ಐಸಿಸಿ ಪ್ರಶಸ್ತಿಯಲ್ಲೂ ಇತಿಹಾಸ ಬರೆದ ಕಿಂಗ್ ಕೊಹ್ಲಿ!

ಡಿಜಿಟಲ್ ಕನ್ನಡ ಟೀಮ್:

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಕ್ರಿಕೆಟ್ ತಲೆಮಾರಿನ ವಿಶ್ವಶ್ರೇಷ್ಠ ಆಟಗಾರ ಎಂಬುದನ್ನು ಪದೇ ಪದೆ ಸಾಬೀತು ಮಾಡುತ್ತಲೇ ಬರುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ರನ್ ಹೊಳೆ ಹರಿಸುತ್ತಾ ರನ್ ಮಷಿನ್ ಎಂದೇ ಕರೆಸಿಕೊಳ್ಳುವ ಕೊಹ್ಲಿ ಈಗ ಐಸಿಸಿ ಅಂತಾರಾಷ್ಟ್ರೀಯ ಪ್ರಶಸ್ತಿಯಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿ ಹೊಸ ಇತಿಹಾಸ ಬರೆದಿದ್ದಾರೆ.

ಪ್ರಸಕ್ತ ಸಾಲಿನ ಐಸಿಸಿ ಪ್ರಶಸ್ತಿ ಪ್ರಕಟಿಸಲಾಗಿದ್ದು, ಇದರಲ್ಲಿ ಮೂರು ಪ್ರಮುಖ ಗರಿಗಳು ಕೊಹ್ಲಿಗೆ ಲಭಿಸಿವೆ. ಐಸಿಸಿ ವರ್ಷದ ಟೆಸ್ಟ್ ಮತ್ತು ಏಕದಿನ ಆಟಗಾರ ಹಾಗೂ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಅದರೊಂದಿಗೆ ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿ ಪಡೆದ ಮೊದಲ ಆಟಗಾರನಾಗಿದ್ದಾರೆ.

ಇಷ್ಟೇ ಅಲ್ಲದೇ ಐಸಿಸಿ ವರ್ಷದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರೂ ಆಗಿ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದಾಗ 6 ಟೆಸ್ಟ್ ಪಂದ್ಯದಲ್ಲಿ ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಅನುಭವಿಸಲಾಗಿದೆ. ಇನ್ನು 9 ಏಕದಿನ ಪಂದ್ಯಗಳಲ್ಲಿ ಗೆಲವು, ನಾಲ್ಕರಲ್ಲಿ ಸೋಲು ಹಾಗೂ ಒಂದರಲ್ಲಿ ಟೈ ಫಲಿತಾಂಶ ಬಂದಿದೆ. ಕೊಹ್ಲಿ ಕಳೆದ ವರ್ಷ 13 ಟೆಸ್ಟ್ ಪಂದ್ಯಗಳಲ್ಲಿ 55.08ರ ಸರಾಸರಿಯಲ್ಲಿ 1322 ರನ್ ಹಾಗೂ 14 ಏಕದಿನ ಪಂದ್ಯಗಳಲ್ಲಿ 133.55ರ ಸರಾಸರಿಯಲ್ಲಿ 1202 ರನ್ ಕಲೆ ಹಾಕಿದ್ದಾರೆ. ಟಿ20ಯಲ್ಲಿ 10 ಪಂದ್ಯಗಳಲ್ಲಿ 211 ರನ್ ಗಳಿಸಿದ್ದಾರೆ.

ಇನ್ನು ಭಾರತದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ರಿಶಬ ಪಂತ್ ಐಸಿಸಿ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.

Leave a Reply