ಪುಲ್ವಾಮ ಮಾಸ್ಟರ್ ಮೈಂಡ್ ಮಟಾಶ್! ಇದು ಪ್ರತೀಕಾರದ ಮುನ್ನುಡಿ!

ಡಿಜಿಟಲ್ ಕನ್ನಡ ಟೀಮ್:

ಪುಲ್ವಾಮದಲ್ಲಿ ಜೈಷ್ ಎ ಮೊಹಮದ್ ಉಗ್ರನ ಆತ್ಮಾಹುತಿ ಬಾಂಬ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳಲು ಸೇನೆ ಶುರು ಮಾಡಿದೆ. ಅದರ ಮೊದಲ ಅಧ್ಯಾಯವಾಗಿ ಸೇನೆ ಸೋಮವಾರ ಈ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ರಶೀದ್ ಘಾಝಿ ಅಲಿಯಾಸ್ ಕಮ್ರಾನ್ ಹಾಗೂ ಹಿಲಾಲ್ ನನ್ನು ಸೇನೆ ಹೊಡೆದುರುಳಿಸಿದೆ.

ಸೋಮವಾರ ಪುಲ್ವಾಮದ ಪಿಂಗ್ಲಾ ಪ್ರದೇಶದಲ್ಲಿ ಉಗ್ರರು ಅಡಗಿ ಕೂತಿರುವ ಮಾಹಿತಿ ಪಡೆದ ಸೇನೆ ಬೆಳಗ್ಗಿನ ಜಾವ 3 ಗಂಟೆ ಯಿಂದ ಕಾರ್ಯಾಚರಣೆ ಆರಂಭಿಸಿತು. ಈ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಹತ್ಯೆಯಾದ ಉಗ್ರ ಘಾಝಿ ಪಾಕಿಸ್ತಾನದ ಪ್ರಜೆಯಾಗಿದ್ದು, ಈತ ಜೈಷ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಆಪ್ತ ಎಂದು ಹೇಳಲಾಗಿದೆ. ಈತ ಅಫ್ಘಾನಿಸ್ತಾನದ ಯುದ್ಧ ನಿಪುಣ ಎಂದು ಬಿಂಬಿತವಾಗಿದ್ದ. ಈತ ಐಇಡಿ ಬಾಂಬ್ ತಜ್ಞನಾಗಿದ್ದ. ಈತನ ಜತೆ ಹಿಲಾಲ್ ಎಂಬ ಸ್ಥಳೀಯ ಉಗ್ರನನ್ನು ಸೇನೆ ಹತ್ಯೆ ಮಾಡಿದೆ.

ಇನ್ನು ಆರು ಉಗ್ರರು ಸ್ಥಳೀಯ ಕಟ್ಟಡದಲ್ಲಿ ಅವಿತು ಕುಳಿತಿದ್ದು, ಇವರ ಬೇಟೆಗೆ ಸೇನೆ ಕಾರ್ಯಾಚರಣೆ ಮುಂದುವರಿಸಿದೆ.

Leave a Reply