ಆಡಿಯೋ ಪ್ರಕರಣ: ಎಸ್ ಐಟಿ ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್ ಗ್ರೀನ್ ಸಿಗ್ನಲ್! ಬಿಜೆಪಿಗೆ ಆಘಾತ!

ಡಿಜಿಟಲ್ ಕನ್ನಡ ಟೀಮ್:

‘ನಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಆಪರೇಷನ್ ಕಮಲದ ಆಡಿಯೋ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ನೀಡಬಾರದು’ ಎಂದು ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಎಷ್ಟೇ ಗಂಟಲು ಹರಿದುಕೊಂಡರೂ ಲೆಕ್ಕಿಸದ ಸ್ಪೀಕರ್ ರಮೇಶ್ ಕುಮಾರ್ ಈ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ವಹಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಎಸ್ ಐಟಿಗೆ ನೀಡುವ ಸಿಎಂ ಕುಮಾರಸ್ವಾಮಿ ಅವರ ನಿರ್ಧಾರವನ್ನು ಬಿಜೆಪಿ ನಾಯಕರು ವಿರೋಧಿಸಿ ಗದ್ದಲ ಸೃಷ್ಟಿಸಿದರು. ಪರಿಣಾಮ ಕಲಾಪವನ್ನು ಎರಡು ಬಾರಿ ಮಂದೂಡಬೆಕಾಯ್ತು. ಆದರೆ ಅಂತಿಮವಾಗಿ ಪ್ರಕರಣದ ವಿಚಾರಣೆಯನ್ನು ಎಸ್ ಐಟಿ ನಡೆಸಲು ಗ್ರೀನ್ ಸಿಗ್ನಲ್ ನೀಡಿದ ರಮೇಶ್ ಕುಮಾರ್, ‘ನಾನು ಮತ್ತೇ ನಿರ್ಧಾರ ಬದಲಿಸುವುದಿಲ್ಲ’ ಎಂದು ಹೇಳಿ ಕಲಾಪವನ್ನು ನಾಳೆಗೆ ಮುಂದೂಡಿದರು.

‘ಈ ಪ್ರಕರಣದಿಂದ ನನಗೆ 15 ದಿನಗಳಲ್ಲಿ ರಿಲೀಫ್ ಸಿಗಬೇಕು. ಹೀಗಾಗಿ ಪ್ರಕರಣದ ವಿಚಾರಣೆ ಎಸ್ ಐಟಿಗೆ ವಹಿಸುತ್ತಿದ್ದೇನೆ. ಈ ವಿಚಾರದಲ್ಲಿ ಮತ್ತೇ ನನ್ನ ನಿರ್ಧಾರ ಬದಲಿಸುವುದಿಲ್ಲ’ ಎಂದರು.

Leave a Reply