ಇಡಿ ಮುಂದೆ ಹಾಜರಾದ್ರು ರಾಬರ್ಟ್ ವಾದ್ರಾ, ಕಾರ್ತಿ ಚಿದಂಬರಂ! ಇಡಿ ಕಚೇರಿ ಮುಂದೆ ಮಾಧ್ಯಮದವರು ದಂಗಾಗಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಪ್ರಭಾವಿ ನಾಯಕರುಗಳಾದ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿವೆ.

ಒಂದೇ ದಿನ ಈ ಇಬ್ಬರ ವಿಚಾರಣೆಯನ್ನು ನಡೆಸಿರುವುದು ಕುತೂಹಲ ಮೂಡಿಸಿದೆ. ನಿನ್ನೆಯಷ್ಟೇ ವಾದ್ರಾ ಅವರನ್ನು ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಇಂದು ಕೂಡ ತನಿಖೆಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದರು.

ವಾದ್ರಾ ಬೆಳಗ್ಗೆ 10.30ಕ್ಕೆ ಇಡಿ ಕಚೇರಿಗೆ ಆಗಮಿಸಲು ತಿಳಿಸಲಾಗಿತ್ತು. ಮಾಧ್ಯಮದವರ ತಂಡ ವರದಿ ಮಾಡಲು ಜಮಾಯಿಸಿದ್ದರು. 11 ಗಂಟೆಗೆ ಕಪ್ಪು ಬಣ್ಣದ ಎಸ್ ಯುವಿ ಕಾರು ಆಗಮಿಸಿದಾಗ ‘ವಾದ್ರಾ ಬಂದರು’ ಎಂದು ಎಲ್ಲ ಮಾಧ್ಯಮದವರು ಕ್ಯಾಮೆರಾ ಆನ್ ಮಾಡಿದರು ಕಾರಿನಿಂದ ಸೂಟು ಧರಿಸಿದ್ದ ವ್ಯಕ್ತಿ ಕೆಳಗಿಳಿಯುತ್ತಿದಂತೆ ಎಲ್ಲರಿಗೂ ಅಚ್ಚರಿಯಾಯ್ತು ಕಾರಣ ಕಾರಿನಲ್ಲಿ ಆಗಮಿಸಿದ್ದು, ಐಎನ್ ಎಕ್ಸ್ ಮೀಡಿಯಾ ಪ್ರಕರಣದ ಪ್ರಮುಖ ಆರೋಪಿ ಕಾರ್ತಿ ಚಿದಂಬರಂ.

ಕಾರ್ತಿ ಆಗಮಿಸಿದ 20 ನಿಮಿಷಗಳ ಅಂತರದಲ್ಲಿ ವಾದ್ರಾ ಇಡಿ ಕಚೇರಿಗೆ ಆಗಮಿಸಿ ಅಧಿಕಾರಿಗಳ ಮುಂದೆ ಹಾಜರಾದರು.

ಭಾರತದಲ್ಲಿ ಕಿಕ್ ಬ್ಯಾಕ್ ಗಳನ್ನು ಪಡೆದು ವಾದ್ರಾ ಬ್ರಿಟನ್ ನಲ್ಲಿ ಅಕ್ರಮ ಆಸ್ತಿ ಖರೀದಿಸಿರುವ ಆರೋಪ ಪ್ರಕರಣದ ವಿಚಾರಣೆಗೆ ವಾದ್ರಾರನ್ನು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಡಿಯ ಇಬ್ಬರು ಉಪ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರನ್ನೊಳಗೊಂಡ ತಂಡದಿಂದ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆ ನಡೆಸಲಾಗಿದೆ ಎಂಬುದು ಇಡಿ ಮೂಲಗಳಿಂದ ತಿಳಿದುಬಂದಿದೆ.

Leave a Reply