ದೇವೇಗೌಡರ ಕಾಲಿಗೆ ಪೆಟ್ಟು.. ಟಿಕೆಟ್ ಹಂಚಿಕೆ ಲೇಟು..!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಲೋಕಸಭಾ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿದೆ. ಜೆಡಿಎಸ್ ಜೊತೆ ಸೀಟು ಹಂಚಿಕೆ ಬಗ್ಗೆ ಫೆಬ್ರವರಿ 6 ರಂದು ಸಭೆ ನಡೆಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದ್ದರು. ಫೆಬ್ರವರಿ 6 ರಂದು ಕಾಂಗ್ರೆಸ್ ಪಕ್ಷದ ಸಾಮಾನ್ಯ ಸರ್ವ ಸದಸ್ಯರ ಸಭೆ ನಡೆಯಲಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್​ ಕೂಡ ಆಗಮಿಸಲಿದ್ದಾರೆ. ಅವತ್ತು ಸಭೆ ನಡೆಸಿ ಜೆಡಿಎಸ್‌ಗೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಅಂತಿಮವಾಗಿ ನಿರ್ಧಾರ ಮಾಡ್ತೇವೆ ಎಂದಿದ್ರು.

ಇಂದು ಮುಂಜಾನೆ ಸ್ನಾನದ ಕೊಠಡಿಯಲ್ಲಿ ಕಾಲು ಜಾರಿ ಬಿದ್ದಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಆಸ್ಪತ್ರೆ ಸೇರಿದ್ದಾರೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವ ವೈದ್ಯರು, ಕಾಲು ಉಳುಕಿದೆ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಅಗತ್ಯ ಇದೆ ಎಂದಿದ್ದಾರೆ. ಬಲಗಾಲಿನ ಮಂಡಿ ಬಳಿ ಉಳುಕಿದ್ದು, ಮೂಳೆಗೆ ಯಾವುದೇ ಬಿದ್ದಿಲ್ಲ ಎಂದು ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕಾಲಿಗೆ ಭಾರ ಬೀಳದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಇನ್ನು ಆಸ್ಪತ್ರೆಗೆ ತೆರಳಿ ಎಕ್ಸರೇ ಮಾಡಿಸಲು ಸಲಹೆ ನೀಡಿದ್ರಿಂದ ದೇವೇಗೌಡರು, ಜಯದೇವ ಆಸ್ಪತ್ರೆಗೆ ತೆರಳಿದ್ದು, ಕಾಲಿನ ಎಕ್ಸರೇ ಜೊತೆಗೆ ಸಣ್ಣಪುಟ್ಟ ವೈದ್ಯಕೀಯ ಪರೀಕ್ಷೆಗಳನ್ನೂ ಮಾಡಿಸಿಕೊಂಡು ಬರಲಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಪದ್ಮನಾಭ ನಗರ ನಿವಾಸದಲ್ಲಿ ಮಾತನಾಡಿದ ದೇವೇಗೌಡರು, ಯಾವುದೇ ಸಮಸ್ಯೆ ಇಲ್ಲ, ಕಾಲು ಸ್ವಲ್ಪ ಟ್ವಿಸ್ಟ್ ಆಗಿದೆ. ಎಮ್‌ಆರ್‌ಐ ಮಾಡಿಸೊಕೆ ಹೋಗ್ತಿದಿನಿ. ಏನು ತೊಂದರೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಸಮಾಲೋಚನೆ ನಡೆಸುವುದು ಸೂಕ್ತ. ಅದರೆ ರೀತಿ ಫೆಬ್ರವರಿ 6 ಕ್ಕೆ ಕಾಂಗ್ರೆಸ್ ಸಭೆ ನಡೆಸುವ ಮೊದಲು ವೇಣುಗೋಪಾಲ್ ಗೌಡರ ಜೊತೆ ಸಭೆ ನಡೆಸುವ ಸಾಧ್ಯತೆ ಹೆಚ್ಚಾಗಿತ್ತು. ಆ ಬಳಿಕವಷ್ಟೇ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರುತ್ತಿದ್ದರು.‌ ಇದೀಗ ದೇವೇಗೌಡರು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು ಸಭೆ ನಡೆಸುವ ಸಾಧ್ಯತೆ ಕಡಿಮೆ. ಜೆಡಿಎಸ್ ಕಣ್ಣಿಟ್ಟಿರುವ ಕ್ಷೇತ್ರಗಳ ಕಾಂಗ್ರೆಸ್ ನಾಯಕರು ಹಪಹಪಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜೊತೆ ರಗಳೆ ಮಾಡಿಕೊಳ್ಳೋದು ಬೇಡ ಅನ್ನೋ ಕಾರಣಕ್ಕೆ ಒಪ್ಪಿಕೊಂಡರೆ ಏನು ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ.

ಜೆಡಿಎಸ್ ಕೇಳುತ್ತಿರುವ ಕ್ಷೇತ್ರಗಳು

ಮಂಡ್ಯ
ಮೈಸೂರು
ಚಾಮರಾಜನಗರ
ಹಾಸನ
ಬೆಂಗಳೂರು ಉತ್ತರ
ಚಿಕ್ಕಮಗಳೂರು-ಉಡುಪಿ
ಶಿವಮೊಗ್ಗ
ರಾಯಚೂರು
ಕೊಪ್ಪಳ
ತುಮಕೂರು
ಚಿಕ್ಕಬಳ್ಳಾಪುರ
ಚಿತ್ರದುರ್ಗ

Leave a Reply