗಿ ಆತನನ್ನು ವೀಕ್ಟೊರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ರವಿ ಮೃತಪಟ್ಟಿದ್ದಾನೆ.

ಹಿರಿಯ ನಟ ಅಂಬರೀಷ್ ಅವರ ನಿಧನದ ನೋವಿನಲ್ಲಿ ಇರುವುದರಿಂದ ಯಶ್ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಆದರೂ, ಅಭಿಮಾನಿಗಳು ತಮ್ಮ ರಾಕಿಂಗ್ ಸ್ಟಾರ್ ನನ್ನು ನೋಡಲು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಆಗಮಿಸಿದ್ದರು. ಅವರಲ್ಲಿ ರವೀಯೂ ಒಬ್ಬ. ಯಶ್ ಅವರನ್ನು ನೋಡಲು ಸಾಧ್ಯವಾಗಲಿಲ್ಲ ಎಂಬ ನಿರಾಸೆಗೆ ರವಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ. ಕ್ಷಣಾರ್ಧದಲ್ಲಿ ಬೆಂಕಿ ಹಬ್ಬಿದ ಪರಿಣಾಮ ರವಿಯ ಶೇ.80ರಷ್ಟು ದೇಹ ಸುಟ್ಟುಹೋಯ್ತು. ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ರವಿ ಕೊನೆಯುಸಿರೆಳೆದರು.

ಈ ಘಟನೆಗೆ ಮಂಗಳವಾರವೇ ಬೇಸರ ವ್ಯಕ್ತಪಡಿಸಿದ ಯಶ್, ‘ಇದನ್ನು ಯಾರೂ ಅಭಿಮಾನ ಎನ್ನುವುದಿಲ್ಲ. ಈ ರೀತಿ ಮಾಡಿಕೊಳ್ಳುವವರು ನನ್ನ ಅಭಿಮಾನಿಗಳೇ ಅಲ್ಲ’ ಎಂದರು.

Leave a Reply