ಎಚ್ ಡಿಕೆ ಬಜೆಟ್ನಲ್ಲಿ ಜಲಸಂಪನ್ಮೂಲಕ್ಕೆ ಹೆಚ್ಚಿನ ಆದ್ಯತೆ! ಯಾವ ಯೋಜನೆಗಳಿಗೆ ಎಷ್ಟು ಅನುದಾನ?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ 2019ರ ಬಜೆಟ್ ಮಂಡನೆಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕೃಷಿಕ ವರ್ಗಕ್ಕೆ ನೆರವಾಗಿದೆ.

ಸಿಎಂ ಕುಮಾರಸ್ವಾಮಿ ಅವರ ಬಜೆಟ್ ನಲ್ಲಿ ಒಟ್ಟು 17,212 ಕೋಟಿ ರು.ಗಳನ್ನು ನೀರಾವರಿಗೆ ಬಿಡುಗಡೆ ಮಾಡಲಾಗಿದ್ದು, ಪ್ರಮುಖ ಯೋಜನೆಗಳು ಹೀಗಿವೆ…

  • ಜಲಸಂಪನ್ಮೂಲ ಯೋಜನೆಗಳಿಗೆ ಒಟ್ಟು 17,212 ಕೋಟಿ ರುಪಾಯಿ.
  • ಇಸ್ರೆಲ್ ಮಾದರಿಯ ಕಿರು ನೀರಾವರಿ ಯೋಜನೆಗಾಗಿ 145 ಕೋಟಿ ರು.
  • ಕೆರೂರು, ಇಂಡಿ, ಕೊಪ್ಪಳ, ಕಂಪ್ಲಿ, ಮಸ್ಕಿ ಏತ ನೀರಾವರಿ ಯೋಜನೆ ಜಾರಿ. ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ.
  • ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ( ಎಣ್ಣೆ ಹೊಳೆ ಯೋಜನೆ), ಚನ್ನರಾಯಪಟ್ಟಣ, ಹೊಳೆನರಸಿಪುರದಲ್ಲಿ ಹೊಳೆ ತುಂಬಿಸುವ ಕಾರ್ಯಕ್ರಮ.
  • 300 ಕೋಟಿ ವೆಚ್ಚದಲ್ಲಿ ಕೆರೂರು ನೀರಾವರಿ ಯೋಜನೆ. ಕೊಪ್ಪಳ ಏತ ನೀರಾವರಿ ಯೋಜನೆಗೆ 200 ಕೋಟಿ.
  • 200 ಕೋಟಿ ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸುವ ಯೋಜನೆ. ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ ರೂಪಾಯಿ.
  • ಉಡುಪಿ ಕೆರೆ ತುಂಬಿಸಲು 40 ಕೋಟಿ ರೂಪಾಯಿ ಅನುದಾನ, 40 ಕೋಟಿ ವೆಚ್ಚದಲ್ಲಿ ಮುಂಡಗೋಡುವಿನಲ್ಲಿ ಕೆರೆಗಳ ಭರ್ತಿ.
  • ಹೇಮಾವತಿ ಎಡದಂತೆ ನಾಲೆ ಯೋಜನೆಗೆ 80 ಕೋಟಿ ರೂಪಾಯಿ. ಒಟ್ಟಾರೆ 1600 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ.
  • ಕಾಲುವೆಗಳ ಆಧುನೀಕರಣಕ್ಕೆ 860 ಕೋಟಿ ರೂಪಾಯಿ.
  • ಮಳವಳ್ಳಿ ಅಚ್ಚುಕಟ್ಟು ಪ್ರದೇಶಗಳ ನೀರಾವರಿ ಯೋಜನೆಗೆ 30 ಕೋಟಿ.
  • ಕೆರೆಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 449 ಕೋಟಿ ರೂಪಾಯಿ.

Leave a Reply