ಲೋಕಸಭೆ ಚುನಾವಣೆ ಪೂರ್ವ ಸಮೀಕ್ಷೆ: ಯಾರಿಗೂ ಬಹುಮತ ಸಿಗಲ್ಲ ಅಂತಿದೆ ಸಿ ವೋಟರ್

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು? ಎಂಬ ಚರ್ಚೆ ಆರಂಭವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಕಡೆ ದೇಶದ ಜನರ ಗಮನ ನೆಟ್ಟಿದೆ. ಗುರುವಾರ ಸಿ ವೋಟರ್ ಸಮೀಕ್ಷೆ ಪ್ರಕಟವಾಗಿದ್ದು, ಈ ವರದಿ ಪ್ರಕಾರ ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ.

2014ರ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿತ್ತಾದರು ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ಬರುವುದಿಲ್ಲ ಎಂದು ಈ ಸಮೀಕ್ಷೆ ಹೇಳುತ್ತಿದೆ.

ಸಮೀಕ್ಷೆಯ ಅಂಕಿ ಅಂಶಗಳು

ದೇಶವಾರು ಕ್ಷೇತ್ರ ಹಾಗೂ ಶೇಕಡಾ ಮತ ಪ್ರಮಾಣ
ಎನ್ಡಿಎ: 233 (38%)
ಯುಪಿಎ: 167 (32%)
ಇತರೆ: 143 (30%)

ರಾಜ್ಯವಾರು ಪ್ರಮುಖ ಅಂಶಗಳು

– ಬಿಹಾರದ 40 ಕ್ಷೇತ್ರಗಳ ಪೈಕಿ ಎನ್ಡಿಎಗೆ 35 ಸ್ಥಾನ.
– ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಮಮತಾ ಬ್ಯಾನರ್ಜಿ ನೆತೃತ್ವದ ಟಿಎಂಸಿ 34 ರಲ್ಲಿ ಗೆಲ್ಲಲಿದೆ. ಬಿಜೆಪಿಗೆ 7 ಹಾಗೂ ಯುಪಿಎಗೆ 1 ಸ್ಥಾನ.
– ಪಂಜಾಬ್ ನ 13 ಲೋಕಸಭಾ ಕ್ಷೇತ್ರಗಳ ಪೈಕಿ ಎನ್ಡಿಎಗೆ ಕೇವಲ 1 ಸ್ಥಾನ ಸಿಕ್ಕರೆ ಯುಪಿಎಗೆ 12 ಸ್ಥಾನಗಳು ಸಿಗಬಹುದು.
– ಹರಿಯಾಣದಲ್ಲಿ 10 ಕ್ಷೇತ್ರಗಳಲ್ಲಿ ಎನ್ಡಿಎಗೆ 7 ಹಾಗೂ ಯುಪಿಎಗೆ 3 ಸ್ಥಾನ ಸಿಗಲಿದೆ.
– ಮಧ್ಯಪ್ರದೇಶದಲ್ಲಿ ಎನ್ಡಿಎ 23 ಹಾಗೂ ಯುಪಿಎ 6 ಸ್ಥಾನ ಗೆಲ್ಲುವ ಸಾಧ್ಯತೆ.
– ಒಡಿಶಾದಲ್ಲಿ ಬಿಜೆಡಿ 9 ಹಾಗೂ ಬಿಜೆಪಿಗೆ 12 ಕ್ಷೇತ್ರಗಳು ಸಿಗಬಹುದು.
– ಈಶಾನ್ಯ ರಾಜ್ಯಗಳಲ್ಲಿ ಎನ್ಡಿಎ 14, ಯುಪಿಎ 9 ಹಾಗೂ ಇತರೆ 2 ಕ್ಷೇತ್ರಗಳು ಸಿಗಲಿವೆ.
– ಗುಜರಾತ್ ನಲ್ಲಿ 26 ಸ್ಥಾನಗಳ ಪೈಕಿ ಬಿಜೆಪಿಗೆ 24 ಸ್ಥಾನ.
– ಮಹಾರಾಷ್ಟ್ರದಲ್ಲಿ ಎನ್ಡಿಎಗೆ 20 ಹಾಗೂ ಯುಪಿಎಗೆ 28 ಕ್ಷೇತ್ರಗಳು.
– ಉತ್ತರ ಪ್ರದೇಶದಲ್ಲಿ ಎಸ್ಪಿ- ಬಿಎಸ್ಪಿ ಹಾಗೂ ಮಹಾಗಠಬಂಧನಕ್ಕೆ 51 ಹಾಗೂ ಬಿಜೆಪಿಗೆ 25 ಸ್ಥಾನಗಳು ಹಂಚಿಕೆಯಾಗಲಿವೆ.

Leave a Reply