ಯುಪಿಎಗಿಂತ ಎನ್ಡಿಎ ರಾಫೆಲ್ ಒಪ್ಪಂದವೇ ಅಗ್ಗ! ಕಾಂಗ್ರೆಸ್ ಆರೋಪಗಳನ್ನು ಸುಳ್ಳು ಮಾಡಿದ ಸಿಎಜಿ ವರದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಯುಪಿಎ ಸರ್ಕಾರಕ್ಕಿಂತ 3.5 ಪಟ್ಟು ಹೆಚ್ಚಿನ ಬೆಲೆಗೆ ರಾಫೆಲ್ ಯುದ್ಧ ವಿಮಾನ ಖರೀದಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಮಹಾಲೇಕಪಾಲ ವರದಿ ಸುಳ್ಳು ಎಂದು ಸಾಬೀತುಪಡಿಸಿದೆ.

ಕಳೆದ ಒಂದೂವರೆ ವರ್ಷದಿಂದ ಯುಪಿಎ ಹಾಗೂ ಎನ್ಡಿಎ ಸರ್ಕಾರಗಳ ರಫೇಲ್ ಯುದ್ಧ ವಿಮಾನ ಖರೀದಿ​ಒಪ್ಪಂದಗಳನ್ನು ಅಧ್ಯಯನ ಮಾಡಿದ ಸಿಎಜಿ ವರದಿಯನ್ನು ಬುಧವಾರ ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು. ಇದರ ಪ್ರಕಾರ ಯುಪಿಎ ಒಪ್ಪಂದಕ್ಕಿಂತ ಎನ್ಡಿಎ ಸರ್ಕಾರದ ಒಪ್ಪಂದದಲ್ಲಿ ಶೇ.2.86ರಷ್ಟು ಬೆಲೆ ಕಡಿಮೆ ಇದೆ ಎಂದು ಹೇಳಿದೆ. ಈ ವರದಿಯ ಮುಖ್ಯ ಅಂಶಗಳು ಹೀಗಿವೆ…

  • ಯುಪಿಎ ಸರ್ಕಾರ 126 ಯುದ್ಧ ವಿಮಾನಗಳನ್ನು ಖರೀದಿ ಮಾಡಲು ಮಾಡಿಕೊಂಡ ಒಪ್ಪಂದಕ್ಕಿಂತಲೂ ಎನ್ ಡಿಎ ಸರ್ಕಾರ 36 ವಿಮಾನಗಳನ್ನು ಖರೀದಿ ಮಾಡಲು ಮಾಡಿಕೊಂಡ ಒಪ್ಪಂದ ಶೇ. 17.8 ರಷ್ಟು ಕಡಿಮೆಯದ್ದಾಗಿದೆ.
  • ಯುಪಿಎ ಸರ್ಕಾರ ಮೊದಲ ಹಂತದಲ್ಲಿ 18 ಯುದ್ಧ ವಿಮಾನಗಳನ್ನು ತಯಾರಿಸಿಕೊಡಲು ಮಾಡಿಕೊಂಡ ವೇಳಾಪಟ್ಟಿಗಿಂತಲೂ ಎನ್ಡಿಎ ಸರ್ಕಾರ ಮಾಡಿಕೊಂಡ ವೇಳಾಪಟ್ಟಿ ಅತ್ಯಂತ ಉತ್ತಮವಾಗಿದೆ.
  • ಒಪ್ಪಂದದ ವೇಳೆ ಭಾರತೀಯ ನೌಕಾ ಪಡೆಯು ತನಗೆ ಬೇಕಾದ ಎಎಸ್ ಕ್ಯುಆರ್ ಎಸ್​ (ನೌಕಾ ಪಡೆಯ ಗಣಾತ್ಮಕ ಅಗತ್ಯಗಳು) ಅಗತ್ಯಗಳನ್ನು ಸೂಕ್ತ ರೀತಿಯಲ್ಲಿ ವಿವರಿಸಿರಲಿಲ್ಲ. ಹೀಗಾಗಿ ತಯಾರಕರು ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಿರಲಿಲ್ಲ.
  • ಎನ್ಡಿಎ ಒಪ್ಪಂದದಲ್ಲಿ 14 ವಸ್ತುಗಳನ್ನು ಆರು ಪ್ಯಾಕೇಜ್ ಗಳಲ್ಲಿ ಖರೀದಿ.
  •  ಇದರಲ್ಲಿ ಬೇಸಿಕ್ ವಿಮಾನ ಸೇರಿದಂತೆ ಮೂರು ವಸ್ತುಗಳು ಮೂಲ ಬೆಲೆಗೆ ಖರೀದಿಸಿದರೆ, ನಾಲ್ಕು ವಸ್ತುಗಳನ್ನು ಆದರ ಮೂಲ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಖರೀದಿ. ಈ ವಸ್ತುಗಳ ಮೊತ್ತ ಹೊರಗಡೆ ಇನ್ನು ಹೆಚ್ಚಾಗಿದೆ.
  • ಯುದ್ಧ ವಿಮಾನಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಸಾವರಿನ್‌ ಗ್ಯಾರಂಟಿ ಬೇಕೆಂದು ಕೇಳಿತ್ತು. ಆದರೆ ಫ್ರಾನ್ಸ್ ಸರಕಾರ ಕೇವಲ “ಲೆಟರ್‌ ಆಫ್‌ ಕಂಫರ್ಟ್” ಅನ್ನು ನೀಡಿದೆ.
  • ಯುಪಿಎ ಸರ್ಕಾರ ಬೇಸಿಕ್ ಯುದ್ಧ ವಿಮಾನ ಖರೀದಿ ಮಾಡಿದ್ದಕ್ಕಿಂತ ಶೇ.9ರಷ್ಟು ಕಡಿಮೆ ಮೊತ್ತಕ್ಕೆ ಎನ್ಡಿಎ ಖರೀದಿಸುತ್ತಿದೆ ಎಂಬ ಕೇಂದ್ರ ಸರ್ಕಾರದ ವಾದವನ್ನು ವರದಿ ನಿರಾಕರಿಸಿದೆ.
  • ಯುಪಿಎ ಸರ್ಕಾರ ಕೂಡ ಯುದ್ಧ ವಿಮಾನಗಳ ಮೊತ್ತವನ್ನು ಗೌಪ್ಯವಾಗಿಡಲು ನಿರ್ಧರಿಸಿತ್ತು.

Leave a Reply