ಅತೃಪ್ತ ಶಾಸಕರ ವಿರುದ್ಧ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ಕಾಂಗ್ರೆಸ್ ಪತ್ರ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಶಾಸಕಾಂಗ ಸಭೆಗೆ ಪದೇ ಪದೇ ಗೈರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘನೆ ಮಾಡುತ್ತಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಉಮೇಶ್ ಜಾಧವ್ ಹಾಗೂ ನಾಗೇಂದ್ರ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಗೆ ಪತ್ರ ಬರೆಯಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಇಷ್ಟು, ‘ಇಂದಿನ ಶಾಸಕಾಂಗ ಪಕ್ಷದ ಸಭೆಗೆ ಐವರು ಶಾಸಕರು ಗೈರಾಗಿದ್ದಾರೆ. ರೋಷನ್ ಬೇಗ್ ಅವರು ಪಕ್ಷದ ಅಲ್ಪಸಂಖ್ಯಾಂತರ ಸಭೆಯಲ್ಲಿ ಭಾಗವಹಿಸಿದ್ದಾರೆ. ಇನ್ನು ಬಿಸಿ ಪಾಟೀಲ್ ಅವರು ಬೇರೆ ಕೆಲಸದಲ್ಲಿದ್ದು, ಸಂಜೆ ಖುದ್ದಾಗಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಗಣೇಶ್ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಇನ್ನು ಉಳಿದ ನಾಲ್ವರು ಶಾಸಕರ ಪತ್ರ ಬರೆದಿದ್ದಾರೆ. ಆದರ ಪ್ರಕಾರ ರಮೇಶ್ ಜಾರಕಿಹೊಳಿ ಅವರು ಮದುವೆ ಕಾರಣ ನೀಡಿದರೆ, ನಾಗೇಂದ್ರ ಅವರು ಪೂರ್ವ ನಿಗದಿತ ಕಾರ್ಯಕ್ರಮದ ಕಾರಣ ಹೇಳಿದ್ದಾರೆ. ಇನ್ನು ಇಬ್ಬರು ಶಾಸಕರು ತಮ್ಮ ಕಾರಣ ನೀಡಿದ್ದಾರೆ. ಇವರು 15ನೇ ತಾರೀಖಿನವರೆಗೂ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಳೆದ ತಿಂಗಳ 18ರ ಸಭೆಗೆ ಈ ನಾಲ್ವರು ಗೈರಾಗಿದ್ದಕ್ಕೆ ತಮ್ಮದೇ ಆದ ಕಾರಣ ನೀಡಿದ್ದರು. ಅದನ್ನು ಸಾಬೀತುಪಡಿಸಲು ಖುದ್ದಾಗಿ ಹಾಜರಾಗುವಂತೆ ನಾನು ಈ ಶಾಸಕರಿಗೆ ಪತ್ರ ಬರೆದಿದ್ದೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ಈಗ ಮತ್ತೇ ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಈ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಗೆ ಪತ್ರ ಬರೆಯಲಾಗಿದೆ.’

Leave a Reply