ಗರ್ಭಕೋಶದ ಪೊರೆ ನಿವಾರಣೆ ಸೆಪ್ಟಲ್ ರಿಸೆಕ್ಷನ್ ಶಸ್ತ್ರಚಿಕಿತ್ಸೆ

ಡಾ.ಬಿ.ರಮೇಶ್

ಹಿಸ್ಟರೋಸ್ಕೋಪಿಕ್ ಸೆಪ್ಟಲ್ ರಿಸೆಕ್ಷನ್ (HYSTEROSCOPIC SEPTAL RESECTION)

ಏನಿದು ಹಿಸ್ಟರೋಸ್ಕೋಪಿಕ್ ಸೆಪ್ಟಲ್ ರಿಸೆಕ್ಷನ್?
ಗರ್ಭಕೋಶದ ಆಂತರಿಕ ಭಾಗದಲ್ಲಿ ಅಡ್ಡಲಾಗಿ ಉಂಟಾದ ಪೊರೆಯನ್ನು  ‘ಸೆಪ್ಟಮ್’ ಎಂದು ಕರೆಯುತ್ತಾರೆ. ಇದು ಗರ್ಭಕೋಶದ ಅರ್ಧ ಭಾಗದ ತನಕ ಅಥವಾ ಗರ್ಭಕಂಠದ ತನಕ ಕೂಡ ಚಾಚಿಕೊಂಡಿರುತ್ತದೆ. ಇದು ಬಂಜೆತನಕ್ಕೆ ಒಂದು ಮುಖ್ಯ ಕಾರಣವಾಗಿದೆ. ಸೆಪ್ಟಮ್’ನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ‘ಸೆಪ್ಟಲ್ ರಿಸೆಕ್ಷನ್’ ಎಂದು ಕರೆಯುತ್ತಾರೆ. ಗರ್ಭಕೋಶದೊಳಗೆ ಟೆಲಿಸ್ಕೋಪ್ ಕಳಿಸಿ ಪೊರೆ ಎಲ್ಲಿಯವರೆಗೆ ಆವರಿಸಿಕೊಂಡಿದೆ ಎಂಬುದನ್ನು ಮೊದಲು ಕಂಡುಕೊಳ್ಳಲಾಗುತ್ತದೆ. ಆ ಬಳಿಕ ಅದನ್ನು ನಿವಾರಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ.

ಇದನ್ನು ಯಾರಿಗೆ, ಯಾಕೆ ಮಾಡಲಾಗುತ್ತದೆ?
ಹಿಸ್ಟರೆಸ್ಕೋಪಿಕ್ ಸೆಪ್ಟಲ್ ರಿಸೆಕ್ಷನ್‍ನ್ನು ಕೆಳಕಂಡ ಸಂದರ್ಭದಲ್ಲಿ ಮಾಡಲಾಗುತ್ತದೆ:

  • ಅದು ಬಂಜೆತನಕ್ಕೆ ಕಾರಣವಾಗಿದೆ ಎಂದು ಪರೀಕ್ಷೆಗಳಿಂದ ದೃಢಪಟ್ಟಿದ್ದರೆ,
  • ಕಾರಣವಿಲ್ಲದೆ ಅಬಾರ್ಷನ್ ಆಗುತ್ತಿದ್ದರೆ,

ಇದು ಕೇವಲ 20-30 ನಿಮಿಷದ ಪ್ರಕ್ರಿಯೆ. ಪೊರೆಯ ಗಾತ್ರ/ಉದ್ದ ಎಷ್ಟಿದೆ ಎನ್ನುವುದರ ಮೇಲೆ ಜನರಲ್ ಅನಸ್ಥೇಶಿಯಾ ಮೂಲಕ ಈ ಪ್ರಕ್ರಿಯೆ ಅನುಸರಿಸಲಾಗುತ್ತದೆ.

ಈ ವಿಧಾನ ಹೇಗೆ ಅನುಸರಿಸಲಾಗುತ್ತದೆ?
ಇದು ಮುಂಜಾನೆ ಬಂದು ಸಂಜೆ ಮನೆಗೆ ಹೋಗುವ ಶಸ್ತ್ರಚಿಕಿತ್ಸೆ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಒಳಗಾಗುವ ಮುಂಚೆ ಮಹಿಳೆ 6 ಗಂಟೆಗಳಷ್ಟು ಕಾಲ ಖಾಲಿ ಹೊಟ್ಟೆಯಲ್ಲಿ ಬರಬೇಕು.  ಸ್ತ್ರೀರೋಗ ತಜ್ಞರು ‘ಸ್ಪೆಕ್ಯುಲಮ್’ ಎಂಬ ಉಪಕರಣದ ಸಹಾಯದಿಂದ ಗರ್ಭಕಂಠದ ಪರಿಶೀಲನೆ ನಡೆಸುತ್ತಾರೆ.  ಬಳಿಕ ಹಿಸ್ಟರೆಸ್ಕೋಪ್’ನ್ನು ಗರ್ಭಕೋಶದೊಳಗೆ ಕಳಿಸಲಾಗುತ್ತದೆ. ಅದರ ಕ್ಯಾಮೆರಾ ಟಿವಿ ಮಾನಿಟರ್’ಗೆ ಸಂಪರ್ಕಿಸಲಪಟ್ಟಿರುತ್ತದೆ. ಪೊರೆಯ ಗಾತ್ರ ಚಿಕ್ಕದಾಗಿದ್ದರೆ ಅದನ್ನು ಹಿಸ್ಟರೆಸ್ಕೋಪ್ ಸೀಸರ್’ನಿಂದ ನಿವಾರಿಸಲಾಗುತ್ತದೆ. ಒಂದು ವೇಳೆ ಆದರ ಗಾತ್ರ ತುಂಬಾ ದಪ್ಪಗಿದ್ದರೆ, ಅದು ಗರ್ಭಕಂಠದ ತನಕ ಆವರಿಸಿ ‘ರಿಸೆಕ್ಟೋಸೋಪ್’ ಉಪಕರಣದ ಮುಖಾಂತರ (ವಿದ್ಯುಚ್ಚಕ್ತಿ ಸಹಾಯದಿಂದ) ಪೂರ್ತಿ ಪೊರೆಯನ್ನು ನಿವಾರಿಸಲಾಗುತ್ತದೆ.

ಇದಕ್ಕೆ ಏನಾದರೂ ಪರ್ಯಾಯಗಳಿವೆಯೇ?
ಇದಕ್ಕೆ ಯಾವುದೇ ಪರ್ಯಾಯ ಚಿಕಿತ್ಸೆಗಳಿಲ್ಲ. ‘ಹಿಸ್ಟರೆ ಸ್ಕೋಪ್’ ಇದು ಪತ್ತೆ ಹಚ್ಚುವ ಗೋಲ್ಡ್ ಸ್ಟ್ಯಾಂಡರ್ಡ್ ವಿಧಾನವಾಗಿದೆ. ಇದನ್ನು ಅಲ್ಟ್ರಾಸೌಂಡ್ ವಿಧಾನದಲ್ಲಿಯೂ ಪತ್ತೆ ಹಚ್ಚಬಹುದು. ಆದರೆ ಹಿಸ್ಟರೆಸ್ಕೋಪ್ ಮಾತ್ರ ಅತ್ಯವಶ್ಯ.

ನನ್ನನ್ನು ನಾನು ಹೇಗೆ ಸಿದ್ಧಗೊಳಿಸಬೇಕು?
ಎಲ್ಲಕ್ಕೂ ಮೊದಲು ಮೂತ್ರ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಸರಿಯಾಗಿ ಮಲವಿಸರ್ಜನೆ ಆಗಲೆಂದು ಹಿಂದಿನ ರಾತ್ರಿ 2 ಲ್ಯಾಕ್ಸೆಟಿವ್ ಮಾತ್ರೆಗಳನ್ನು ಸೇವಿಸಲು ಕೊಡಲಾಗುತ್ತದೆ.

ನಾನು ಏನು ಧರಿಸಬೇಕು?
ಶಸ್ತ್ರಚಿಕಿತ್ಸೆ ಮುಂಚೆ ಓಟಿ ಗೌನ್ ಧರಿಸಬೇಕಾಗುತ್ತದೆ. ಯಾವುದೇ ಆಭರಣಗಳನ್ನು ಧರಿಸಿರಬಾರದು.

ಜೊತೆಗೆ ಯಾರಾದರೂ ಇರಬೇಕಾ?
ಶಸ್ತ್ರಚಿಕಿತ್ಸೆ  ಪ್ರಕ್ರಿಯೆ ಶುರುವಾಗುವ ಮುಂಚಿನಿಂದ ಹಿಡಿದು ಮನೆಗೆ ಹೋಗುವ ತನಕ ನಿಮ್ಮ ಜೊತೆಗೆ ಯಾರಾದರೂ ಒಬ್ಬರು ಇರಲೇಬೇಕು.

ಶಸ್ತ್ರಚಿಕಿತ್ಸೆಗೂ ಮುನ್ನ ಸಮಾಗಮ
ಸಮಾಗಮ ಪ್ರಕ್ರಿಯೆ ಹಿಸ್ಟರೆಸ್ಕೋಪ್ ಪತ್ತೆ ವಿಧಾನಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ.

ನಾನು ಗರ್ಭಿಣಿಯಾಗಿದ್ದರೆ
ಒಂದುವೇಳೆ  ನೀವು ಗರ್ಭಿಣಿಯಾಗಿರುವ ಸಂದೇಹ ಇದ್ದರೆ, ಹಿಸ್ಟರೆಸ್ಕೋಪ್ ಮಾಡಿಸಿಕೊಳ್ಳಬಾರದು. ಮೂತ್ರ ಪ್ರೆಗ್ನನ್ಸಿ ಟೆಸ್ಟ್ ಮಾಡಿಸಿದರೂ ತೀರಾ ಆರಂಬಿಕ ಆರಂಭಿಕ ಹಂತದಲ್ಲಿ ಅದು ನೆಗೆಟಿವ್ ಬರಬಹುದು. ಈ ವಿಧಾನವನ್ನು ಋತುಚಕ್ರದ ಮೊದಲ 15 ದಿನಗಳಲ್ಲಿಯೇ ಮಾಡುವುದು ಒಳ್ಳೆಯದು. ಆದರೆ ಆಗ ರಕ್ತಸ್ರಾವ ಇರಬಾರದು.

ಹಿಸ್ಟರೆಸ್ಕೋಪಿ ಬಳಿಕ ಏನು?
ಮೊದಲ 4-5 ಗಂಟೆ ಅವಧಿಯಲ್ಲಿ ಅನಸ್ಥೇಶಿಯಾದ ಪ್ರಭಾವ ಇರುವುದರಿಂದ ಏನನ್ನೂ ಸೇವಿಸಬಾರದು. ನೀವು ಏನನ್ನಾದರೂ ಕುಡಿಯಲು ಆರಂಭಿಸಿದಾಗ, ಸರಿಯಾಗಿ ಮೂತ್ರ ವಿಸರ್ಜನೆ ಮಾಡಲು ಆರಂಭಿಸಿದ ಬಳಿಕ, ಸರಿಯಾಗಿ ನಡೆದಾಡಲು ಆರಂಭಿಸಿದ ಬಳಿಕ ನಿಮ್ಮನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಬೇರೆ ಏನಾದರೂ ಸಮಸ್ಯೆ ಇದ್ದರೆ ಮಾತ್ರ  ನಿಮ್ಮನ್ನು ಆ ರಾತ್ರಿ ಆಸ್ಪತ್ರೆಯಲ್ಲಿಯೇ ಉಳಿಯಲು ಹೇಳಲಾಗುತ್ತದೆ. ಮುಂದಿನ ಏಳು ದಿನಗಳ ಕಾಲ ಅತ್ಯಂತ ಅಲ್ಪ ಪ್ರಮಾಣದ ರಕ್ತಸ್ರಾವ ಕಂಡುಬರಬಹುದು. ಅದಕ್ಕಾಗಿ ಆಂಟಿ ಬಯಾಟಿಕ್ ಮತ್ತು ನೋವು ನಿವಾರಕಗಳನ್ನು ಸೇವನೆ ಮಾಡಲು ತಿಳಿಸಲಾಗುತ್ತದೆ. ಪೊರೆಯ ಗಾತ್ರವನ್ನು ಅನುಸರಿಸಿ ಹಾರ್ಮೋನು ಮಾತ್ರೆ ಸೇವಿಸಲು ಹೇಳಲಾಗುತ್ತದೆ.

ವಾಸ್ತವ ಜೀವನಕ್ಕೆ ಮರಳಿದ ನಂತರ
ಹಿಸ್ಟರೆಸ್ಕೋಪ್ ಮೂಲಕ  ಗರ್ಭಕೋಶದ ಪೊರೆ ನಿವಾರಣೆ ಮಾಡಿದ ಬಳಿಕ ಯೋನಿ ಮೂಲಕ ರಕ್ತಸ್ರಾವವಾಗುತ್ತಿದ್ದರೆ, ಕೆಲವು ದಿನಗಳ ಕಾಲ ಲೈಂಗಿಕ ಚಟುವಟಿಕೆ ನಡೆಸಬಾರದು. ವೈದ್ಯರು ನಿಮಗೆ ಇನ್ನಷ್ಟು ದಿನ ವಿಶ್ರಾಂತಿಗೆ ಸೂಚಿಸಬಹುದು. ಲೈಂಗಿಕ ಸಮಾಗಮ ಸೋಂಕಿಗೆ ಕಾರಣವಾಗಬಹುದು.

ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಕೆಲವು ದಿನಗಳ ಕಾಲ ರಕ್ತಸ್ರಾವ, ಯೋನಿಸ್ರಾವ ಸಾಮಾನ್ಯ. ಆದರೆ ಕೆಳಕಂಡ ಸಂದರ್ಭದಲ್ಲಿ ವೈದ್ಯರನ್ನು ತಕ್ಷಣ ಭೇಟಿ ಮಾಡಬೇಕು:

  • ಯೋನಿ ಸ್ರಾವ ದುರ್ವಾಸನೆಯಿಂದ ಕೂಡಿದ್ದರೆ
  • ಮೇಲಿಂದ ಮೇಲೆ ಜ್ವರ ಬರುತ್ತಿದ್ದರೆ
  • ಋತುಸ್ರಾವದ ಪ್ರಮಾಣಕ್ಕಿಂತ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ
  • ಉಸಿರಾಟಕ್ಕೆ ತೊಂದರೆ ಅನಿಸುತ್ತಿದ್ದರೆ
  • ತಲೆಸುತ್ತು, ಮಾತಿನಲ್ಲಿ ತೊದಲುವಿಕೆ, ಮೈ ಭಾರವಾದಂತೆ ಎನಿಸುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ.

ಅಡ್ಡ ಪರಿಣಾಮಗಳು
ಹಿಸ್ಟರೆಸ್ಕೋಪ್ ಅತ್ಯಂತ ಸುರಕ್ಷಿತ ವಿಧಾನ. ಅದರಿಂದ ಯಾವುದೇ ಹೆಚ್ಚಿನ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.

ಹೆಚ್ಚಿನ ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873
ಇಮೇಲ್: altiushospital@yahoo.com, www.altiushospital.com

Leave a Reply