200 ಕೋಟಿ ಬಾಚಿ ಪಾಕಿಸ್ತಾನಕ್ಕೂ ಕಾಲಿಟ್ಟ ಕೆಜಿಎಫ್!

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗದ ಪಾಲಿಗೆ ಹಲವು ಹೊಸ ಮೈಲುಗಲ್ಲು ತಂದುಕೊಟ್ಟ ಹಿರಿಮೆ ಪಡೆದಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಈಗ ₹ 200 ಕೋಟಿ ಗಳಿಸಿ ಹೊಸ ಇತಿಹಾಸ ಬರೆದಿದೆ.

ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಬಿಡುಗಡೆಯಾದ ಕೆಜಿಎಫ್ ಅನೇಕ ದಾಖಲೆಗಳನ್ನು ಉಡಾಯಿಸಿದ್ದಲ್ಲದೇ ಹೊಸ ದಾಖಲೆಗಳನ್ನು ಬರೆಯಿತು.

ಇನ್ನು ನ್ಯೂಸ್ ಮಿನಿಟ್ ವರದಿ ಪ್ರಕಾರ ಪಾಕಿಸ್ತಾನದಲ್ಲೂ ಕೆಜಿಎಫ್ ಬಿಡುಗಡೆಯಾಗಿದ್ದು, ನೆರೆ ರಾಷ್ಟ್ರ ದಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಸಿನಿಮಾ ಎಂಬ ಕೀರ್ತಿಗೆ ಭಾಜನವಾಗಿದೆ. ಶುಕ್ರವಾರ ಹಿಂದಿ ಅವತರಣಿಕೆಯ ಕೆಜಿಎಫ್ ಬಿಡುಗಡೆಯಾಗಿದ್ದು, ಉತ್ತಮ ಆರಂಭ ಪಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

Leave a Reply