ಪ್ರಧಾನಿ ಮೋದಿ ಟೀಂ ಕಂಗಾಲಾಗಿಸಿದ ಗುಪ್ತಚರ ವರದಿ..!

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ರಣತಂತ್ರ ರೂಪಿಸುವಲ್ಲಿ ನಿರತವಾಗಿದ್ದು, ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದೆ. ಚುನಾವಣಾ ಘೋಷಣೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಪ್ರಚಾರ ಶುರುವಾಗಲಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮಹತ್ಚದ ಸಭೆ ನಡೆಸಿದ್ದು ಚುನಾವಣಾ ತಂತ್ರಗಾರಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಚುನಾವಣಾ ಪ್ರವಾಸದ ಉಸ್ತುವಾರಿ ಹಾಗೂ ಯಶಸ್ಸಿನ ಬಗ್ಗೆ ಚರ್ಚೆ ನಡೆಸಿದ್ದಾರೆ.

ಲೋಕಸಭಾ ‌ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ಹೊಂದಿದ್ದು, ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಗಳನ್ನಾಗಿ ಮಾಡಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ರು. ಜೊತೆಗೆ ಫೆಬ್ರವರಿ 10ರಂದು ಹುಬ್ಬಳ್ಳಿಯಲ್ಲಿ ನಡೆಯುವ ಬೃಹತ ಸಮಾವೇಶದ ಮೂಲಕ ಕರ್ನಾಟಕದಲ್ಲಿ ಮೋದಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ ಎಂದ ಯಡಿಯೂರಪ್ಪ, ಫೆಬ್ರವರಿ 19 ಹಾಗೂ 27ಕ್ಕೂ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಫೆಬ್ರವರಿ ‌14 ಹಾಗೂ 21ರಂದು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಕಳೆದ ಚುನಾವಣೆಯಲ್ಲಿ ಮೋದಿ ಹಲೆಯಲ್ಲಿ ಗೆದ್ದು ಬರುತ್ತೇವೆ ಎನ್ನುತ್ತಿದ್ದ ಕೆಲವರು ಈ ಬಾರಿ ಗೆಲುವು ಸಾಧಿಸುವುದು ಕಷ್ಟ. ಹಾಗಾಗಿ ಕಲವು ಹಾಲಿ ಸಂಸದರಿಗೆ ಟಿಕೆಟ್​ ಸಿಗೋದು ಡೌಟ್​ ಎನ್ನುತ್ತಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್ ಸಿಗದೇ ಇರಲು ಮತ್ತೊಂದು ಕಾರಣವಿದೆ. ಪ್ರಧಾನಿ ನರೇಂದ್ರ ಮೋದಿಗೆ ಈ ಬಾರಿ ಸೋಲಿನ ಭೀತಿ ಎದುರಾಗಿದೆ. ಅದೇ ಕಾರಣಕ್ಕಾಗಿ ಈಗಾಗಲೇ ಎರಡು ಮೂರು ಬಾರಿ ಗೆದ್ದಿದ್ದರೂ ಜನ ಸಂಪರ್ಕ ಕಡಿಮೆ ಇದ್ದು, ಜನಾಭಿಪ್ರಾಯ ಸಂಸದರ ವಿರುದ್ಧ ಇರುವ ಕ್ಷೇತ್ರದಲ್ಲಿ ಹೊಸ ಮುಖ ಪರಿಚಯಿಸುವ ಮೂಲಕ ಸ್ಥಾನ ಉಳಿಸಿಕೊಳ್ಳಲು ತಂತ್ರಗಾರಿಕೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ಕೂಡ ಸಿಕ್ಕಿದ್ದು, ಈ ಬಾರಿ‌ ಅತಂತ್ರ ಲೋಕಸಭೆ ಹೊರಹೊಮ್ಮಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಂಡ್ ಟೀಂ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ದೇಶ ಪರ್ಯಾಟನೆ ಕೈಗೊಂಡಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಆರಂಭಿಸಿದೆ. ಮೊನ್ನೆ ಗುಜರಾತ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಅತಂತ್ರ ಲೋಕಸಭೆ ಎದುರಾಗದಂತೆ ನೋಡಿಕೊಳ್ಳಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು. ಒಂದು ವೇಳೆ ಅತಂತ್ರ ಲೊಕಸಭೆ ಎದುರಾಗಿ ಯಾರೋ ಒಬ್ಬರು ಪ್ರಧಾನಿ ಆದರೂ ದಕ್ಷ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇತ್ತ ಉತ್ತರ ಪ್ರದೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಣ ಅಮಿತ್ ಶಾ, ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ದಿನಕ್ಕೊಬ್ಬರು ಮುಖ್ಯಮಂತ್ರಿ ಆಗ್ತಾರೆ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ. ಅದೇನೆ ಇರಲಿ ಗುಪ್ತಚರ ಇಲಾಖೆ ವರದಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ತಲೆ ಕೆಡಿಸಿದೆ ಅನ್ನೋದು ಸತ್ಯ.

Leave a Reply