ಅತೃಪ್ತರು ವಾಪಸ್.. ಸಂಪೂರ್ಣ ಆಡಿಯೋ ರಿಲೀಸ್.. ಈಗ ಖೇಲ್ ಕತಂ ನಾಟಕ್ ಬಂದ್!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲದ ಪೂರ್ಣ ಪ್ರಮಾಣದ ಆಡಿಯೋ ಲೀಕ್ ಆಗಿರುವುದು ಒಂದೆಡೆ. ಇನ್ನು ತಮ್ಮ ಬಂಡಾಯದಿಂದ ಮೈತ್ರಿ ಸರ್ಕಾರಕ್ಕೆ ಕಿಂಚಿತ್ತೂ ಪರಿಣಾಮ ಬೀರಲ್ಲ ಎಂಬುದನ್ನು ಅರಿತ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳಿದ್ದಾರೆ. ಇದರೊಂದಿಗೆ ಕಳೆದ ಒಂದೂವರೆ ತಿಂಗಳಿನಿಂದ ನಡೆದ ಬಂಡಾಯ ಹಾಗೂ ಆಪರೇಷನ್ ಕಮಲದ ಪ್ರಹಸನಕ್ಕೆ ಬಹುತೇಕ ತೆರೆ ಬಿದ್ದಿದೆ.

ಹೌದು, ರಾಜ್ಯ ರಾಜಕಾರಣದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ನಡೆಯುತ್ತಿದ್ದ ಬೃಹತ್ ನಾಟಕ ಅಂತ್ಯವಾಗಿದೆ. ಬಂಡಾಯದ ಆಟ ಯಶಸ್ವಿಯಾಗಿ ನಡೆಯದ ಕಾರಣಕ್ಕೆ ಪಾತ್ರಧಾರಿಗಳು ವಾಪಸ್ಸಾಗಿದ್ದು, ಹಳೇ ಕಂಪನಿಯಲ್ಲೇ ನಾಟಕ ಮುಂದುವರಿಸಬೇಕಾದ ಅನಿವಾರ್ಯತೆಗೆ ಅತೃಪ್ತ ಶಾಸಕರು ಸಿಲುಕಿದ್ದಾರೆ. ಕ್ಯಾಬಿನೆಟ್ ಪುನಾರಚನೆ ವೇಳೆ ಸಚಿವ ಸ್ಥಾನ ಕಳೆದುಕೊಂಡು ಸರ್ಕಾರ ಬೀಳಿಸುವ ಪಣ ತೊಟ್ಟಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಿನ್ನೆ ತಡರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ವಿಶೇಷ ಅಂದ್ರೆ ಈ ಬಾರಿ ಆಪರೇಷನ್ ಕಮಲ ನೇತೃತ್ವ ವಹಿಸಿಕೊಂಡಿದ್ದ ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ ಅಶ್ವಥ್ ನಾರಾಯಣ್ ಹಾಗೂ ರಮೇಶ್ ಜಾರಕಿಹೊಳಿ ಒಟ್ಟಿಗೆ ಆಗಮಿಸಿದರು. ಅತೃಪ್ತರ ಲೀಡರ್ ಆಗಿದ್ದ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ವಾಪಸ್ ಆದ ಬಳಿಕ ಎಲ್ಲರೂ ಒಬ್ಬೊಬ್ಬರೇ ಮಾಧ್ಯಮಗಳ ಎದುರು ಪ್ರತ್ಯಕ್ಷವಾಗ್ತಿದ್ದು, ನಾವು ರೆಬೆಲ್ ಶಾಸಕರೇ ಅಲ್ಲ ನಮ್ಮನ್ನು ಆ ಗ್ರೂಪಿಗೆ ಸೇರಿಸಬೇಡಿ ಎಂದು ಮನವಿ ಮಾಡ್ತಿದ್ದಾರೆ. ಮಧ್ಯರಾತ್ರಿ ರಮೇಶ್ ಜಾರಕಿಹೊಳಿ ಕಾರಿನಲ್ಲೇ ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ಗೆ ಎಂಟ್ರಿ ಕೊಟ್ಟಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ ಅವರು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ನಾನು ಯಾವತ್ತೂ ರೆಬೆಲ್ ಆಗಿರಲಿಲ್ಲ. ನನ್ನನ್ನು ಆ ಗುಂಪಿಗೆ ಸೇರಿಸಬೇಡಿ ನಾನು ಎಲ್ಲಿಯೂ ಹೋಗಿರಲಿಲ್ಲ. ನನ್ನ ಆರೋಗ್ಯದ ಸಮಸ್ಯೆಯಿಂದ ಕ್ಷೇತ್ರ ಬಿಟ್ಟು ಬರಲಿಕ್ಕೆ ಆಗಿರಲಿಲ್ಲ. ಅಷ್ಟೆ.. ಇದನ್ನು ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನನ್ನ ಗೈರು ಹಾಜರಿ ಬಗ್ಗೆ ಬೇರೆ ಅರ್ಥದಲ್ಲಿ ವ್ಯಾಖ್ಯಾನಿಸಲಾಗ್ತಿತ್ತು. ನಾನೂ ಯಾವತ್ತು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ ಹಿಂದೆಯೂ ದ್ರೋಹ ಬಗೆದಿರಲಿಲ್ಲ‌‌.‌ ಮುಂದೆಯೂ ಬಗೆಯೊದಿಲ್ಲ ಎಂದಿದ್ದಾರೆ.

ಅತ್ತ ಶಾಸಕರ ಭವನದಲ್ಲಿ ಅತೃಪ್ತ ಶಾಸಕ ಉಮೇಶ್ ಜಾಧವ್ ಪ್ರತ್ಯಕ್ಷರಾಗಿದ್ದು, ನಾನು ಯಾವುದೇ ಲೋಕಸಭಾ ಚುನಾವಣೆ ಸಿದ್ದತೆ ನಡೆಸಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದೇ. ನಾನು ಮುಂಬೈ ಹೋಗಿಲ್ಲ ಎಂದಿದ್ದಾರೆ. ಇನ್ನು ನಾಗೇಂದ್ರ ಕೂಡ ಇಂದು ಸದನಕ್ಕೆ ಹಾಜರಾಗುವ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಬಿ.ಎಸ್ ಯಡಿಯೂರಪ್ಪ ನಿನ್ನೆ ಸದನದಲ್ಲಿ ಸಂಪೂರ್ಣ ಆಡಿಯೋ ರಿಲೀಸ್ ಮಾಡಿದ್ರೆ ಒಪ್ಪಬಹುದಿತ್ತು.ಆದ್ರೆ ಕೆಲವು ಭಾಗಗಳನ್ನು ಮಾತ್ರ ಕಟ್ ಮಾಡಿ ಪೇಸ್ಟ್ ಮಾಡಿ ಜನರ ದಿಕ್ಕು ತಪ್ಪಿಸಲಾಗಿದೆ. ಸಂಪೂರ್ಣ ಆಡಿಯೋ ರಿಲೀಸ್ ಮಾಡಿ ಎಂದು ಒತ್ತಾಯ ಮಾಡಿದ್ರು. ಅದಕ್ಕೆ ಉತ್ತರ ಕೊಟ್ಟಿದ್ದ ಸಿಎಂ ಕುಮಾರಸ್ವಾಮಿ, ಸದ್ಯಕ್ಕೆ ಪ್ರಮುಖಾಂಶಗಳನ್ನು ಬಿಟ್ಟಿರೋದಕ್ಕೆ ತಡೆದುಕೊಳ್ಳಲು ಆಗ್ತಿಲ್ಲ. ಸಂಪೂರ್ಣ ಬಿಡುಗಡೆ ಆದ್ರೆ ಕಥೆ ಏನು ಎಂದು ಪ್ರಶ್ನಿಸಿದರು. ಬಳಿಕ ಮಾತನಾಡಿದ್ದ ಸಿಎಂ, ಸಂಪೂರ್ಣ ಆಡಿಯೋ ರಿಲೀಸ್ ಮಾಡೋಕು ಸಮಯ ಬರುತ್ತೆ, ರಿಲೀಸ್ ಮಾಡೋಣ ಎಂದಿದ್ರು. ನಿನ್ನೆ ಸದನದಲ್ಲಿ ಹೇಳಿದ ಮಾತಿನಂತೆ ಇವತ್ತು ಆಪರೇಷನ್ ಆಡಿಯೋದ ಸಂಪೂರ್ಣ ಕ್ಲಿಪಿಂಗ್ ಮಾಧ್ಯಮಗಳಿಗೆ ರಿಲೀಸ್ ಆಗಿದೆ. ಇದರಲ್ಲಿ ಸಾಕಷ್ಟು ಅಂಶಗಳು ಪತ್ತೆಯಾಗಿದ್ದು, ಕೋಟಿ ಕೋಟಿ ಹಣ ವ್ಯವಹಾರ ಮಾಡ್ತೊರೋದು ಯಾರು? ವಿಜಯೇಂದ್ರ ಹಣವನ್ನು ಹೇಗೆ ತಲುಪಿಸ್ತಾರೆ? ಸಚಿವ ಸ್ಥಾನ, ಶಾಸಕರನ್ನಾಗಿ ಆಯ್ಕೆ ಮಾಡೋದು. ದೇವೇಗೌಡರು ಹಾಗೂ ಕುಮಾರಸ್ವಾಮಿ ಹೋದ್ಮೇಲೆ ಜೆಡಿಎಸ್ ಎಲ್ಲಿರುತ್ತೆ ಎನ್ನುವ ಮಾತುಗಳೂ ಬಂದು ಹೋಗಿರೋದು ಹೊಲಸು ರಾಜಕೀಯದ ಬಗ್ಗೆ ಅಸಹ್ಯ ಹುಟ್ಟಿಸುವಂತಿದೆ. ಒಟ್ಟಾರೆ ಅತೃಪ್ತರು ವಾಪಸ್, ಸಂಪೂರ್ಣ ಆಡಿಯೋ ರಿಲೀಸ್ ಆಗಿದ್ದು, ಖೇಲ್ ಖತಂ ನಾಟಕ್ ಬಂದ್ ಎನ್ನುವ ಸ್ಥಿತಿಗೆ ಬಿಜೆಪಿ ತಲುಪಿದ್ದು, ಸಾಕಷ್ಟು ಸೆಕ್ಷನ್ ಅಡಿ ಕಾನೂನು ಎದುರಿಸುವ ಕೆಲಸ ಮಾಡಬೇಕಿದೆ.

Leave a Reply