ದರ್ಪ ತೋರಿದ ದೀದಿಗೆ ಸುಪ್ರೀಂ ಕೋರ್ಟಲ್ಲಿ ಮುಖಭಂಗ!

  ಡಿಜಿಟಲ್ ಕನ್ನಡ ಟೀಮ್:

  ಶಾರದಾ ಚಿಟ್‌ಫಂಡ್ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಮುಂದೆ ಹಾಜರಾಗಿ ಸಹಕಾರ ನೀಡುವಂತೆ ಕೋಲ್ಕತ ಪೊಲೀಸ್ ಹೈಕಮಿಷನರ್‌ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದೆ.

  ಕಳೆದ ಎರಡು ದಿನಗಳಿಂದ ರಾಷ್ಟ್ರದ ಗಮನವನ್ನು ಸೆಳೆದಿದ್ದ ಸಿಬಿಐ ಅಧಿಕಾರಿಗಳ ಬಂಧನ ಹಾಗೂ ಮಮತಾ ಬ್ಯಾನರ್ಜಿ ಅವರ ಧರಣಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಿಬಿಐ ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಿದೆ. ಇದೇ ವೇಳೆ ಪೊಲೀಸ್ ಆಯುಕ್ತ ಕುಮಾರ್ ಅವರನ್ನು ಬಂಧಿಸದಂತೆ ಸಿಬಿಐಗೂ ಕೋರ್ಟ್ ಸೂಚಿಸಿದೆ.

  ಇದೇ ವೇಳೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಕಮಿಷನರ್ ಕುಮಾರ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ಫೆಬ್ರವರಿ 20ರೊಳಗೆ ಉತ್ತರಿಸುವಂತೆಯೂ ಗಡುವು ನೀಡಿದೆ.

  ಇದರೊಂದಿಗೆ ಶಾರದಾ ಚಿಟ್‌ಫಂಡ್ ಹಗರಣದ ತನಿಖೆ ವಿಚಾರದಲ್ಲಿ ಸಿಬಿಐ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರದ ನಡುವಣ ಸಮರ ಮಹತ್ವದ ಘಟ್ಟ ತಲುಪಿದೆ.

  Leave a Reply