ಯಡಿಯೂರಪ್ಪಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ ಟೀಕೆ

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯೇ. ಅಧಿಕಾರ ಅನುಭವಿಸಲು ಶಾಸಕರಿಗೆ ಆಸೆ ತೋರಿಸುತ್ತಿದ್ದಾರೆ ಎಂದು ಮಾಜಿ ಸಿ.ಎಂ.ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಸಿದ್ದರಾಮಯ್ಯ ಹೇಳಿದ್ದಿಷ್ಟು, ‘ಅಪರೇಷನ್ ಕಮಲ ಕಾರ್ಯಾಚರಣೆ ನಡೆಸಿದ ಯಡಿಯೂರಪ್ಪ ಇಂಥ ಕೆಲಸಕ್ಕೆ ಕೈ ಹಾಕಬಾರದಾಗಿತ್ತು. ಮುಖ್ಯಮಂತ್ರಿ ಆಗಬೇಕು ಎಂದು ಮಾನ ಮರ್ಯಾದೆ ಬಿಟ್ಟು ಮೂರನೇ ಬಾರಿಗೆ ಅಪರೇಷನ್ ಕಮಲಕ್ಕೆ ಮುಂದಾಗಿ ವಿಫಲವಾಗಿದ್ದಾರೆ. ಅದಕ್ಕೆ ಈಗ ನನ್ನ ಮೇಲೆ ಗೂಬೆ ಕೂರಿಸುವುದು ಸರಿಯೇ. ಯಡಿಯೂರಪ್ಪ ಸಿಎಂ ಆಗಿದ್ದವರು. ಆದರೆ ಇಂದು ಶಾಸಕರಿಗೆ ಆಸೆ ತೋರಿಸಿ ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ. ಸಂಸದ ಪ್ರಹ್ಲಾದ್ ಜೋಷಿ ಕಿಮ್ಮತ್ತಿಲ್ಲದ ರಾಜಕಾರಣಿ. ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕಸುಬು.

ಗೋಕಾಕಿನ ಜಾರಕಿಹೊಳಿ ಸಹೋದರರಲ್ಲಿ ಒಬ್ಬರಾದ
ಲಖನ್ ಜಾರಕಿಹೊಳಿ ಜತೆ ಮಾತನಾಡಿದ್ದೇನೆ. ಗೋಕಾಕ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಅವರ ಮೂಲಕ ತಿಳಿಸಿದ್ದೇನೆ.’

Leave a Reply