ಬಿಜೆಪಿಯಲ್ಲಿ ಏನ್ ನಡೀತಾ ಇದೆ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಉರುಳಿಸಲು ಸಖತ್ ಸ್ಕೆಚ್ ಹಾಕಿ ರಾಷ್ಟ್ರ ರಾಜಧಾನಿಗೆ ಹೆಜ್ಜೆ ಹಾಕಿದ್ದ ಕಮಲ ನಾಯಕರು ಇದೀಗ ಇದ್ದಕ್ಕಿದ್ದ ಹಾಗೆ ಫುಲ್ ಸೈಲೆಂಟ್ ಆಗಿದ್ದಾರೆ. ಹರಿಯಾಣದ ಐಷಾರಾಮಿ ರೆಸಾರ್ಟ್ ವಾಸ್ತವ್ಯ ಹೂಡಿದ್ದ ಬಿಜೆಪಿಯ ಎಲ್ಲಾ ಶಾಸಕರು ಖಾಲಿ ಮಾಡಿಕೊಂಡು ರಾಜ್ಯಕ್ಕೆ ವಾಪಸ್ ಆಗಿದ್ದು ತಮ್ಮ ತಮ್ಮ ಕ್ಷೇತ್ರಗಳ ಕಡೆಗೆ ಮುಖ ಮಾಡಿದ್ದಾರೆ. ಈ ನಡುವೆ ಮಾತನಾಡಿರುವ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಬಿ.ಎಸ್ ಯಡಿಯೂರಪ್ಪ ಒಂದು ತಿಂಗಳೊಳಗೆ ಸಿಎಂ ಆಗ್ತಾರೆ ಎಂದಿರುವ ಅವರು, ಚಮತ್ಕಾರದ ರೀತಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ. ಮ್ಯಾಜಿಕ್ ಮಾಡಿ ಹೇಗೆ ಸಿಎಂ ಆಗ್ತಾರೆ ಅಂತ ನಾನು ಈಗ ಹೇಳಲ್ಲ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಬಿಜೆಪಿ ರೆಸಾರ್ಟ್ ರಾಜಕಾರಣದ ವಿರುದ್ಧ ಅಬ್ಬರಿಸಲು ಸರ್ಕಾರ ನಿಂತಾಗ ಬಿಜೆಪಿ ಏಕಾಏಕಿ ರೆಸಾರ್ಟ್‌ನಿಂದ ಹೊರಕ್ಕೆ ಬರುವ ನಿರ್ಧಾರ ಮಾಡ್ತು. ಆದ್ರೆ ಯಾವಾಗ ಕಾಂಗ್ರೆಸ್ ಶಾಸಕಾಂಗ ಸಭೆ ಅಂತೇಳಿ ಏಕಾಏಕಿ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಯ್ತೋ ಹಾಗ ಕಮಲಪಡೆ ಶಾಕ್‌ಗೆ ಒಳಗಾಯ್ತು. ಸದ್ಯಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಂಡು ಇದೀಗ ಕ್ಷೇತ್ರಗಳ ಕಡೆಗೆ ಹೊರಟಿದೆ. ಬೇಟೆಗೆ ನಿಂತ ಸಿಂಹ ಬೆದರಿ ಒಂದೆಜ್ಜೆ ಹಿಂದೆ ಇಟ್ಟ ತಕ್ಷಣ ಹಿಂದೆ ಸರಿಯುತ್ತೆ ಅಂತ ಅರ್ಥವಲ್ಲ, ನಿಖರ ಬೇಟೆಗೆ ಗುರಿ ಹಿಡುತ್ತಿದೆ ಅನ್ನೋ ಸೂಚನೆ ಅನ್ನೋ ಮಾತಿದೆ. ಸದ್ಯಕ್ಕೆ ಬಿಜೆಪಿ ಪರಿಸ್ಥಿತಿಯೂ ಅದೇ. ಬರಗಾಲ ಎದುರಾಗಿದ್ರು ಬಿಜೆಪಿ ಮಾತ್ರ ಅಧಿಕಾರದ ಲಾಲಸೆಯಿಂದ ರೆಸಾರ್ಟ್ ರಾಜಕಾರಣ ಹಮ್ಮಿಕೊಂಡಿದೆ ಎಂದು ಮೈತ್ರಿ ಪಕ್ಷದ ನಾಯಕರು ದೂಷಣೆ ಮಾಡಲು ಶುರು ಮಾಡಿದ್ರು.

ಇದೀಗ ಮತ್ತೆ ಜನರ ಎದುರು ನಿಂತು ಕಾಂಗ್ರೆಸ್ ರೆಸಾರ್ಟ್ ರಾಜಕಾರಣದ ಬಗ್ಗೆ ಎರ್ರಾಬಿರ್ರಿ ಮಾತನಾಡಲು ಮುಂದಾಗಿದ್ದು, ಕಾಂಗ್ರೆಸ್ ಶಾಸಕರನ್ನು ಹೊರಗೆ ಕರೆತರುವ ಪ್ರಯತ್ನ ಮಾಡ್ತಿದೆ. ಆದ್ರೆ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಬಂಡಾಯ ಶಾಸಕರ ನಡೆ ಏನು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಅವರು ಏನು ಮಾಡ್ತಾರೆ ಅನ್ನೋ ಊಹೆ ಕೂಡೆ ಯಾರಿಗೂ ಇಲ್ಲ.‌ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ನಿಂದ ಹೊರಗೆ ಬರುವಂತೆ ಮಾಡಲು ಮಾತ್ರ ಬಿಜೆಪಿ ರೆಸಾರ್ಟ್ ಖಾಲಿ ಮಾಡಿರೋದು ಅನ್ನೋ ಮಾತುಗಳು ಕೇಳಿ ಬಂದಿವೆ. ಒಮ್ಮೆ ಕಾಂಗ್ರೆಸ್ ಶಾಸಕರು ರೆಸಾರ್ಟ್‌ನಿಂದ ಹೊರ ಬಂದ ಬಳಿಕ ತನ್ನ ಅಸಲಿ ಆಟ ಶುರುವಾಗುತ್ತೆ ಅನ್ನೋದು ಬಿಜೆಪಿ ನಾಯಕರ ನಂಬಿಕೆ.

Leave a Reply