ಶಾಸಕ ಗಣೇಶ್​ ಅರೆಸ್ಟ್ ಆಗೋದು ಪಕ್ಕಾ..!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರೆಸಾರ್ಟ್​ ರಾಜಕಾರಣದ ಬೆನ್ನಲ್ಲೇ ಕಾಂಗ್ರೆಸ್​ ಕೂಡ ಬಿಡದಿಯ ಈಗಲ್​ಟನ್​ ರೆಸಾರ್ಟ್​ಗೆ ತೆರಳಿದ್ರು. ಅಲ್ಲಿ ಕಾಂಗ್ರೆಸ್​ನ ಇಬ್ಬರು ಶಾಸಕರುಗಳಾದ ಕಂಪ್ಲಿ ಶಾಸಕ ಗಣೇಶ್​ ಹಾಗೂ ವಿಜಯನಗರ ಶಾಸಕ ಆನಂದ್​ ಸಿಂಗ್​ ಗಲಾಟೆ ಮಾಡಿಕೊಂಡಿದ್ದರು. ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದ ಬಳಿಕ ಎಫ್​ಐಆರ್​ ಕೂಡ ದಾಖಲಾಗಿತ್ತು. ಕೂಡಲೇ ಕಂಪ್ಲಿ ಶಾಸಕ ಗಣೇಶ್​ ಎಸ್ಕೇಪ್​ ಆಗಿದ್ದ. ಇಲ್ಲಿಯವರೆಗೂ ಪೊಲೀಸರ ಕೈಗೆ ಸಿಗದ ಗಣೇಶ್​ನನ್ನು ಬಂಧಿಸಲು ರಾಮನಗರ ಪೊಲೀಸ್ರು ಮೂರ್ನಾಲ್ಕು ತಂಡಗಳನ್ನು ಮಾಡಿಕೊಂಡು ತಲಾಶ್​ ನಡೆಸಿದ್ರೂ ಇಲ್ಲೀವರೆಗೂ ಸುಳಿವಿಲ್ಲ. ಸ್ವತಃ ಸಿಎಂ ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ.ಬಿ ಪಾಟೀಲ್​, ಸರ್ಕಾರ ಯಾರನ್ನೂ ರಕ್ಷಣೆ ಮಾಡೋದಿಲ್ಲ, ಕಾನೂನು ತನ್ನ ಕೆಲಸ ಮಾಡುತ್ತೆ ಅಂತಾ ಹೇಳಿದ್ರೂ ಕೂಡ ಶಾಸಕ ಗಣೇಶ್​ನನ್ನು ಪತ್ತೆ ಮಾಡಲು ಖಾಕಿಪಡೆಗೆ ಸಾಧ್ಯವಾಗಿರಲಿಲ್ಲ.

ಕದ್ದು ಮುಚ್ಚಿ ಓಡಾಡುತ್ತಿದ್ದ ಶಾಸಕ ಗಣೇಶ್​ ನಾಳೆ ಬಂಧನ ಆಗೋದು ಕನ್ಫರ್ಮ್​. ನಾಳೆಯಿಂದ ವಿಧಾನಸಭಾ ಬಜೆಟ್​ ಅಧಿವೇಶನ ಆರಂಭವಾಗ್ತಿದ್ದು, ಕಾಂಗ್ರೆಸ್​ ಶಾಸಕರು, ಕಡ್ಡಾಯವಾಗಿ ಹಾಜರಾಗಬೇಕು ಎಂದು ಮುಖ್ಯ ಸಚೇತಕ ಗಣೇಶ್​ ಹುಕ್ಕೇರಿ, ವಿಪ್​ ಜಾರಿ ಮಾಡಿದ್ದಾರೆ. ಹೀಗಾಗಿ ನಾಳೆ ಸದನಕ್ಕೆ ಕಂಪ್ಲಿ ಶಾಸಕ ಗಣೇಶ್​ ಹಾಜರಾಗಲೇಬೇಕಿದ್ದು, ಒಂದು ವೇಳೆ ವಿಧಾನಸೌಧಕ್ಕೆ ಆಗಮಿಸಿದರೆ ರಾಮನಗರ ಪೊಲೀಸರು ಅರೆಸ್ಟ್​ ಮಾಡಲಿದ್ದಾರೆ. ಈಗಾಗಲೇ ರಾಮನಗರ ಪೊಲೀಸ್ರು ಅರೆಸ್ಟ್​ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದ್ದು, ವಿಧಾನಸೌಧಕ್ಕೆ ಎಂಟ್ರಿಯಾಗುವ ಮೊದಲೇ ಬಂಧನ ಮಾಡ್ತಾರೆ. ಒಂದು ವೇಳೆ ಸದನಕ್ಕೆ ಗಣೇಶ್​ ಹಾಜರಾದರೆ ಶಾಸಕ ಗಣೇಶ್​ರನ್ನು ಬಂಧನ ಮಾಡೋದು ಕಷ್ಟವಾಗಲಿದೆ. ಯಾಕಂದ್ರೆ ಸದನದ ಒಳಗೆ ಯಾವುದೇ ಶಾಸಕರನ್ನು ಬಂಧನ ಮಾಡುವಂತಿಲ್ಲ. ಒಂದು ವೇಳೆ ಬಂಧನ ಮಾಡಲೇಬೇಕಾದ ಅನಿವಾರ್ಯತೆ ಎದುರಾದರೆ ಮೊದಲು ಸ್ಪೀಕರ್​ ಅವರ ಅನುಮತಿ ಪಡೆಬೇಕಾಗುತ್ತೆ. ಹಾಗಾಗಿ ಸದನಕ್ಕೆ ಪ್ರವೇಶ ಮಾಡುವ ಮೊದಲೇ ಬಂಧನ ಮಾಡಲು ಯೋಜನೆ ರೂಪಿಸಿದ್ದಾರೆ. ಆದ್ರೆ ಸದನಕ್ಕೆ ಬಾರದೇ ಹೋದರೆ ಹೇಗೆ ಬಂಧಿಸ್ತಾರೆ ಅನ್ನೋ ಅನುಮಾನ ಕೂಡ ಕಾಡಲಿದೆ. ಆದ್ರೆ ಅದಕ್ಕೂ ಉತ್ತರ ಇಲ್ಲಿದೆ.

ವಿಧಾನಸಭಾ ಅಧಿವೇಶನ ಅಥವಾ ಲೋಕಸಭಾ ಅಧಿವೇಶನ ನಡೆಯುವಾಗ ಸರ್ಕಾರ ಹಾಗೂ ವಿರೋಧ ಪಕ್ಷಗಳು ತಮ್ಮ ತಮ್ಮ ಶಾಸಕರು ಸಂಸದರಿಗೆ ವಿಪ್​ ಕೊಡುವುದು ಸಾಮಾನ್ಯ. ಯಾಕಂದ್ರೆ ಸದಸ್ಯರು ಗೈರು ಹಾಜರಾದ್ರೆ ಸರ್ಕಾರಕ್ಕೆ ಮುಜುಗರ ಆಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಬಜೆಟ್​ ಅಧಿವೇಶನದಲ್ಲಿ ಆಡಳಿತ ಪಕ್ಷದ ಶಾಸಕರು ಸಂಸದರು ಕಡ್ಡಾಯವಾಗಿ ಹಾಜರಿರಬೇಕಾಗುತ್ತದೆ. ಒಂದು ವೇಳೆ ಬಜೆಟ್​ ಅಂಗೀಕಾರದ ವೇಳೆ ಆಡಳಿತ ಪಕ್ಷದ ಶಾಸಕರು ಒಂದು ವೇಳೆ ಗೈರಾಗಿ ಬಜೆಟ್​ಗೆ ಒಪ್ಪಿಗೆ ಸಿಗದಿದ್ರೆ ಸರ್ಕಾರಕ್ಕೆ ಭಾರೀ ಮುಜುಗರ ಹಾಗೂ ಸರ್ಕಾರ ಬಿದ್ದು ಹೋದಂತೆಯೇ ಅರ್ಥ. ಹಾಗಾಗಿ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಪಕ್ಷಗಳು ವಿಪ್​ ಜಾರಿ ಮಾಡ್ತಾರೆ. ಒಂದು ವೇಳೆ ಪಕ್ಷಗಳು ನೀಡುವ ವಿಪ್​ ಅನ್ನು ಶಾಸಕರು ಉಲ್ಲಂಘನೆ ಮಾಡಿದ್ರೆ, ಸದಸ್ಯತ್ವದಿಂದ ಅನರ್ಹ ಮಾಡುವ ಅವಕಾಶ ಇರುತ್ತದೆ. ಒಂದು ಬಾರಿ ಅನರ್ಹಗೊಂಡರೆ ಮುಂದಿನ 6 ವರ್ಷಗಳ ಕಾಲ ಅಂದರೆ 2 ಬಾರಿ ಚುನಾವಣಾ ಸ್ಪರ್ಧೆಯಿಂದ ವಂಚಿತರಾಗ್ತಾರೆ. ಇದೇ ಕಾರಣಕ್ಕೆ ಎಲ್ಲರೂ ಕಡ್ಡಾಯವಾಗಿ ಹಾಜರಾಗ್ತಾರೆ. ನಾಳೆ ಇದೇ ಕಾರಣಕ್ಕೆ ಕಂಪ್ಲಿ ಶಾಸಕ ಗಣೇಶ್​ ಹಾಜರಾಗಬೇಕಾಗುತ್ತದೆ. ಒಂದು ನಾಳೆ ಗೈರಾದರೂ ಬಜೆಟ್​ ಮಂಡನೆ ದಿನ ಹಾಜರಾಗ್ತಾರೆ. ಆ ಸಮಯದಲ್ಲಿ ಬಂಧನ ಮಾಡೋದು ಕೂಡ ಪಕ್ಕಾ ಆಗಿದೆ.

Leave a Reply