ಕುಲಭೂಷಣ್ ಜಾಧವ್ ಪ್ರಕರಣ ವಿಚಾರಣೆಯಲ್ಲಿ ಭಾರತದ ವಾದ ಹೇಗಿತ್ತು?

ಡಿಜಿಟಲ್ ಕನ್ನಡ ಟೀಮ್:

ಭಾರತದ ಮಾಜಿ ವಾಯುಪಡೆ ಸಿಬ್ಬಂದಿ ಕುಲಭೂಷಣ್ ಜಾಧವ್ ಅವರನ್ನು ಭಯೋತ್ಪಾದಕ ಎಂದು ಬಿಂಬಿಸಿ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನ ಮಿಲಿಟರಿ ಕೋರ್ಟ್ ಅಂತಾರಾಷ್ಟ್ರೀಯ ಮಟ್ಟದ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದು ಭಾರತ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಆದೇಶ ನೀಡಿದೆ.

ಹಗೆಯಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆ ವೇಳೆ ಭಾರತ ತನ್ನ ವಾದ ಮಂಡಿಸಿ ಪಾಕಿಸ್ತಾನದ ಕ್ರಮವನ್ನು ಟೀಕಿಸಿತು. ಈ ವೇಳೆ ಭಾರತ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ ಹೆಳಿದ್ದಿಷ್ಟು…

‘ಪಾಕಿಸ್ತಾನ ಮಿಲಿಟರಿ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಪರಿಶೀಲಿಸುವಂತೆ ಸೂಚಿಸುವ ಅಧಿಕಾರವಿಲ್ಲ. ಪಾಕ್ ಮಿಲಿಟರಿ ನ್ಯಾಯಾಲಯದ ಕ್ರಮ ವಿಯೆನ್ನಾ ಒಪ್ಪಂದದ 36ನೇ ಪರಿಚ್ಛೇಧವನ್ನು ಉಲ್ಲಂಘಿಸಿದೆ. ಹೀಗಾಗಿ ಭಾರತವು ಜಾಧವ್ ಗೆ ವಿನಾಯಿತಿ ನೀಡಿ ಬಿಡುಗಡೆ ಮಾಡಬೇಕು.

ಪಾಕಿಸ್ತಾನದಲ್ಲಿ ಜಾಧವ್ ಗೆ ನ್ಯಾಯ ಸಿಗಲು ಅವಕಾಶವನ್ನೇ ನೀಡಿಲ್ಲ. ಭಾರತದ ಪ್ರಜೆಯನ್ನು ವಶಕ್ಕೆ ಪಡೆದ ಪಾಕಿಸ್ತಾನ ಆತನನ್ನು ಸಾರ್ವಜನಿಕವಾಗಿ ಭಯೋತ್ಪಾದಕ ಎಂದು ಬಿಂಬಿಸಿದೆ.’

ಪಾಕ್ ವಕೀಲರಿಗೆ ನಮಸ್ಕಾರ!

ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ಆರಂಭವಾಗುವ ಮುನ್ನ ಭಾರತ ಸರ್ಕಾರದ ಏಜೆಂಟ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ದೀಪಕ್ ಮಿತ್ತಲ್ ಹಾಗೂ ಪಾಕಿಸ್ತಾನ ಪರ ವಕೀಲರಾದ ಅನ್ವರ್ ಮನ್ಸೂರ್ ಖಾನ್ ಪರಸ್ಪರ ಎದುರಾದಾಗ ಮನ್ಸೂರ್ ಅವರು ದೀಪಕ್ ಅವರತ್ತ ಕೈಚಾಚಿ ಹಸ್ತ ಲಾಘಾವಕ್ಕೆ ಮುಂದಾದರು. ಈ ವೇಳೆ ದೀಪಕ್ ಅವರು ಕೈ ಮುಗಿದು ನಮಸ್ಕರಿಸಿದರು. ಇದು ಪಾಕ್ ವಕೀಲರಿಗೆ ಮುಜುಗರಕ್ಕೆ ಕಾರಣವಾಯಿತು.

Leave a Reply