ಬಿಜೆಪಿ ಸೇರಿದ ಸೈನಿಕ ಔರಂಗಜೇಬ್ ತಂದೆ!

ಡಿಜಿಟಲ್ ಕನ್ನಡ ಟೀಮ್:

ಉಗ್ರರಿಂದ ಅಪಹರಣಕ್ಕೊಳಗಾಗಿ ಭೀಕರವಾಗಿ ಹತ್ಯೆಯಾದ ಸೈನಿಕ ಔರಂಗಜೇಬ್ ತಂದೆ ಮೊಹಮ್ಮದ್ ಹನೀಫ್ ಭಾನುವಾರ ಬಿಜೆಪಿ ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಸಾರ್ವಜನಿಕ ಸಮಾವೇಶ ನಡೆಸುತ್ತಿರುವ ಸಂದರ್ಭದಲ್ಲೇ ನಿವೃತ್ತ ಸೇನಾಧಿಕಾರಿ, ಲೆಫ್ಟಿನೆಂಟ್ ( ನಿವೃತ್ತ) ರಾಕೇಶ್ ಕುಮಾರ್ ಶರ್ಮಾ ಜತೆಯಲ್ಲಿ ಮೊಹಮ್ಮದ್ ಹನೀಫ್ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.

44 ರಾಷ್ಟ್ರೀಯ ರೈಫಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಔರಂಗಜೇಬ್, ಜೂನ್ 14, 2018ರಲ್ಲಿ ಪುಲ್ವಾಮಾದಲ್ಲಿ ಉಗ್ರರಿಂದ ಹತ್ಯೆಯಾಗಿದ್ದ. ಈದ್ ಆಚರಿಸಲು ಮನೆಗೆ ಬರುತ್ತಿದ್ದ ಆತನನ್ನು ಅಪಹರಿಸಿದ್ದ ಉಗ್ರರು ಬರ್ಬರವಾಗಿ ಹತ್ಯೆಗೈದಿದ್ದರು. ಅವರ ತಲೆ, ಕತ್ತಿಗೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು.

ರಾಜೌರಿ ನಿವಾಸಿ ಔರಂಗಜೇಬ್ ತಂದೆ ಹನೀಫ್ ರನ್ನು ಮೋದಿ ಪಕ್ಷಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹನೀಫ್ ಹೇಳಿದಿಷ್ಟು… ‘ಈ ಹತ್ಯೆಗೆ ಕಾರಣವಾದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ಔರಂಗಜೇಬ್‌ರ ಸ್ನೇಹಿತರು ಹಾಗೂ ಸಂಬಂಧಿಕರು ಗಲ್ಫ್‌ ರಾಷ್ಟ್ರಗಳಿಂದ ವಾಪಸಾಗುತ್ತಿದ್ದಾರೆ. ಅಲ್ಲದೆ, ಭದ್ರತಾ ಪಡೆಗಳೊಂದಿಗೆ ಕೈಜೋಡಿಸಲು ಇವರು ಮುಂದಾಗಿದ್ದಾರೆ. ಬಿಜೆಪಿ ಬಡವರ ಪರ ಚಿಂತನೆಯನ್ನು ಹೊಂದಿರುವ ಕಾರಣಕ್ಕೆ ನಾನು ಈ ಪಕ್ಷ ಸೇರುತ್ತಿದ್ದೇನೆ. ಈ ಹಿಂದಿನ ಸರಕಾರಗಳಿಗಿಂತ ವಿಭಿನ್ನವಾಗಿರುವ ಮೋದಿ ಸರಕಾರ ಬಡವರ ಕಲ್ಯಾಣಕ್ಕೆ ಸದಾ ಬದ್ಧವಾಗಿದೆ.’

Leave a Reply