ನಡೆದಾಡುವ ದೇವರ ಹೆಜ್ಜೆ ನಿಧಾನವಾಗುತ್ತಿದೆ, ಭಕ್ತರ ಎದೆಬಡಿತ ವೇಗವಾಗುತ್ತಿದೆ..!

ಡಿಜಿಟಲ್ ಕನ್ನಡ ಟೀಮ್:

ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಬರೋಬ್ಬರಿ 111 ವರ್ಷ ಪೂರೈಸಿದ್ದು, ಇತ್ತೀಚಿಗೆ ಕೆಲವೊಂದು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈಗಲೂ ಚೈನ್ನೈನ ಡಾ ರೇಲಾ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಆಪರೇಷನ್‌ಗೆ ಒಳಗಾದ ಡಾ ಶಿವಕುಮಾರ ಸ್ವಾಮೀಜಿ ಶ್ವಾಸಕೋಶದ ಸೋಂಕಿನಿಂದ ಮತ್ತೆ ಚೇತರಿಸಿಕೊಳ್ಳಲು ಆಗುತ್ತಿಲ್ಲ. ಎಷ್ಟೇ ಪ್ರಯತ್ನ ನಡೆಸಿದ್ರು ವೈದ್ಯರ ತಂಡಕ್ಕೆ ಸೂಕ್ತ ಫಲಿತಾಂಶ ದೊರಕುತ್ತಿಲ್ಲ.

ಇದೀಗ ಶ್ರೀಗಳ ಶ್ವಾಸಕೋಶಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಉಸಿರಾಟಕ್ಕೂ ಶಕ್ತಿ ಇಲ್ಲದಂತಾಗಿದೆ. ಜತೆಗೆ ಜೀರ್ಣಕ್ರಿಯೆ ನಡೆಯದ ಕಾರಣ ದ್ರವಾಹಾರ ಕೊಡುವುದನ್ನೂ ನಿಲ್ಲಿಸಲಾಗಿದೆ ಎಂದು ಸ್ವಾಮೀಜಿಗಳ ಆಪ್ತ ವೈದ್ಯರಾದ ಡಾ. ಪರಮೇಶ್ ಮಾಹಿತಿ ನೀಡಿದ್ದಾರೆ.

ಸ್ವಾಮೀಜಿಗಖ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಾಣಿಸಿಲ್ಲ. ಯಾಥಾಸ್ಥಿತಿ ಭರವಸೆ ತರುತ್ತಿಲ್ಲ ಎಂಬುದು ಸ್ವಾಮೀಜಿಗಳನ ದರ್ಶನ ಪಡೆದ ರಾಜಕಾರಣಿಗಳ ಮಾತು. ಇದೆಲ್ಲದರ ನಡುವೆ ತುಮಕೂರು ಜಿಲ್ಲಾಡಳಿತ ನಡೆಸುತ್ತಿರುವ ತಯಾರಿ ಭಕ್ತರ ಆತಂಕ ಹೆಚ್ಚಿಸಿದೆ. ಮಠದ ಸುತ್ತಮುತ್ತ ದಿನದಿಂದ ದಿನಕ್ಕೆ ಪೊಲೀಸ್ ಭದ್ರತೆ ಹೆಚ್ಚಾಗುತ್ತಿದೆ. ಮಠದಿಂದ ಕೆಲವೇ ಕಿಲೋ ಮೀಟರ್ ದೂರಸಲ್ಲಿ ಬರೋಬ್ಬರಿ 10 ಹೆಲಿಪ್ಯಾಡ್ ನಿರ್ಮಾಣ ಆಗುತ್ತಿದೆ. ತುಮಕೂರು ವಿವಿ ಆವರಣದಲ್ಲಿ ಇನ್ನೂ ನಾಲ್ಕು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಈ ತಯಾರಿಗಳು ನಡೆದಾಡುವ ದೇವರ ಇಹಲೋಕದ ನಂಟಿನ ಕ್ಷಣಗಣನೆಯ ಕುರೂಹಿನಂತೆ ಗೋಚರಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೋಟ್ಯಂತರ ಭಕ್ತರನ್ನು ಹೊಂದಿರುವ ಸ್ವಾಮೀಜಿಗಳು, ಇನ್ನೂ ಕೆಲವು ವರ್ಷ ಬದುಕಲಿ, ದಿವ್ಯ ಸಾಮಿಪ್ಯ, ಸೇವೆ ನಾಡಿಗೆ ಸಿಗಲಿ ಅನ್ನೋದು ಅಸಂಖ್ಯ ಭಕ್ತರ ಆಶಯ. ಆದ್ರೆ ಹುಟ್ಟಿದ ದೇಹ ಒಂದಲ್ಲ ಒಂದು‌ದಿನ ಅಸ್ತಿತ್ವ ಕಳೆದುಕೊಳ್ಳಲೇ ಬೇಕು ಅನ್ನೋ ಮಾತು ಯಾರನ್ನೂ ಎಡತಾಕದೇ ಇರದು ಎನ್ನುವುದು ಅವರ ಸನಿಹವರ್ತಿಗಳ ಮಾತು. ಅವರ ಮಾತಿನ ಗೂಡಾರ್ಥ ಬೇರೆಯದನ್ನೇ ಸೂಚಿಸುತ್ತಿದೆ. ಸಾರ್ಥಕ ಬದುಕಿನ ಸಾಧಕ ಸಂತನ ಇಹಲೋಕದ ಪಯಣ ಅಂತಮ ಹಂತ ತಲುಪಿದೆ ಎನ್ನುವುದನ್ನು ಸಂಕೇತಿಸಿತ್ತದೆ. ಗೌರವಪೂರ್ವಕ ವಿದಾಯಕ್ಕೆ ಕ್ಷಣಗಣನೆ ಆರಂಭವಾಗಿದೆ ಎನ್ನುವುದರ ದ್ಯೋತಕವಾಗಿದೆ. ಅವರನ್ನು ನೋಡಿ ಬಂದ ಅನೇಕ ಶ್ರೀಗಳು ಮಾತನಾಡುತ್ತಾ, ‘ಶಿವಕುಮಾರ ಶ್ರೀಗಳು‌ ಇಚ್ಛಾ ಮರಣಿ, ಅವರು ಹೋಗಬೇಕು ಎಂದುಕೊಂಡಾಗ ಹೋಗುತ್ತಾರೆ’ ಎಂದಿದ್ದಾರೆ. ಈ ಮಾತು ಕೋಟ್ಯಂತರ ಭಕ್ತರ ಎದೆಯಲ್ಲಿ ಆತಂಕ, ನೋವು ತುಂಬಿಸಿದೆ.

Leave a Reply