ಪುಲ್ವಾಮ ದಾಳಿ ಮಾಡಿದವರು ಅಂದರ್..!?

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ CRPF ವಾಹನದ ಮೇಲೆ ದಾಳಿ ಮಾಡಿ 44ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣನಾದ ಉಗ್ರ ಸಾವನ್ನಪ್ಪಿದರೂ ಆತನಿಗೆ ಸಾಥ್ ನೀಡಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ 7 ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಆವಂತಿಪುರ ಸಮೀಪದಲ್ಲೇ 7 ಮಂದಿ ವಶಕ್ಕೆ ಪಡೆದಿದ್ದು, ದಾಳಿಯ ಯೋಜನೆ ರೂಪಿಸಿದ್ದು ಪಾಕಿಸ್ತಾನದ ನಾಗರಿಕ ಎನ್ನಲಾಗಿದ್ದು, ಇದೀಗ ಪಾಕಿಸ್ತಾನದ ಮಾಸ್ಟರ್ ಮೈಂಡ್ ಸೆರೆಗೆ ಕಾರ್ಯಾಚರಣೆ ಶುರುವಾಗಿದೆ. ಈತ ಪಾಕ್ ಮೂಲದ ಜೈಷ್ ಎ ಮಹಮ್ಮದ್ ಸಂಘಟನೆ ಸದಸ್ಯ ಅನ್ನೋದು ಕೂಡ ಖಚಿತವಾಗಿದೆ.

ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿರುವ ಈ ವ್ಯಕ್ತಿ, ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎನ್ನುವ ಅಂಶ ಬಹಿರಂಗವಾಗಿದೆ. ಜತೆಗೆ ಜೈಷ್ ಎ ಮಹಮ್ಮದ್ ಸಂಘಟನೆಯ ಇತರ ಸದಸ್ಯರಿಗಾಗಿಯೂ ತೀವ್ರ ಹುಡುಕಾಟ ನಡೆಸುತ್ತಿದ್ದೇವೆ ಎಂದು CRPF ಪ್ರಧಾನ ಕಚೇರಿ ಮೂಲಗಳೇ ಹೇಳಿಕೊಂಡಿವೆ

ಯೋಧರ ಗುರುತು ಪತ್ತೆಯಾಗಿದ್ದು ಹೇಗೆ..?

ಇನ್ನು ಉಗ್ರನ ದಾಳಿಯಲ್ಲಿ ಹತರಾದ 40ಕ್ಕೂ ಯೋಧರ ದೇಹ ಛಿದ್ರ ಛಿದ್ರವಾಗಿತ್ತು. ಸಾಮಾನ್ಯವಾಗಿ ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿತ್ತು. ಆದ್ರ‌ ಯೋಧರು ಪಾಕೆಟ್‌ನಲ್ಲಿ ಇಟ್ಟುಕೊಂಡಿದ್ದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇತರೆ ಗುರುತಿನ ಚೀಟಿ ಹಾಗೂ ರಜೆ ಅರ್ಜಿಗಳು ಗುರುತು ಪತ್ತೆ ಮಾಡಲು ನೆರವಿಗೆ ಬಂತು. ಇನ್ನು ಛಿದ್ರವಾಗಿದ್ದ ಅಂಗಾಂಗಗಳನ್ನು ವಾಚು, ಸೇರಿದಂತೆ ಬೇರೆ ಕೆಲವು ಗುರುತುಗಳ ಆಧಾರದಲ್ಲಿ ಪತ್ತೆ ಮಾಡಲಾಯ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ದಾಳಿಗೆ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹವನ್ನು ಪತ್ತೆ ಮಾಡಲು ಸ್ನೇಹಿತ ಯೋಧರರನ್ನು ಬಳಸಿಕೊಳ್ಳಲಾಯ್ತು. ಹೀಗಾಗಿಯೇ ಮೊದಲಿಗೆ ಹುತಾತ್ಮ ಯೋಧರ ಅಂಕಿ ಸಂಖ್ಯೆ ಘೋಷಣೆಗೂ ವಿಳಂಬವಾಯ್ತು ಎನ್ನಲಾಗಿದೆ.

ಸರ್ವಪಕ್ಷ ಸಭೆ 

ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಪುಲ್ವಾಮ ದಾಳಿ ಬಗ್ಗೆ ಚರ್ಚಿಸಿ ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿಲುವು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಈ ಹಿಂದೆ ಪಠಾಣ್​ ಕೋಟ್​, ಉರಿ, ನಗ್ರೊತಾದಲ್ಲಿ ಇದೇ ರೀತಿಯ ದಾಳಿ ನಡೆದರೂ ಪ್ರಧಾನಿ ಮೋದಿ ಸರ್ವಪಕ್ಷ ಸಭೆ ಕರೆದಿರಲಿಲ್ಲ. ಇದೀಗ ಪುಲ್ವಾಮಾ ದಾಳಿಯಿಂದ ಆತಂಕಕ್ಕೆ ಒಳಗಾಗಿರು ಕೇಂದ್ರ ಸರ್ಕಾರ, ಮೊದಲ ಬಾರಿಗೆ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದಾರೆ.

ಈ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲು ಪ್ರತಿಪಕ್ಷಗಳು ತೀರ್ಮಾನಿಸಿದವು.

Leave a Reply