ಸರ್ಕಾರ ಉಳಿಸಿಕೊಳ್ಳಲು ಸಕಲ ತಯಾರಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡ್ತಾರೆ, ಬಜೆಟ್​ ಮಂಡನೆಗೂ ಮುನ್ನವೇ ಹೈಡ್ರಾಮ ನಡೆಯೋದು ಪಕ್ಕಾ ಅನ್ನೋ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ ನಡೆಯುವ ಕಾಂಗ್ರೆಸ್​ ಶಾಸಕಾಂಗ ಸಭೆಗೆ ಹಾಜರಾಗದಿದ್ದರೆ ಪಕ್ಷೇತರ ನಿಷೇಧ ಕಾಯ್ದೆ ಅಡಿ ಅನರ್ಹ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಗುಟುರು ಹಾಕ್ತಿದ್ದ ಹಾಗೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಅತೃಪ್ತರು ಹೋಟೆಲ್​ ಬಿಲ್​ ಕಟ್ಟಿ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇನ್ನು ಅತೃಪ್ತರ ಬಣಕ್ಕೆ ರಾತ್ರೋ ರಾತ್ರಿ ಶಾಕ್​ ಕೊಟ್ಟಿದ್ದು, ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಚಿಂಚೋಳಿ ಶಾಸಕ ಉಮೇಶ್​ ಜಾಧವ್​ ಅವರಿಗೆ ನೀಡಿದ್ದ ರಾಜ್ಯ ಉಗ್ರಾಣ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ವಾಪಸ್​ ಪಡೆದುಕೊಂಡಿದ್ದು, ಆ ಸ್ಥಾನವನ್ನು ಪ್ರತಾಪ್​ ಗೌಡ ಪಾಟೀಲ್​ಗೆ ನೀಡಲಾಗಿದೆ. ಇನ್ನು ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರನ್ನು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಂಗಡ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಸಂಪುಟದರ್ಜೆ ಸ್ಥಾನಮಾನ ನೀಡಿ ಸಿಎಂ ಆದೇಶ ಮಾಡಿದ್ದಾರೆ.

ಉಮೇಶ್​ ಜಾಧವ್​ ಗುರುವಾರ ಸಂಜೆಯೇ ರಾಜೀನಾಮೆ ನೀಡ್ತಾರೆ ಅನ್ನೋ ಮಾಹಿತಿ ಇತ್ತು. ಆದ್ರೆ ಶುಕ್ರವಾರ ಬೆಳಗ್ಗೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್​ಗೆ ಶಾಕ್​ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಅವರು ರಾಜೀನಾಮೆ ನೀಡುವ ಮುಂಚೆಯೇ ಸರ್ಕಾರ ಶಾಕ್​ ಕೊಟ್ಟಿದೆ. ಈ ಮೂಲಕ ಅತೃಪ್ತರ ಬಣಕ್ಕೆ ನಾವು ಯಾವುದೇ ಸವಾಲು ಸ್ವೀಕರಿಸಲು ಸಿದ್ಧ ಅನ್ನೋ ಮೆಸೇಜ್​ ಕಳುಹಿಸಿದೆ. ಅಂದ್ರೆ ಶಾಸಕರು ರಾಜೀನಾಮೆ ಕೊಟ್ಟರೂ ನಾವು ತಲೆ ಕೆಡಿಸಿಕೊಳ್ಳೋದಿಲ್ಲ, ಸರ್ಕಾರ ಉಳಿಸಿಕೊಳ್ಳಲು ನಾವು ಏನು ಮಾಡಬೇಕು ಅನ್ನೋ ಲೆಕ್ಕಾಚಾರ ಪಕ್ಕಾ ಆಗಿದೆ ಅನ್ನೋ ಸಂದೇಶ ಈ ಮೂಲಕ ರವಾನೆ ಆಗಿದೆ. ಇನ್ನು ಬಿಜೆಪಿಯ ಹಿಟ್​ ಲಿಸ್ಟ್​ನಲ್ಲಿದ್ದ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರ ಬಸವನಗೌಡ ದದ್ದಲ್ ಅವರಿಗೆ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮ ಕೊಟ್ಟಿರೋದ್ರಿಂದ ಅಲ್ಲೊಂದು ವಿಕೆಟ್​ ಹೋಗುವುದನ್ನು ತಡೆದಿದೆ.

ಇದೇ ಕಾರಣಕ್ಕೆ ಮೊನ್ನೆ ಡಿಕೆ ಶಿವಕುಮಾರ್​​ ಒಂದು ಮಾತನ್ನು ಹೇಳಿದ್ರು. ಬಿಜೆಪಿ ನಂಬಿಕೊಂಡು ಹೋಗುವ ಶಾಸಕರು ಮುಂದೆ ಅನುಭವಿಸಬೇಕಾಗುತ್ತೆ ಎಂದಿದ್ದರು. ಸತ್ಯ ನಾಳೆ ಅತೃಪ್ತ ಶಾಸಕರು ಏನೇ ನಿರ್ಧಾರ ಮಾಡಿದರೂ ಸಾಕಷ್ಟು ಕಾನೂನು ತೊಡಕುಗಳನ್ನು ಅನುಭವಿಸಬೇಕಾಗುತ್ತದೆ. ಯಾಕಂದ್ರೆ ಬಲ್ಲ ಮೂಲಕಗಳ ಮಾಹಿತಿ ಪ್ರಕಾರ ಮೊದಲ ದಿನ ಯಾವ ಯಾವ ಶಾಸಕರು ಸದನಕ್ಕೆ ಬಂದಿರಲಿಲ್ಲ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹ ಮಾಡುವಂತೆ ಸಿದ್ದರಾಮಯ್ಯ ಪ್ರತ್ಯೇಕ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಯಾವುದೇ ಅತೃಪ್ತ ಶಾಸಕ ರಾಜೀನಾಮೆ ನೀಡಲು ಬಂದರೆ ಮೊದಲು ಸಿದ್ದರಾಮಯ್ಯ ಅವರು ನೀಡರುವ ಅನರ್ಹತೆ ಮ್ಯಾಟರ್​ ಪ್ರಥಮವಾಗಲಿದೆ. ಆ ಬಳಿಕವಷ್ಟೇ ರಾಜೀನಾಮೆ ವಿಚಾರ ಮನ್ನಲೆಗೆ ಬರಲಿದೆ. ರಾಜೀನಾಮೆಯನ್ನೂ ಅಂಗೀಕರಿಸದೆ, ಅನರ್ಹ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿಸಿ ಸರ್ಕಾರ ಉಳಿಸಕೊಳ್ಳಲು ಯೋಜನೆ ಸಿದ್ಧವಾಗಿದ್ದು, ಶುಕ್ರವಾರ ಅತೃಪ್ತರು ಬಂದ ಬಳಿಕ ಅಖಾಡ ರಂಗೇರಲಿದೆ.

Leave a Reply